ಪುಟ:ಶಕ್ತಿಮಾಯಿ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ. ಇಂತಿ ನ್ನು ಕುರಿತು ಹೇಳು, ನೀನಾವ ಗುಪ್ತ ಸುದ್ದಿಯನ್ನು ಹೇಳಬಂದಿ ರುವೆಯೋ, ಅದನ್ನು ಶೀಘ್ರವಾಗಿ ಹೇಳು. ಇಲ್ಲಿ ಮತ್ತಾರೂ ಇರ ದ್ದರಿಂದ ನೀನು ಅದನ್ನು ಹೇಳಲಿಕ್ಕೆ ಅನುಮಾನಿಸಬೇಡ' ಎಂದನು. ಶಕ್ತಿಯು ಹೃದಯದೊಳಗಿನ ಅಸೂಯೆಯನ್ನು ಬದಿಗಿರಿಸುತ್ತ ಸಾವಕಾಶವಾಗಿ ನುಡಿದಳೇನಂದರೆ ಇಲ್ಲಿ ಹೇಳಲಾರೆನು, ಪುಷ್ಕರಿ ಣಿಯ ತೀರದಲ್ಲಿ ಹೇಳುವೆನು. ಎ೦ದವಳೆ, ರಾಜನು ತನ್ನನ್ನು ಒಂ ಬಾಲಿಸಿ ಬರುವನೋ ಇಲ್ಲವೋ ಎಂಬದನ್ನು ಕೂಡ ಲಕ್ಷ್ಯಕ್ಕೆ ತರದೆ, ಅಲ್ಲಿಂದ ನಡೆದು, ರಾಜರು - ವಾತಾಪಿ ಸುಮ್ಮನೆ ಆಕೆಯ ಬೆನ್ನು ಹತ್ತಿದನು. ರಮ :: ದು ದಂಗೆ ಬಂದು ತಲೆ ಯ ಮೇಲಿನ ಸೆರಗನ್ನು ತೆಗೆದು ಚಂದ್ರಮನ ಕಡೆಗೆ ಮೋರೆ ತಿರುಗಿಸಿ ನಿಂತಳು. ಚಂದ್ರನು ಆಕಾಶದಿಂದ ಪತನವಾಗಿ ಭೂಮಿಯ ಮೇಲೆ ಖಂಡವಿಬಂಡವಾಗಿಬಿದ್ದಿದ್ದರೂ ವಿಸ್ಮಿತನಾಗದಷ್ಟು ಗಣೇಶರೇವನು ಆ ಭಿಕ್ಷುಕಿಯ (ಶಕ್ತಿವಹಿಯ) ಮೊಗದನ್ನು ಕಂಡು ಹಕ್ಕಿ ತನಾದನು. ಆಗ ಅವನು ಚಿತ್ರದೊಳಗಿನ ಗೊಂಬೆಯಂತೆ ಮುಗ್ಧ ನಾಗಿ, ಉತ್ತರ ಕ್ಷಣದಲ್ಲಿ ಸೇತನಗೊಂಡನು. ಕೂಡಲೆ ಅವನು ತುಸ ಸರಿದು ನಿಂತು ತಿರಸ್ಕಾರ ಸ್ವರದಿಂದ ಯವ, ನೀನು ಯಾರು? ಎಂದು ಕೇಳಿದನು. ಈಗ ಶಕ್ತಿಮಯಿಯು ನಿಜವಾಗಿಯೇ ಯ ದನಿಯಾಗಿದ್ದಳು. ಆದರೂ ಗಣೇಶದೇವನ ಆ ಪ್ರಶ್ನೆಯನ್ನು ಕೇಳಿ ಆಕೆಯ ತಲೆಯು ತಿ ರುಗಹತ್ತಿತು; ಅಸಹ್ನ, ತಿರಸ್ಕಾರದ ಆವೇಗದಿಂದ ಅವಳ ಮೈನಡು ಗಹತ್ತಿತು. ಆಗ ಅವಳು ಅದನ್ನು ಸಾಮಸಿಕೊಂಡು ಸೆಟೆದು ನಿಂತು-ರಾಜಕಮಾರ, ಹೆಸರಿನಿಂದ ಮಾತ್ರ ನಾನು ಯವನಿಯಾಗಿ ರುವದು ಸಷ್ಟವು. ಆದರೆ ನಾನು ಇನ್ನೂ ಅವನ ಶಯಾ ಭಾಗಿನಿಯಾ ಗಿರುವದಿಲ್ಲ. ನನ್ನ ಹೃದಯ, ಮನಸ್ಸು ಹಾಗು ದೇಹ ಇವುಗಳು