ಶಕ್ತಿಮಯಿ. ೪೧ ವಂಗೇಶ್ವರನ ಸೆರೆಯಲ್ಲಿದ್ದನು. ಗಣೇಶದೇವನಿಗೂ ಶಕ್ತಿಮಯಿಗೂ ಬಾಲ್ಯದಿಂದಲೇ ಸ್ನೇಹವೆಂಬುದು ಕುತುಬನು ಬಲ್ಲ ಸಂಗತಿಯಾಗಿತ್ತು. ಇಷ್ಟೇ ಅಲ್ಲ, ಒಂದು ಅಯ್ಯೋತ್ಸವದ ದಿವಸ ಶಕ್ತಿಮಯಿಯು ಗಣೇಶ ದೇವನಿಂದಲೂ ಅವನ ತಾಯಿಯಿಂದಲೂ ವಿಶೇಷವಾಗಿ ಅಪಮಾನ ಹೊಂದಿದ್ದರಿಂದ ಅವಳು ತನ್ನ ಆ ಅವಮಾನದ ಸೇಡು ತೀರಿಸಿಕೊ ಳ್ಳುವ ಸಲುವಾಗಿಯೇ ತನ್ನ ಜಾತಿ-ಗೋತಿಗಳನ್ನು ಬಿಟ್ಟು ವಂದೇ ಶ್ವರನ ಕೈ ಹಿಡಿದಿದ್ದಳೆಂಬದರ ಸಂಪೂರ್ಣ ಮರ್ಮವೂ ಅವನಿಗೆ ಅರಿಯದ ಸಂಗತಿಯಾಗಿದ್ದಿಲ್ಲ; ಆದ್ದರಿಂದ ಕುತುಬನು ತನ್ನ ಸ್ವಾರ್ಥ ದ ಮಾರ್ಗದೊಳಗೆ ಕೇವಲ ಕಂಟಕ ಪ್ರಾಯಳಾಗಿದ್ದ ಶಕ್ತಿಯನ್ನು ಬೇರೊಂದು ಕಂಟಕದಿಂದ ತೆಗೆದು ಬಿಡಬೇಕೆಂದು ಯೋಚಿಸಿದನು; ಮತ್ತು ಆ ಕೆಲಸಕ್ಕಾಗಿ ಅವನು ಶಕ್ತಿಮಯಿಯೊಡನೆ ವಿಶೇಷ ಲೀನ ತೆಯಿಂದ ನಡಕೊಳ್ಳಹತ್ತಿದನು. ಅವನು ರಾಜ್ಯದೊಳಗಿನ ಎಲ್ಲ ಸಣ್ಣ-ದೊಡ್ಡ ಸಂಗತಿಗಳನ್ನು ರಾಜನಿಗೆ ತಿಳಿಸುವಂತೆ ಈಚೆಗೆ ಶಕ್ತಿ ಮಯಿಗೂ ತಿಳಿಸಹತ್ತಿದನು; ಹಾಗು ರಾಜವ್ಯವಹಾರದೊಳಗಿನ ಪ್ರ ತಿಯೊಂದು ಖಾತೆಯ ವ್ಯವಹಾರವನ್ನೂ ಆಕೆಯ ಎದುರಿಗೆ ಸಾಧ್ಯ ತವಾಗಿ ಹೇಳುತ್ತ, ಆಕೆಯ ಗೌರವವನ್ನು ಆಗಾಗ್ಗೆ ಹೊಗಳುತ್ತ ನಡೆ ದದ್ದರಿಂದ ಶಕ್ತಿಮಯಿಯು ಕುತುಬನನ್ನು ಒಳ್ಳೆ ವಿಶ್ವಾಸದ ಮನು ಸ್ಟನೆಂದು ಭಾವಿಸಿದಳು. ಹೆಂಗಸರಿಗೇನು, ಎಂಥವೇ ಯಾಕಾಗ ಲೊಲ್ಲವು, ಅವರ ಮಾತು ಕೇಳುತ್ತ, ಅವರನ್ನು ಅಹಲ್ಯಾ-ದೌಪದಿಸೀತಾ ಎಂದು ಹೊಗಳಿ ಅಟ್ಟಕ್ಕೇರಿಸುತ್ತ ಹೋದರೆ ತೀರಿತು; ಅವರ ಮನಸ್ಸು ಪ್ರಸನ್ನ ವಾಗುವದಕ್ಕೆ ವಿಲಂಬವಾಗುವದಿಲ್ಲ. ಅಂತೆಯೇ ಎಷ್ಟೋ ಧುರೀಣ ವುರುಷರು ಬೇಕಾದಂಥ ಕಟ್ಟಾ ಹೆಂಗಸರನ್ನು ಕೂಡ ಅಲ್ಪಾವಧಿಯಲ್ಲಿ ಒಲಿಸಿಕೊಂಡು ಅವರನ್ನು ದುಷ್ಟ ಇಲ್ಲವೆ ಸುಷ್ಟ ಕಾರ್ಯ ಪ್ರವತ್ತರಾಗಮಾಡಿದ ಉದಾಹರಣೆಗಳು ಸಮಾಜದ
ಪುಟ:ಶಕ್ತಿಮಾಯಿ.djvu/೧೫೦
ಗೋಚರ