ಗಿಲ ಶಕ್ತಿಮಯಿ, ೧೬ “ನಿನ್ನ ತಾಯಿಯು ಕುತುಬನನ್ನು ಸಾಹೇಬುದ್ದೀನನಿದ್ದ ಮಂ ದಿರದಲ್ಲಿ ಪ್ರವೇಶಗೊಳಿಸಿರುವಳು; ಇಷ್ಟರಲ್ಲಿ ಅವನಿಂದ ಸಾಹೇಬು ದ್ವೀನನು ಪ್ರತಿಬಂಧಿತನಾಗಬಹುದು. ಕುತುಬನು ಒಮ್ಮೆ ಅವ ನನ್ನು ಸೆರೆ ಹಿಡಿದನೆಂದರೆ ತೀರಿತು, ಆ ಮೇಲೆ ನಿನ್ನ ಯಾವ ಉಪಾ ಯಗಳಿಂದಲೂ ಸಾಹೇಬುದ್ದೀನನ ಮರಣವು ತಪ್ಪಲಾರದು. ಅದ ಕ್ಕಾಗಿ ನಿನ್ನನ್ನು ಎಚ್ಚರಗೊಳಿಸಿದ್ದೇನೆ, ಮಾಡತಕ್ಕ ಹಂಚಿಕೆ ಏನಾದ ರೂ ಇದ್ದರೆ ಈಗಲೇ ಮೂಡಲಿಕ್ಕೆ ಉದ್ಯುಕ್ತನಾಗು. ಕೂಡಲೆ ವ್ಯಗ್ರಚಿತನಾದ ಗಣೇಶದೇವನು ಶಹರಕೊತವಾಲ ನಿಗೆ ಸೈನ್ಯದೊಡನೆ ತನ್ನ ಸಹಾಯಕ್ಕೆ ಬರಲು ಹೇಳಿ ಕಳಿಸಿ, ತಾನು ಅರಮನೆಯ ಎಲ್ಲ ಕಾವಲುಗಾರರನ್ನು ಕರಕೊಂಡು ಸಾಹೇಬುದ್ದಿ ನನ ಬಿಡಾರದ ಕಡೆಗೆ ಶೀಘ್ರಗತಿಯಿಂದ ತೆರಳಿದನು. ಗಣೇಶದೇ ವನು ಹೀಗೆ ಲಗುಬಗೆಯಿಂದ ಅಲ್ಲಿಗೆ ಹೋಗಿ ಮುಟ್ಟುವಷ್ಟರಲ್ಲಿ ಕು ತುಬನು ತನ್ನ ಕೆಲಸ ಸಾಧಿಸುವ ಹವಣಿಕೆಯಲ್ಲಿದ್ದನು. ಆಗ ಗಣೇಶದೇವನ ಜನರು ಕುತುಬನ ಜನರನ್ನು ತಡೆದರು; ಅಷ್ಟರಲ್ಲಿ ಕೊತವಾಲನೂ ದಂಡಾಳುಗಳೊಡನೆ ಬಂದು ಗಣೇಶದೇವನನ್ನು ಕೂಡಿಕೊಂಡನು. ಶರಣಾಗತ ರಕ್ಷಣಕ್ಕಾಗಿ ರಾಜನು ಆ ಅಂಧಃಕಾ ರಮಯವಾದ ರಜನಿಯಲ್ಲಿ ನಿಸ್ಸಮವಾದ ಸಾಹಸವನ್ನು ಮೂಡಿ ದನು. ಆದರೆ ಕುತುಬನ ವಿಲಕ್ಷಣ ಸೈನ್ಯ ಜಾಲದಲ್ಲಿ ಸಿಕ್ಕು ಚಕ್ರ ಭೀಮನ ಕೋಟೆಯಲ್ಲಿ ಸಿಕ್ಕ ಅಭಿಮನ್ಯುವಿನಂತೆ ಸ್ವತಃಗಣೇಶದೇವ ನೇ ಶತ್ರುಗಳ ಆಧೀನನಾಗಬೇಕಾಯಿತು. ಕೂಡಲೆ ಕುತುಬನು ಸಾ ಸೇಬುದ್ದೀನನನ್ನು ಕೈದುಮಾಡಿ ಪಾಂಡುಯಾ ರಾಜಧಾನಿಗೆ ಸಾಗಿಸಿ ದನಲ್ಲದೆ, ಗಣೇಶದೇವನನ್ನೂ ಸೆರೆ ಹಿಡಕೊಂಡು ನಡೆದನು. ಕುತುಬನ ಮನಸಿನಲ್ಲಿ ನಾಪೇಬುದ್ದೀನನ ಪ್ರಾಣಹರಣಮಾ ಡಬೇಕೆಂದಿತ್ತು; ಯಾಕಂದರೆ ವೈರಿಯ ನಾಗರಹಾವೂ ಚಿಕ್ಕವೆಂ
ಪುಟ:ಶಕ್ತಿಮಾಯಿ.djvu/೧೪೬
ಗೋಚರ