ವಿಷಯಕ್ಕೆ ಹೋಗು

ಪುಟ:ಶಕ್ತಿಮಾಯಿ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ ಕ. ಚಂದ್ರಕ. ದ್ದನು. ಆಗ ಆ ರಾಜ್ಯದ ಪ್ರಜೆಗಳ ಸುಖ ಸಮೃದ್ಧಿಯು ಮಿತಿ ಮೀರಿತು. ಯುದ್ಧದಲ್ಲಿ ನಷ್ಟ ಹೊಂದಿದ ಪ್ರಚಾಗಣಗಳಿಗೆ ರಾಜ ನಿಂದ ಯಥಾಸಾಧ್ಯ ಪುರಸ್ಕಾರವು ಸಲ್ಲಿಸಲ್ಪಡುತ್ತಿತ್ತು. ಆದರೆ ಮರಣ ಹೊಂದಿದವರ ಪ್ರಾಣಗಳನ್ನು ಮಾತ್ರ ತಿರುಗಿ ತಂದು ಕೊಡು ವದು ಅವನಿಂದ ಸಾಧ್ಯವಿದ್ದಿಲ್ಲ! ಈ ಪ್ರಕಾರದ ಸುಖ ಸಾಮ್ರಾಜ್ಯದ ಲ್ಲಿಯ ಪ್ರಜೆಗಳು ಒಂದೆರಡು ವರ್ಷಗಳಲ್ಲಿಯೇ ತಮ್ಮ ಹಿಂದಿನ ದುಃಖ ಗಳನ್ನು ಮರೆತು ಬಿಟ್ಟರು. ಅದು ಅವರಿಗೆ ಪೂರ್ವರಾತ್ರಿಯ ದುಃ ಸ್ವಪ್ನ ದಂತ ಯಾವಾಗಾದರೊಮ್ಮೆ ಭಾಸವಾಗುತ್ತಿತ್ತು. ಆ ಭಾಸಕ್ಕಾ ದರೂ ಯುದ್ಧದಿಂದ ಅವರಿಗಾದ ಅರ್ಥನಷ್ಟವು ಕಾರಣವಾಗಿದ್ದಿಲ್ಲ; ಕೇವಲ ಅವರ ಆಪ್ತ ಕೋಟೆಯೊಳಗಿನ ಪ್ರಾಣನಷ್ಟವೇ ಕಾರಣ ವಾಗಿತ್ತು. ರಾಜವಾಡೆಯಬಳಿಯ ನದೀತೀರದಲ್ಲಿ ಹೊಸದೊಂದು ಮನೋ ಹರ ಉದ್ಯಾನವು ನಿರ್ಮಿಸಲ್ಪಟ್ಟಿತ್ತು. ಆ ಉದ್ಯಾನದ ಬಳಿಯಲ್ಲೇ ನದಿಗೆ ಒಂದು ವಿಸ್ತೀರ್ಣವಾದ ಘಾಟು ಕಟ್ಟಲ್ಪಟ್ಟಿತ್ತು. ಈಗೀಗ ಈ ನೂತನ ಘಾಟಿಗೇ ಆ ರಾಜಧಾನಿಯ ನರ-ನಾರಿಯರು ಸ್ನಾನಕ್ಕೆ ಬರಹತ್ತಿದ್ದರು. ಘಾಟಿನ ಮೇಲೆ ನಿಂತವರಿಗೆ ಪ್ರಾಸಾದದೊಳಗೆ ಆಗಾಗ್ಗೆ ಬಾರಿಸಲ್ಪಡುತ್ತಿದ್ದ ಭೈರವೀ-ರಾಗಿಣೀ ವಾದ್ಯಗಳ ಗತ್ತಿನ ಸಪ್ಪಳದೊಡನೆ ಆ ಉದ್ಯಾನದೊಳಗೆ ಕೆಲಸ ಮಾಡುತ್ತಿದ್ದ ತೋಟಿ ಗರೇ ಮೊದಲಾದವರು ಗುಣುಗುಣು ಎಂದು ಹಾಡುವದು ಕೇಳ ಬರುತ್ತಿತ್ತು. ಅದನ್ನು ಕೇಳಿ ಮಧುಮಾಸದೊಳಗಿನ ಶೃಂಗಗಳೇ ಈ ಉಪವನದಲ್ಲಿಗುಂಜಾರವವನ್ನು ಮಾಡುತ್ತಿರುವವೋ ಎನೋ ಎಂಬಂತೆ ಅವರಿಗೆ ಭಾಸವಾಗದೆ ಇರುತ್ತಿದ್ದಿಲ್ಲ, ಒಂದು ದಿನ ಪ್ರಾತಃಕಾಲದ ಸುಶಾಂತ ಸಮಯದಲ್ಲಿ ಆ ಘಾ ಟಿನ ಪ್ರದೇಶವು ಮೇಲೆ ವರ್ಣಿಸಿದಂತೆ ನಿನಾದಮಯವಾಗಿರಲು,