ವಿಷಯಕ್ಕೆ ಹೋಗು

ಪುಟ:ಶಕ್ತಿಮಾಯಿ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಶ, ಚಂಡಿಕ. ನಕ್ಕಾಗಿಯೂ ತನ್ನ ತರುವಾಯದಲ್ಲಿ ಆ ನೂತನ ರಾಣಿಯ ಹೊ ಬೈಯೊಳಗೆ ಹುಟ್ಟಿದವನ ಹೊರತು ಬೇರೆ ತನ್ನ ಯಾವ ಅಣ್ಣ ತಮ್ಮಂದಿರಿಗೆ ತನ್ನ ರಾಜ್ಯವು ದೊರೆಯಬಾರದೆಂದೂ ಅವನು ತನ್ನ ಎಲ್ಲ ಅಣ್ಣ ತಮ್ಮಂದಿರನ್ನೂ, ಅವರ ಮಕ್ಕಳು ಮರಿಗಳನ್ನೂ ಕೊಲ್ಲಿಸಿ ಬಿಟ್ಟಿರುವನು. ಈಗ ಈ ಸಾಹೇಬುದ್ದೀನನೊಬ್ಬನೇ ಆವನ ಈ ಯಜ್ಞದ ಕೊನೆಯ ಭಾಗವಾಗಿರುವನು. ಇಷ್ಟು ದಿವಸಗಳ ವರೆಗೆ ಸಾಹೇಬುದ್ದೀನನು ಜೀವಂತನಿದ್ದಾನೆಂಬ ಸುದ್ದಿಯೇ ಅವನಿಗಿದ್ದಿಲ್ಲ. ಯಾಕಂದರೆ, ಯುದ್ಧ ಕಾಲದಲ್ಲಿ ನಮ್ಮಲ್ಲಿ ಅಡುವಿಗಾಗಿರಿಸಿದ್ದ ಈ ಯವನ ಬಾಲಕನು ಯುದ್ದ ಸಮಾಪ್ತಿಯಾದರೂ ಇಲ್ಲಿಯೇ ಇರು ತಿರುವನು. ನಮ್ಮ ಗಣೇಶದೇವರಾಜರು ಇವನನ್ನು ಹೆಚ್ಚಾಗಿ ಪ್ರೀತಿಸುತ್ತಿರುವರು. ಸಿಕಂದರಶಯನ ಮರಣದ ತರುವಾಯ ಸಾಹೇ ಬುದ್ದೀನನನ್ನು ಅವನ ದೊಡ್ಡಪ್ಪನ ಬಳಿಗೆ ಕಳಿಸಬಹುದಾಗಿತ್ತು. ಆದರೆ ಯುದ್ಧದಲ್ಲಿ ಆ ಬಾಲಕನ ತಂದೆ-ತಾಯಿಗಳು ಗತಿಸಿಹೋದ ರಿಂದ ಅವನಲ್ಲಿಯ ಕಡು ಪ್ರೇಮದಿಂದಲೇ ನಮ್ಮ ರಾಜರು ಅವ ನನ್ನು ಇಲ್ಲಿಯೇ ಇರಿಸಿಕೊಂಡು ಬಿಟ್ಟರು. ಮೊನ್ನೆ ಮೊನ್ನೆ ಆ ಕುತುಬನ ಮುಖಾಂತರ ಗಾಯಸುದ್ವೀನನಿಗೆ ಸಾಹೇಬುದ್ದೀನನು ಇಲ್ಲಿ ಇರುವನೆಂದು ತಿಳಿದು ಬರಲು, ಅವನು ಈ ಬಾಲಕನನ್ನು ಮೋಸದಿಂದ ಹಿಡಿದೆಯು ವಧಸ್ಥಾನಕ್ಕೆ ಕಳಿಸಬೇಕೆಂದು ಹವಣಿ ಸಿರುತ್ತಾನೆ . ಆದರೆ ಸಾಹೇಬುದ್ದೀನನನ್ನು ಹೀಗೆ ಮೇಷಪಾತ್ರವಾ ಗ ಮಾಡಲಿಕ್ಕೆ ನಮ್ಮ ರಾಜರು ಸರ್ವಥಾ ಒಪ್ಪುವದಿಲ್ಲ. ಆದ್ದ ರಿಂದಲೇ ಅವರು ಈ ಸಾಹೇಬುದ್ದೀನನಿಗೆ ಈ ಪ್ರಕಾರ ನೂತನ ಫಕೀರವೇಷವನ್ನು ತೊಡಿಸಿ, ಶತ್ರುಗಳಿಗೆ ಒಮ್ಮೆಲೆ ಆತನ ಗುರ್ತು ಹತ್ತಬಾರದ ಹಾಗೆ ಯುಕ್ತಿಯನ್ನು ಮಾಡಿದ್ದಾರೆ. ಈ ಬಾಲಕನ ಜೀವ ರಕ್ಷಣದ ಸಲುವಾಗಿ ನಮ್ಮ ರಾಜರು ಆ ನೂತನ ಸುಲ್ತಾನ