ಪುಟ:ಶಕ್ತಿಮಾಯಿ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ , ಚಲದಿಳಿ ಆದರೆ ಆ ನಡಗುವ ಹೃದಯದಿಂದಲೇ ನಾನು ನನ್ನೀ ಪ್ರಜಗಳಿಗೆ ಧ ರ್ಮಮಾರ್ಗದಿಂದ ನಡೆಯಲಿಕ್ಕೂ ಅದಕ್ಕಾಗಿ ಪ್ರಾಣಗಳನ್ನು ಕೂಡ ಸಮರ್ಪಿಸಲಿಕ ಉಪದೇಶ ಮಾಡುತ್ತಲಿದ್ದೇನೆ. ಹೀಗೆ ಪ್ರಾಣ ಸಮ ರ್ಪಣ ಮಾಡುವದು ಈ ಒಬ್ಬ ಕ್ಷುದ್ರ ಯವನನ ಸಲುವಾಗಿಯೆಂದು ಯಾರೂ ಭಾವಿಸಲಾಗದು. ಅಸಹಾಯಕನ ಸಲುವಾಗಿಯೂ, ದು ಬ೯ಲನ ಸಲುವಾಗಿಯ, ಪೂರ್ವಕೃತ ಉಪಕಾರದ ಸಲುವಾಗಿಯೂ, ನ್ಯಾಯದ ಸಲುವಾಗಿಯ, ಬಂಧುತ್ವದ ಸಲುವಾಗಿಯೇ ನಾವೀ ಧರ್ಮಯುದ್ಧವನ್ನು ಮಾಡಬೇಕಾಗುತ್ತದೆ. ಈ ಯುದ್ಧದಲ್ಲಿ ಮರಣ ವುಂಟಾದರೆ ನಮಗೆ ಇಹಲೋಕದಲ್ಲಿ ಕೀರ್ತಿಯ ಪರಲೋಕದಲ್ಲಿ ಸ್ವರ್ಗಲಾಭವೂ ಪ್ರಾಪ್ತವಾಗುವದು. ಹುಟ್ಟಿದ ಬಳಿಕ ಹ್ಯಾಗೂ ಒಂ ದಾನೊಂದು ದಿವಸ ಸತ್ತೇ ಸಾಯಬೇಕಾಗುವದು. ಅಂದಮೇಲೆ ಈ ಧರ್ಮಕಾರ್ಯಕ್ಕಾಗಿ-ಪುಣ್ಯ ಸಂಪಾದನಕ್ಕಾಗಿಸತ್ತರೆ ಜ್ಯೋತಿಯೇನು?

ಕೂಡಲೆ ಸಭಿಕರಲ್ಲಿಯ ಒಬ್ಬ ವಿನಹೋದ ಅನುಭವಿಕನು ಎದ್ದು ನಿಂತು-ಬಂಧುಗಳೇ, ನಮ್ಮರಸನು ಸಾಮಾನ್ಯನಲ್ಲ. ಅವನು ಧರ್ಮದಲ್ಲಿ ಯುಧಿಷ್ಟಿರನಿಗೆ ಸಮಾನನು. ಆದ್ದರಿಂದ ನಾವು ನಮ್ಮ ಧರ್ಮರಾಜನ ಸಲುವಾಗಿ ಯುದ್ಧಕ್ಕೆ ಸನ್ನದ್ಧರಾಗಲೇ ಬೇಕು; ಈ ಧರ್ಮಯುದ್ಧದಲ್ಲಿ ಪ್ರಾಣಿಗಳನ್ನು ಸರೆಮಾಡಲಿಕ್ಕೂ ನಾವುತತ್ಪರರಾಗ ಬೇಕು ಹೂ, ಅನ್ನಿರಿ, ಬಂಧುಗಳೇ ಗಣೇಶದೇವ ಮಹಾರಾಜಕೀ ಜಯ, ದಿನಾಜಪುರದ ಧರ್ಮವತಾರ ಮಹಾರಾಜಕೀ ಜಯ! ಎಂದ ೩ರಿ' ಎಂದು ಹಿಡಿಸಲಾರದ ಸಂತೋಷದಿಂದ ಸಭಾಗೃಹವನ್ನು ಸ್ಫೂರ್ತಿ ಗೊಳಿಸಲು, ಕೆಲವು ನಿಮಿಷಗಳ ವರೆಗೆ ಜಯಜಯಕಾರ ಧ್ವನಿಯಿಂದ ಆ ಸಭಾಮಂದಿರವು ನಿನಾದ ಮಯವಾಯಿತು,

ಹೀಗೆ ಗಣೇಶದೇವನು ತನ್ನ ಪ್ರಜೆಗಳನ್ನು ಧರ್ಮರಕ್ಷಣಾ ೧ ಪುನಃ ಯುದ್ಧಕ್ಕೆ ಅಣಿಮಾಡಿದನು, ಬಳಿಕ ಅವನು ರಾಜನೀತಿ