ಪುಟ:ಶಕ್ತಿಮಾಯಿ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ. 9. ಎತ್ತಣಿಂದಲೋ ರಕ್ತ ವಸ್ತ್ರಧಾರಿಯಾದ ತೀರ ಚಿಕ್ಕ ವಯಸ್ಸಿನ ಒಬ್ಬ ಫಕೀರನು ಅಲ್ಲಿಗೆ ಬಂದನು. ಅವನು ನೋಡುವವರಿಗೆ ಎಡ ಹುಡು ಗನಂತೆ ತೋರುತ್ತಿದ್ದರೂ, ಅವನ ಮುಖಲಕ್ಷಣಗಳಿಂದ ಅವನು ಯಾವನೊಬ್ಬ ಮಹಾ ಯೋಗಿಯಾಗಲಿ, ರಾಜವಂಶಿಕನಾಗಲಿ ಇರ ಬಹುದೆಂಬದು ತಟ್ಟನೆ ಒಡೆದು ಕಾಣದೆ ಇರುತ್ತಿರಲಿಲ್ಲ. ಅವ ನು ಧರಿಸಿದ್ದ ವೇಷ-ಭೂಷಣಗಳು ಅವನಿಗೆ ಚನ್ನಾಗಿ ಒಪ್ಪುತ್ತಿದ್ದ ರೂ ಅವುಗಳನ್ನು ಕೇವಲ ವಿಪತ್ಕಾಲ ನಿವಾರಣಾರ್ಥವಾಗಿ ಧರಿಸಿದಂ ತೆ ತೋರುತ್ತಿತ್ತು. ಅವನ ಮಂದಹಾಸ್ಯವು ಎಂಥ ಕಠಿಣ ಅಂತಃ ಕರಣಿಯ ಹೃದಯವನ್ನೂ ಕೂಡಲೆ ಕರಗಿಸಿ ಮೃದುವಾಗಿ ಮಾಡಿ ಬಿಡುತ್ತಿತ್ತು. ನದೀ ತೀರದಲ್ಲಿ ಸ್ನಾನ ಮಾಡುತ್ತಿದ್ದವರು ಈ ಅಪರಿ ಚಿತ ವ್ಯಕ್ತಿಯನ್ನು ಕಂಡು ವಿಸ್ಮಯಚಕಿತರಾದರು. ಅವರಿಗೆ ಇವ ನಾರಿರಬಹುದೆಂಬದರ ಅನುಮಾನವೇ ಆಗಲೊಲ್ಲದು. ಆಗ ಅವರ ಲ್ಲಿ ಆ ನೂತನ ವ್ಯಕ್ತಿಯ ಬಗ್ಗೆ ಹಲವು ಮಾತು-ಕಥೆಗಳು ನಡೆದವು. ಆದರೆ ಆ ದೊಡ್ಡ ಹರಟಿಗಳಿಂದ ಅವರಿಗೆ ಅವನ ನಿಜವಾದ ಸಂಗ ತಿಯು ತಿಳಿಯಲಿಲ್ಲ. ಕಟ್ಟಕಡೆಗೆ ಅರಮನೆಯೊಳಗಿನ ಒಬ್ಬ ಅಧಿ ಕಾರಿಯು ಆ ಘಾಟಿಗೆ ಸ್ನಾನಕ್ಕೆ ಬರಲು, ಈ ಮೊದಲು ಅಲ್ಲಿ ಸ್ನಾನ ಮಾಡುತ್ತಿದ್ದ ಎಲ್ಲ ನಗರ ವಾಸಿಗಳೂ ಆ ಅಧಿಕಾರಿಯ ಬಳಿಗೆ ಬಂದು ಅವನಿಗೆ ಆ ಬಾಲ ಫಕೀರನ ವಿಷಯವನ್ನು ಕೇಳಹತ್ತಿದರು. ಆಗ ಆ ರಾಜಾಧಿಕಾರಿಯು--ಬಂಧುಗಳೇ, ಈ ಚಿಕ್ಕ ವಯಸ್ಸಿನ ಫಕೀರವೇಷಧಾರಿಯಾದ ಹುಡುಗನು ಬೇರೆ ಯಾರೂ ಆಗಿರದೆ, ಬಂ ಗಾಲದ ಗತ ಸುಲ್ತಾನ ಸಕಂದರಶಹನ ಮೊಮ್ಮಗನೂ, ಪ್ರಸ್ತುತ ಸು ೮ಾನ ಗಾಯಸುದ್ದೀನನ ತಮ್ಮನ ಮಗನೂ, ನಮ್ಮೆಲ್ಲರ ಪೂರ್ವ ಸರಿ ಚಿತನೂ ಆದ ಸಾಹೇಬುದ್ದೀನನು; 'ಸೆಕಂದರ ಶಹನ ಮರಣದನಂತರ ಗಾಯಸುದ್ದೀನನು ಪಟ್ಟವೇರಲು, ಆತನು ತನ್ನ ರಾಣಿಯ ಸನ್ಮಾ