ಪುಟ:ಶಕ್ತಿಮಾಯಿ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಶಕ್ತಿಮಯಿ ಯಂತೆ ಗಾಯಸುದ್ದೀನನೆಡೆಗೆ ತನ್ನ ವಕೀಲನನ್ನು ಕಳಿಸಿ ಸಾ ಹೇಬುದ್ದೀನನನ್ನು ಕೊಲ್ಲಿಸುವದಕ್ಕಿಂತ ಅವನನ್ನು ನಿನ್ನ ವಿಸ್ತಾರವಾ ದ ರಾಜ್ಯದಲ್ಲಿ ಯಾವದೊಂದು ಕೊನೆಯ ಭಾಗದ ಸುಭೇದಾರನನ್ನಾ ಗನೇಮಿಸಿ ಬಿಡು, ಅಂದರೆ ನಿನಗೂ ಅವನಿಗೂ ಕೂಡಿಯೇ ಸುಖವಾ ಗುವದು ಎಂದು ಸೂಚಿಸಿದನು. ಆದರೆ ಮದಾಂಧ ಗಾಯಸುದ್ದಿ ನನು ಗಣೇಶದೇವನ ಆ ರಾಜಮಾರ್ಗಕ್ಕೆ ಒಪ್ಪಲಿಲ್ಲ. ಅವನು 'ಸಾಹೇ ಬುದ್ದೀನನ ರುಂಡವನ್ನು ಕಳಿಸಿಕೊಡಿರಿ, ಇಲ್ಲವೆ ಯುದ್ಧಕ್ಕೆ ಸನ್ನದ ರಾಗಿರಿ ಎಂದು ಕುತುಬನ ಕೂಡ ಖಂಡತುಂಡಾಗಿ ಹೇಳಿಕಳಿಸಲು, ವಂಗೇಶ್ವರನೊಡನೆ ವನಃ ಯುದ್ಧ ಮಾಡಲಿಕ್ಕೆ ದಿನಾಜಪುರ ರಾಜ್ಯದ ಪ್ರಜೆಗಳು ಸಿದ್ಧರಾದರು. ಹದಿನಾಲ್ಕನೆಯ ಪ್ರಕರಣ. >xe ಸೆರೆಯಾಳಾದ ಗಣೇಶದವನು. M ಗಣೇಶದೇವನು ಗಟ್ಟಿ ಮನಸಿನಿಂದ ಸಾಹೇಬುದ್ದೀನನಿಗೆ ಆಶ್ರ ಯವನ್ನಿತ್ತು ಧರ್ಮವನ್ನು ಪರಿಪಾಲಿಸಿದನು. ಅದಕ್ಕಾಗಿ ಯುದ್ಧ ಮಾಡಬೇಕಾದುದರಿಂದ ಅವನಿಗೆ ದುಃಖವೆನಿಸಲಿಲ್ಲ; ಅನುತಾಪವಾಗ ಲಿಲ್ಲ. ಈ ನ್ಯಾಯ ಯುದ್ಧದಲ್ಲಿ ತನಗೆ ಹ್ಯಾಗೆ ಜಯವಾದೀತು? ದೇಶದಲ್ಲಿ ಅತ್ಯಾಚಾರವಾಗದಂತೆ ಹ್ಯಾಗೆ ಶಾಂತತೆಯುಳಿದೀತು? ಮುಂ ತಾದ ವಿಚಾರಗಳು ಮಾತ್ರ ಯಾವಾಗಲೂ 'ಅವನ ಮನಸ್ಸಿನಲ್ಲಿ ಮನೆ ಮಾಡಿಕೊಂಡವು. ಯಾವ ದಿವಸ ನಬಾಬಗಾಯಸುದ್ದೀನನ ಸಂಗಡ ಯುದ್ಧವೆ ಸಗುವದು ಜಾಹೀರ ಮಾಡಲ್ಪಟ್ಟಿತೋ, ಆ ದಿವಸ ರಾತ್ರಿ ಗಣೇಶದೇ