ಪುಟ:ಶಕ್ತಿಮಾಯಿ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಮಿ. ೧೭ ನೊಡನೆ ಪುನಃ ಯುದ್ದವನ್ನಾದರೂ ಮಾಡಿಯಾರು; ಆದರೆ ಈಶ ನನ್ನು ಅವನಿಗೆ ಒಪ್ಪಿಸಲಿಕ್ಕಿಲ್ಲೆಂಬಂತೆ ತೋರುತ್ತದೆ, ಎಂದು ಆ ಫಕೀರನ ವಿಷಯದ ಸಾಗ್ರಸಂಗತಿಯನ್ನು ತಿಳಿಸಲು, ಆ ನೆರೆದ ಜನರು ಅಭಿಮಾನ ಪುರಸ್ಸರವಾಗಿ-'ನಮ್ಮ ಧನಿಯು ಶರಣಾಗತ ರಕ್ಷಕನು, ಮತ್ತೆ ಯುದ್ಧವಾದರೂ ಚಿಂತೆಯಿಲ್ಲ; ಆದರೆ ಪಾಪ! ಈ ಅನಾಥನನ್ನು ರಕ್ಷಿಸಿ, ಸುಖ್ಯಾತಿಯನ್ನು ಹೊಂದಲಿ! ಎಂದು ತಮ್ಮ ತಮ್ಮೊಳಗೆ ಮಾತಾಡಹತ್ತಿದರು. ಪ್ರಜೆಗಳು ಅನುಮಾನಿಸಿದಂತೆಯೇ ಪುನಃ ಪ್ರಸಂಗವೊದಗಿತು. ಗಾಯಸುದ್ದೀನನಿಂದ ಸಾಹೇಬುದ್ದೀನನನ್ನು ಗೌಪ್ಯವಾಗಿ ಹಿಡಿತರಿಸು ವದಾಗಲಿಲ್ಲ. ಆಗ ಅವನು ಸಾಹೇಬುದ್ದೀನನನ್ನು ತಮಗೊಪ್ಪಿಸಬೇಕ೦ ದು ಕುತುಬನ ಸಂಗಡ ಗಣೆಶದೇವನಿಗೆ ಹೇಳಿಕಳಿಸಿದನು. ಗಣೇಶದೇವ ನಿಗೆ ಇದರಿಂದ ಮಹಾಸಂಕಟವು ಪ್ರಾಪ್ತವಾಯಿತು. ಸಾಹೇಬುದ್ದಿ ನನು ಶರಣಾಗತನಾದ್ದರಿಂದ ಅವನನ್ನು ವಧಸ್ಥಾನಕ್ಕೆ ಕಳಿಸಲು ಆ ಪುರಾಣ ಪ್ರಿಯ ಒಂದು ರಾಜನಿಗೆ ಸಮ್ಮತವಾಗಲಿಲ್ಲ. ಇನ್ನು ಅವ ನನ್ನು ಗಾಯಸುದ್ವೀನನಿಗೆ ಒಪ್ಪಿಸದಿದ್ದರೆ ಪುನಃ ವಂಗೇಶ್ವರನ ಕೂಡ ಯುದ್ಧ ಪ್ರಸಂಗ, ಆದರೆ ಯುದ್ಧಕ್ಕೆ ಅವನು ಅಂಜುತ್ತಿದ್ದನೆಂತಲ್ಲ. ಕೇವಲ ಧರ್ಮರಾಜನಾದ ಅವನು ಪ್ರಜೆಗಳನ್ನು ಹೊಟ್ಟರೆ ಹುಟ್ಟಿದ ಮಕ್ಕಳನ್ನು ಸಂರಕ್ಷಿಸುವಂತೆ ಸಂರಕ್ಷಿಸುತ್ತಿದ್ದದರಿಂದ ಅವರನ್ನು ಪುನಃ ಯುದ್ಧಕ್ಕೆ ಅಣಿಮಾಡುವದೆಂದರೆ, ಅವನಿಗೆ ಬಹಳ ಕೆಡಕೆನಿಸಿತು. ಒಬ್ಬ ಸನ್ಯಾಸಿನಿಯ ಬಂಧವಿಮೋಚನದ ಸಲುವಾಗಿ ಈ ಮೊದಲೊಮ್ಮೆ ಯುದ್ಧವಾಗಿ ಸಾವಿರಾರು ಪ್ರಜೆಗಳ ಪ್ರಾಣಗ ಭೂ, ಅದರಂತೆ ಅರ್ಥವೂ ನಷ್ಟವಾಗಿತ್ತು. ಆಶ್ರಿತ ರಕ್ಷಣ, ದುಷ್ಟ ದಮನ ಇವು ರಾಜಧರ್ಮವಾಗಿರುವದರಿಂದ, ಈ ಧರ್ಮವನ್ನು ಕಾಯುವದಕ್ಕಾಗಿ ತನ್ನ ಸರ್ವಸ್ವವು ನಾಶವಾದರೂ ಚಿಂತೆಯಿಲ್ಲಿಂ