ವಿಷಯಕ್ಕೆ ಹೋಗು

ಪುಟ:ಶಕ್ತಿಮಾಯಿ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧o೨ ಸ ಚಂದ್ರಿಕೆ ಬ್ರಾಹ್ಮಣ-ತಂಗೀ, ಈ ಹಾಡನ್ನು ನಾನೇ ರಚಿಸಿರುವೆನು, ಹಾಡುಗಳನ್ನು ಇಷ್ಟು ಲಕ್ಷ್ಮಗೊಟ್ಟು ಕೇಳುವ ನಿನಗೆ ಚೆನ್ನಾಗಿ ಪಾ ಡಲಿಕ್ಕೆ ಬರುವಂತೆ ತೋರುತ್ತದೆ. ನಿಜವೋ? | ಭಿಕ್ಷುಕಿ-ಬರುತ್ತದೆ; ಆದರೆ ಅಷ್ಟೊಂದು ಚನ್ನಾಗಿ ಬರು ವದಿಲ್ಲ. ಭಿಕ್ಷೆ ಬೇಡುವ ಸಾಧನಕ್ಕಾಗಿ ನಾನು ಒಂದೆರಡು ಹರಳು ಮುರುಕು ಹಾಡುಗಳನ್ನು ಕಲಿತಿದ್ದೇನೆ. ಬ್ರಾಹ್ಮಣ-ಹಾಗಾದರೆ ಅವುಗಳಲ್ಲೊಂದನ್ನು ಹಾಡು ನೋಡೋಣ, ನಾಚಬೇಡ, ನಾನು ನಿನ್ನ ತಂದೆಗೆ ಸಮಾನನೆಂದು ತಿಳಿ, ಹೂ, ಬೇಗ ಅನ್ನು, ನಂತರ ಯುವತಿಯು ಮಂದಸ್ಮಿತಳಾಗಿ-ಆ ಮಾತು ಸತ್ಯವು, ಆದರೆ ತಮ್ಮಂಥ ಪ್ರಸಿದ್ಧ ಗವಾಯಿಗಳ ಮುಂದೆ ನಾನು ಹಾಡು ವದೆಂದರೆ ಎಂಥ ಅಗೌರವವು? ಆದರೂ ತಮ್ಮಂಥ ಹಿರಿಯರು ಹೇ ಳುತ್ತಿರಲಿಕ್ಕೆ ನಾನಾದರೂ ಇಲ್ಲದ ಕಲ್ಪನೆಗಳನ್ನು ಮಾಡುತ್ತ ಏಕೆ ಕಾಲಕಳೆಯಬೇಕು. ಇಗೋ ಹಾಡುವೆನು, ಎಂದಂದು ಹೀಗೆ ಹಾ ಶಿದಳು: (ಧಾಟಿ ವೈಶಾಖ ಮಾಸ ವಸಂತಕಾಲ' ಎಂಬಂತೆ ವೈಶಾಖ ಮಾಸ ಶ್ರೇಷ್ಟ ಮಾಗಿ, ಋತುಗಳೀಶತಾ| ಭಾಸುರಾಂಗ ಪೂರ್ಣ ಚಂದ್ರ, ನಿಶೆಯು ಶೋಭಿತಾ ||ಪಲ್ಲ|| ಇಂಥ ರಾತ್ರಿ ಪಶುವು ಕೂಡ, - ಮೋದ ಪೊಂಡ್ವುದು! ಚಿಂತೆಗಳೆದು ಅಂತರಂಗದಿ, ಸೌಖ್ಯನೀವುದು n