Fes -- - tour - - - - - - - 44. Here are : ಸ, ಚಿಂದ್ರಿಕ. ದಲ್ಲಿ ವಿಹರಿಸುತ್ತಿದ್ದರು. ಬೇರೆ ಮರು-ನಾಲ್ಕು ಜನರು ಪುಷ್ಕರಿ ಣಿಯ ದಂಡೆಯ ಭದ್ರವಾದ ಕಲ್ಲೊಡ್ಡಿನ ಅಗಲಾದ ಮೇಲ್ಬಾಗದಲ್ಲಿ ಕುಳಿತು ಕೆಲವುಹೊತ್ತು ಸರೋವರದ ನೀರಿನಕಡೆಗೂ, ಕೆಲವು ಹೊತ್ತು ಅಸ್ತಂಗತನಾಗುತ್ತಿದ್ದ ಸೂರ್ಯನ ಕಡೆಗೂ ನೋಡುತ್ತ, ಏನೇನೋ ಮಾತಾಡುತ್ತ ಮನಸ್ಸಿನ ಇಷ್ಟಾರ್ಥವನ್ನು ಪೂರೈಸಿಕೊಳ್ಳುತ್ತಿದ್ದರು, ಒಟ್ಟಿನ ಮೇಲೆ ಕುಳಿತ ಜನರು ನಿಜವಾಗಿ ದಂಡಾಳುಗ ಳಾಗಿದ್ದಿಲ್ಲ. ಅವರ ವಸ್ಯ-ಪ್ರಾವಣಗಳಿಂದ ಅವರು ಸೈನ್ಯ ದೊಳಗಿನ ಶಿಪಾಯಿಗಳ (ಸೈನಿಕರಿಗಿಂತ ಕಡಿಮೆ ತರಗತಿಯವರು) ಹಾಗೆ ತೋರುತ್ತಿದ್ದರು. ಯುದ್ಧ ನಡೆದಾಗ ತಮ್ಮ ಶಿಬಿರ ಬಿಟ್ಟು ಹೊರಗೆ ಯಾವ ಕೆಲಸಕ್ಕೆ ಹೋಗಬೇಕಾದರೂ ಪ್ರತಿಯೊಬ್ಬನು ಸೈನಿ ಕರಂತೆಯೇ ಪೋಷಾಕು ಹಾಕಿಕೊಂಡು ಶಸ್ತ್ರಾಸ್ತ್ರಗಳಿಂದ ಸಜ್ಜಾಗಿ ಹೊರಡಬೇಕೆಂಬ ಕಠಿಣ ನಿಯಮವಿರುವದರಿಂದ ಆ ಶಿಪಾಯಿಗಳ ಆಗ ಸೈನಿಕರ ವೇಷದಿಂದಲೇ ವನವಿಹಾರಕ್ಕೆ ಹೊರಟಿದ್ದರು. ಆ ಪರಿಚಾರಕ ಶಿಪಾಯಿಗಳಿಗೆ ಆ ಪೋಷಾಕು ಚೆನ್ನಾಗಿ ಒಪ್ಪುತ್ತಿದ್ದರೂ, ಅವರಲ್ಲಿ ಒಬ್ಬನಿಗೆ ಮಾತ್ರ ಅದು ಶೋಭಿಸುತ್ತಿದ್ದಿಲ್ಲ. ಅವನೇ ನಮ್ಮ ವಾಚಕರ ಪರಿಚಿತಳಾದ ರಂಗಿಣೀ ಸುಂದರಿಯ ಸತಿಯು. ಅವನು ರಾಜಸಭೆಯಲ್ಲಿ ಶ್ರೇಷ್ಟನಾದ ಕವಿಯ, ಪ್ರಸ್ತುತ ಯುದ್ದದ ಸೈನಿಕರಲ್ಲಿ ಪ್ರಖ್ಯಾತನಾದ ಒಬ್ಬ ಮುಂದಾಳುವೂ, ನೂತನ ಅಧಿ ಕಾರಿಯೂ ಆಗಿದ್ದನು. ರ್ಗಕೀಶದೇವನು ಆ ನೂತನ ಅಧಿಕಾರಿಯ ಗಾನಕ್ಕೆ ವಿಶೇಷವಾಗಿ ಲುಬ್ಬನಾಗಿದ್ದದರಿಂದ ಆತನ ಮಾನ-ಮರ್ಯಾ ದೆಗಳಿಗೆ ಕೊರತೆಯಿದ್ದಿಲ್ಲ. ಅವನನ್ನು ಸಂತುಷ್ಟಗೊಳಿಸುವ ಕುರಿತು ಆ ದಿನಾಜಪುರದ ಆಬಾಲವೃದ್ಧರಾದ ಎಲ್ಲ ಪ್ರಜೆಗಳ ತತ್ಪರರಾಗಿ ರುತ್ತಿದ್ದರು. ಅವನ ವಯಸ್ಸು ಸಾಲ್ವತ್ರೆದು , ಅವನಿಗೆ ಇಷ್ಟ ರಲ್ಲಿ ನಾಲ್ಕು ವಿವಾಹಗಳಾಗಿದ್ದವು. ತಂದೆ-ತಾಯಿಗಳಿರಲಿಕ್ಕೇ ಅವ
ಪುಟ:ಶಕ್ತಿಮಾಯಿ.djvu/೧೦೭
ಗೋಚರ