ವಿಷಯಕ್ಕೆ ಹೋಗು

ಪುಟ:ಶಕ್ತಿಮಾಯಿ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

GL , ಚರಿತ್ರಿಕ, ವನು ತನ್ನ ಅಂತಃಪ್ರರವನ್ನು ಪ್ರವೇಶಿಸಿದರೂ ಆತನ ತಲೆಯೊಳಗಿನ ಆ ವಿಚಾರಗಳು ಅಳಿಯಲಿಲ್ಲ. ಅದರಿಂದ ಅವನು ದಿನದಂತೆ ತನ್ನ ರಾಣಿ ಯೊಡನೆ ಸುಖಸಲ್ಲಾಪಗಳನ್ನಾಡುವದರಲ್ಲಿ ಮಗ್ನನಾಗದೆ ಹುಚ್ಚನಂತೆ ಗಹನ ವಿಚಾರ ಮಾಡುತ್ತ ಒಟ್ಟಿಗೆ ಕುಳಿತುಬಿಟ್ಟನು. ಆಗ ನಿರೂ ಸಮಾ ರಾಣಿಯು ಗಂಡನನ್ನು ಕುರಿತು-ಅತ್ತೆಯವರು ಬಹಳ ಸಿಟ್ಟಾ ಗಿದ್ದಾರೆ; ಸಾಹೇಬುದ್ದೀನನಿಗೆ ತಾವು ಆಶ್ರಯ ಕೊಡುವದು ಅವರ ಮನಸ್ಸಿಗೆ ಬರುವದಿಲ್ಲ,

  • ಗಣೇಶ-ನಿನ್ನ ಮನಸ್ಸಿನಲ್ಲೇನಿದೆ? ಅವನಿಗೆ ಆಶ್ರಯ ಕೊಡು ವತು ನಿನಗೂ ಸಮ್ಮತವಿಲ್ಲೇನು? ಅದು ಅನ್ಯಾಯ ಪದವೇನು?

ನಿರೂಪಮಾ-ಮಂದಿಗೆ ಅನ್ಯಾಯವಾಗಿ ತೋರಿದರೂ ತಾವು ತಮ್ಮ ಕರ್ತವ್ಯವನ್ನು ಮಾಡಿ ಬಡವರ ಹಾಗು ಅಸಹಾಯರ ಸಹಾ ಯಿಗಳಾಗಿರಿ, ಎಂಥ ವಿಪತ್ತು ಒದಗಿದರೂ ತಾವು ಇಂಧ ಪುಣ್ಯ ಪ್ರ ದ ಕೆಲಸಗಳನ್ನು ಬಿಡುವದು ವಿಹಿತವಲ್ಲೆಂದು ನನಗೆ ತೋರುತ್ತದೆ. ಆಗ ಅವನು ನಿರೂಪಮಾ ರಾಣಿಯನ್ನು ಸಂತೋಷಾತಿಶಯದಿಂ ದ ಜುಂಬಿಸಿ-“ಇದ್ದರೆ ಇಂಥ ಹೆಂಡತಿಯೇಇರಬೇಕು' ಎಂದು ನುಡಿದನು. ಇದೇ ಹೊತ್ತಿನಲ್ಲಿ ಅವರೀರ್ವರೂ ಕುಳಿತು ಮಾತಾಡುತ್ತಿ ದ್ದ ಕೋಣೆಯ ಬಾಗಿಲದ ಮೇಲೆ ಕರಾಘಾತವಾಯಿತು. ಆಗ ರಾಜನು ವಿಸ್ಮಯದಿಂದ ಹೊರಗಿನವರನ್ನು ಕುರಿತು-ಯಾರವರು? ಎಂದು ಕೇಳಲು, ಹೊರಗಿನಿಂದ-ಭಗವತೀ ಸನ್ಯಾಸಿನಿಯು ತಮ್ಮನ್ನು ಕಾಣು ಪದಕ್ಕಾಗಿ ಹೊರಗೆ ಕಾದಿದ್ದಾಳೆ, ಎಂಧು 'ರಂಗಿಣಿದೇವಿಯುಸುರಿ ಡಳು. ಕಡಲೆ ರಾಜನು ಪರಮಾಶ್ಚರ್ಯದಿಂದೆದ್ದು ಬಾಗಿಲ ತೆರೆದ ನು ಆ ಸನ್ಯಾಸಿನಿಯು ಅವನಿಗೆ ಹೀಗೆಂದು ಹೇಳಿದಳು:-