ಪುಟ:ಶಕ್ತಿಮಾಯಿ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*

  • *
  • *

++ ++ ++ + ++++ ೧ ಕೆ. ಚಂದ್ರಿಕ, ಯ ಬಗ್ಗೆ ಮಾತಾಡುವದೆಂದರೆ ವಿಶ್ವಾಸಘಾತವಲ್ಲದೆ ಮತ್ತೇನು? ಬಾದಶಹ ಮೂರ್ಖರ ಕೂಡ ಮೂರ್ಖತನದಿಂದ ನಡೆಯುವ ದರಿಂದ ವಿಶ್ವಾಸಘಾತವ ಮಾಡಿದ ಹಾಗಾಗುವದಿಲ್ಲ. ಇದರಂತೆ ಮಾಡುವದೇ ನಿನ್ನಂಥ ಶಠನಿಗೆ ದಂಡೋಪಾಯವು, ಅಜೀಮಖಾ, ಈ ಉನ್ನತ್ರನನ್ನು ಈಗಲೆ ಸೆರೆ ಹಿಡಿ, ಎಂದು ಆಜ್ಞಾಪಿಸಿದನು. ಬಾದಶಹನು ಇಷ್ಟು ದಾರಿ ಬಿಟ್ಟು ನಡೆದಾನೆಂಬದು ಯಾವ ಸಭಿಕನೂ ಊಹಿಸಿರಲಿಲ್ಲ. ಅದರಿಂದ ಅವನ ಆ ದುರ್ಭಾಷಣ ವನ್ನು ಕೇಳಿ ಅವರು ವಿಸ್ಮಯಚಕಿತರಾದರು. ಆಜಮಖಾನನು ಬಾದಶಹನ ಆಜ್ಞೆಯನ್ನು ಪಾಲಿಸಹೋಗಲಿಲ್ಲ. ಅವನು ತನ್ನ ಸ್ಥಳದಲ್ಲಿಯೇ ನಿಂತು ವಿಸ್ಮಿತ ನೇತ್ರಗಳಿಂದ ಬಾದಶಹನ ಕಡೆಗೆ ನೋ ಡತೊಡಗಿದನು. ತನ್ನ ಆಶ್ವಾಸನದ ಪ್ರಕಾರ ಗಣೇಶದೇವನು ಸುಲ್ತಾ ನನ ದರ್ಬಾರಕ್ಕೆ ಬಂದಿರಲು, ತಾನು ಅವನನ್ನು ಬಂಧಿಸುವದು ಅನ್ಯಾ ಯವಲ್ಲವೆ! ಎಂಬ ಆಲೋಚನೆಯಿಂದ ಅವನ ಮನಸ್ಸು ಅತಿ ಅಸ್ಥಿರ ವಾಯಿತು; ಹಾಗು ಅದು ಬಾದಶಹನ ಆ ಅನ್ಯಾಯವನ್ನು ಸಹಿಸಲಾ ರದಾಯಿತು. ಈ ಸ್ಥಿತಿಯಲ್ಲಿ ಆಜೀಮಖಾನನು ಬಹಳ ಹೊತ್ತಿನ ವರೆಗೆ ನಿಲ್ಲದೆ 'ಜಹಂಪನಾ, ತಮ್ಮ ಅಪ್ಪಣೆಯ ಪ್ರಕಾರ ಈ ಗಣೇಶದೇವನಿಗೆ ನಾನು ನಿರ್ಭಯದ ಬಗ್ಗೆ ವಚನ ಕೊಟ್ಟು ಈತನನ್ನು ಇಲ್ಲಿಗೆ ಕರೆತಂದಿರುವೆನು. ತಾವು ಈಗ ವಿಶ್ವಾಸಭಂಗವನ್ನು ಮಾಡಿ ದರೆ ತಮ್ಮ ಸುಖ್ಯಾತಿಗೆ ಕಲಂಕವುಂಟಾದೀತು. ಅಲ್ಲದೆ ಇನ್ನು ಮುಂದೆ ಯಾರೂ ತಮ್ಮ ಮಾತಿನಲ್ಲಿ ವಿಶ್ವಾಸವಿಡಲಿಕ್ಕಿಲ್ಲ ಎಂದನು. . ಬಾದಶಹ-ಸುಮ್ಮನಿರು, ನಾಚಿಕೆಗೇಡಿ! ಕರೀಮ ಉದ್ದಿನ ಇಂದಿನಿಂದ ನೀನೇ ಸೇನಾಪತಿಯು, ನಾಡಿಕೆಗೇಡಿಯದ ಈ ಆಜೀ ಮಖಾನನನ್ನೂ, ವಿದ್ರೋಹಿಯಾದ ಗಣೇಶದೇವನನ್ನೂ ಕಡಲೆ ಕೈ ದುಮಾಡು. ಎಷ್ಟೋ ದಿನಗಳ ಹಿಂದೆಯೇ ಇವರಿಗೆ ಈ ಶಿಕ್ಷೆ ಕೊಡ