ಪುಟ:ಶಕ್ತಿಮಾಯಿ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ, ಚಂದ್ರಿಕೆ te= ದರೆ, ದೈವಯೋಗದಿಂದ ವ್ಯರ್ಥಮನೋರಧಳಾದ ಮಹಾರಾಣಿ ಯು ಅ೦ತಃಪ್ರರದ ಕಿಟಕಿಯೊಳಗಿಂದ ಪುನಃಪುನಃ ಹೊರಗೆ ಹಣಿ ಕಿನೋಡಿ ಮನಸ್ಸಿನ ಆವೇಶವನ್ನು ಕಳಕೊಳ್ಳಲು ಯತ್ನಿ ಸುವಂತೆ ಲೋ, ಅಥವಾ ಯಾವದೊಂದು ಕಿಡಿಗೇಡಿ ಕೂಸು ಕೂತಲ್ಲಿ ಕೂಡದೆ ನಿಂತಲ್ಲಿ ನಿಲ್ಲದೆ ಅತ್ತಿಂದಿತ್ತ ಇತ್ತಿಂದ ಸುಮ್ಮನೆ ಎಡ ತಾಕುವಂತೆ C ಭಾಸವಾಗುತ್ತಿತ್ತು. ಬಾಲಿಕೆಯರಿಬ್ಬರು ಬಕುಲವೃಕ್ಷದ ಬುಡದಲ್ಲಿ ನಿಂತು ಜನ ವಿರಹಿತವಾದ ಆ ನೌಕೆಯನ್ನು ನೋಡಿ ಬಿನ್ನ ಮನಸ್ಕರಾದರು. ಆಗ ಅವರಲ್ಲೊಬ್ಬಳು ಅಕ್ಕಾ ಇಲ್ಲಿಗೆ ಲಾಜಕುಮಲನು ಬಂದಿ ದಾನೆಯೇ? ಎಂದು ತೊದಲು ನುಡಿಯಿಂದ ಪ್ರಶ್ನೆ ಮಾಡಿದಳು. ಹೀಗೆ ಮಾತಾಡಿದ ಹುಡುಗಿಯು ಎಂಟು ವರ್ಷದವಳು. ಆದರೂ ಆಶೆಂಯಿ ದುಮಾತುಗಳನ್ನೇ ಆಡುತ್ತಿದ್ದಳು. ಆಗ ಆಕೆ ಯ ಆ ಬಾಲರ್ಘಾಯು, ಆಕೆಗಿಂತಲೂ ವಯಸ್ಸು-ರೂಪ ಮುಂ ತಾದವುಗಳಿಂದ ಶ್ರೇಷ್ಟಳಾದ ಇನ್ನೊಬ್ಬ ಕನ್ನೆಗೆ ರುಚಿಸಲಿಲ್ಲ. ನಿ ರೂಪದೆಯ ಮಾತನ್ನು ಕೇಳಿದಾಗೆಲ್ಲ ಶಕ್ತಿಮಯಿಗೆ ನಗೆಬರುತ್ತಿತ್ತು, ಅದರಿಂದ ಆಕೆಯು ನಿರೂಪಮೆಗೆ ಮೋರೆ ಸೊಟ್ಟ ಸೊಟ್ಟಮಾಡಿ ಆಣ ಕಿಸಹತ್ತುತ್ತಿದ್ದಳು, ಆದ್ದರಿಂದ ನಾಚಿಕೊಂಡು ನಿರೂಪಮೆಯು ಮಾತೇ ಆಡುತ್ತಿರಲಿಲ್ಲ. ಆದರೆ ಶಕ್ತಿಯು ಹೋದಲ್ಲಿ-ಬಂದಲ್ಲಿ ಕೇವಲ ನೆಳಲಿ ನಂತ ನಿರೂಪಮೆಯು ಹಿಂಬಾಲಿಸತಕ್ಕವಳೇ, ಅವರಿಬ್ಬರನ್ನು ಒಂದು ಆತಶಕ್ತಿಯು (ಪ್ರೇಮವು) ಬಿಗಿದಿತ್ತು. ಅಂತೇ ಶಕ್ತಿಯನ್ನು ಬಿಟ್ಟು ನಿರೂಪಮೆಯ, ನಿರೂಪಮೆಯನ್ನು ಬಿಟ್ಟು ಶಕ್ತಿಯ ಒಂದು ಕ್ಷಣ ಸಹ ಅಗಲಿ ಇರುತ್ತಿರಲಿಲ್ಲ. ಅವರಿಬ್ಬರು ಪರಸ್ಪರರನ್ನು ಹೀಗೆ ಅಬಂಡವಾಗಿ ಪ್ರೀತಿಸುವಂತೆ ದಿನಾಜವರದ ಯುವರಾಜ ನಾದ ಗಣೇಶದೇವನಲ್ಲಿಯೂ ಅವರೀರ್ವರ ಪ್ರೇಮವು ವಿಶೇಷವಾಗಿ