ಪುಟ:ಶಕ್ತಿಮಾಯಿ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(9) ಕ. ಚಂದ್ರಿಕೆ ದೊಳಗಿನ ರಕ್ತವು ಈಗ ಒಮ್ಮೆಲೆ ಕಾದು ಸುಡಹತ್ತಿತು. ಬಳಿಕ ಅವನು ಉತ್ತೇಜಿತಸ್ವರದಿಂದ_“ಯಾರೂ ಇಲ್ಲವೆ? ಎಲ್ಲರೂ ಹೊರಟು ಹೋ ಗಿದ್ದಾರೆಯೇ? ಒಳ್ಳೇದು, ಹಾಗೆಯೇ ಆಗಲಿ; ನಡೆಯಿರಿ, ನಾನೇ ಬರು ವನು. ಇನ್ನು ನಾನೇ ನಿಮ್ಮ ಸೇನಾಪತಿಯು, ಎಂದು ನುಡಿದವ ನೇ ಟೊಂಕದೊಳಗಿನ ಖಡ್ಗವನ್ನು ಹಿರಿದು ಕೈಯಲ್ಲಿ ಹಿಡಿದು ಆ ಸೈನಿಕರನ್ನು ಹಿಂಬಾಲಿಸಿ ನಡೆದನು. ಬಾದಶಹನ ಮರ್ಖತನದ ಬಗ್ಗೆ ಸಭಿಕರು ಎಷ್ಟು ದುರ್ಭಾ ವನೆಯುಳ್ಳವರಾಗಿದ್ದರೂ, ಆತನ ಈ ಕಡು ವಿಪನ್ನಾ ವಸ್ಥೆಯನ್ನೂ, ಅವನ ಸ್ವಂತದ ಶೌರ್ಯ ಸಾಹಸಗಳನ್ನೂ ಕಂಡು ಅವರೆಲ್ಲರೂ ಶಸ್ಸಾ ಸ್ತ್ರಗಳಿಂದ ಸಜ್ಜಾಗಿ_ಸುಲ್ತಾನಕೀ ಜಯ! ಬಾದಶಹಕೀ ಜಯ!!ಎಂದು ಉತ್ತೇಜಿತ ದನಿಯಿಂದ ಗರ್ಜಿಸುತ್ತ ಅವನನ್ನು ಹಿಂಬಾಲಿಸಿದರು. ಕೂಡಲೆ ಉಭಯ ಪಕ್ಷಗಳಲ್ಲಿ ಘನಘೋರವಾ ದ ಯುದ್ಧಕ್ಕೆ ಆರಂಭವಾಯಿತು. ಹೊತ್ತು ಮುಣುಗುವಷ್ಟರಲ್ಲಿ ಬಾದಶಹನ ಕಡೆಯವರು ಒಳ್ಳೆ ಆವೇಶದಿಂದ ಕಾದಿ, ಗಾಯನು ದ್ವೀನನನ್ನು ಬಹಳ ಮಟ್ಟಿಗೆ ಹಿಮ್ಮೆಟ್ಟಿಸಿದರು. ಮರುದಿನ ಬೆಳಿಗ್ಗೆ ಆ ಪಿತಾ-ಪುತ್ರರು ಎದುರಾ ಎದುರು ನಿಂತು ಕಾದಹತ್ತಿದರು. ಅವರ ಈ ಘೋರಯುದ್ದಕ್ಕೆ ರೂಪವತಿಯಾದ ಒಬ್ಬ ಯುವತಿಯೇ-ಶಕ್ತಿ ಮಯಿಯೇ-ಕಾರಣಳಾಗಿದ್ದಳೆಂಬದು ನಮ್ಮ ವಾಚಕರಿಗರಿಯಾದ ಸಂ ಗತಿಯಲ್ಲ. ಹೊನ್ನು-ಹೆಣ್ಣು-ಮಣ್ಣು ಇವುಗಳ ಲೋಭದಿಂದ ಜಗತ್ತಿ ನಲ್ಲಿ ಎಂಥೆಂಥ ಅಘಟಿತ ಘಟನೆಗಳಾಗುತ್ತಿರುತ್ತವೆಂಬದಕ್ಕೆ ಪ್ರಸ್ತುತದ ನಮ್ಮ ಕಥಾನಕವೂ ಒಂದು ಉದಾಹರಣವಾಗಿರುತ್ತದೆ. ಇರಲಿ, ಆ ತಂದೆ ಮಕ್ಕಳ ಯದ್ಧದ ಪರಿಣಾಮವೇನಾಯಿತೆಂಬದು ಇತಿಹಾಸಜ್ಞರಾದವರಿಗೆ ತಿಳಿದ ಸಂಗತಿಯಾಗಿರುತ್ತದೆ. ಹೀಗೆ ಅವರು ಮರು ದಿವಸಗಳ ವರೆಗೆ ಒಂದೇ ಸವನೆ ಕಾಡುತ್ತಿರಲು, ಮರ