೧೪೦ 4. ಬಿಂದಿಗೆ, ತಪ್ಪು ವಹಂಚಿಕೆಯನ್ನು ನಡಿಸಿದ್ದನು. ಕುತುಬನ ಹೃದಯವ್ಯಾಪಾರವ ನ್ನು ಬಲ್ಲ ಅವನ ಅಗ್ರಜನಾದ ಅಜೀಮಖಾನ ಮೊದಲಾದ ಮುಖಂ ಡರು ನಿಜಸಂಗತಿಯನ್ನು ತಿಳಿದದ್ದರಿಂದಲೇ ಅವರು ಇಂದು ಶಕ್ತಿಮ ಯಿಯ ಬಳಿಗೆ ಬಂದಿದ್ದರು. ಪ್ರಜೆಗಳ ಇಚ್ಛೆಯನ್ನು ತಿಳಿದು, ಶಕ್ತಿಮ ಯಿಯು ಶುದ್ದ ಮನಸಿನಿಂದ-ನಿಮ್ಮ ಬಯಕೆಯನ್ನು ಪೂರೈಸಿಕೊಡಲು ಪ್ರಯತ್ನಿಸುತ್ತೇನೆ, ಎಂದು ಅವರಿಗೆ ಅಭಯವನ್ನಿತ್ತು ಕಳಿಸಿದಳು. ಶಕ್ತಿಮಯಿ ಹಾಗು ರಾಜಸಭಾಸದರ ಮುಖಂಡರು ಇವರಲ್ಲಿ ಆದ ಸಂಭಾಷಣವನ್ನು ಕೇಳಿ ಕುತುಬನು ಮನದಲ್ಲಿ ಬಹಳವಾಗಿ ಬೆದ ರಿದನು; ಯಾಕಂದರೆ, ಯಾವ ಸ್ವಾರ್ಥ ಸಾಧನೆಗಾಗಿ ಅವನು ಸೆಕ೦ದ ರಶಹನನ್ನು ಬುಡಮೇಲು ಮಾಡಿಸಿದ್ದನೋ, ಗಾಯಸುದ್ದೀನನ ಸಹಾ ಯದಿಂದ ಅವನ ಏಳು ಜನ ತಮ್ಮಂದಿರನ್ನು ಕೊಲ್ಲಿಸಿದ್ದನೋ ಹಾಗು ಈಗ ಈ ಸಾಹೇಬುದ್ದೀನನನ್ನು ಕೊಲ್ಲಿಸಿಬಿಟ್ಟು, ಸಮಯವರಿತು ಸ್ವತಃ ಗಾಯಸುದ್ದೀನನನ್ನೂ -ಪ್ರಕೃತದ ಬಂಗಾಲದ ನವಾಬನನ್ನೂ -ಕೊಲ್ಲಿ ಸಿ ಆ ಘಾತುಕತನದ ಅಪರಾಧಕ್ಕೆ ಅವನ ಈ ನೂತನರಾಣಿ ಶಕ್ತಿ ಮಯಿಯನ್ನು ಗುರಿಮಾಡಿ, ತಾನು ಬಂಗಾಲದ ಪಟ್ಟವನ್ನು ಸೆಳಕೆ ಳ್ಳಬೇಕೆಂದಿದ್ದನೋ, ಆ ಮಹಾಕಾರಸ್ಥಾನಿಯು ಅವರ ಆ ಸಂಭಾಷ ಣದಿಂದ ಮನಸ್ಸಿನಲ್ಲಿ ಹೆದರಿದ್ದರಲ್ಲಿ ಸೋಜಿಗವೇನು? ಆದರೆ ಕುತುಬನು ಮಹಾ ಚಾಣಾಕ್ಷನಾದ್ದರಿಂದ ಅವನು ಅದಕ್ಕೂ ಒಂದು ಹಂಚಿಕೆ ಹಾಕಿದನು. ಹ್ಯಾ ಗಾದರೂ ಮಾಡಿ ಶಕ್ತಿಮಯಿಯ ವಿಷಯವಾಗಿ ಗಾಯಸುದ್ದೀನನ ಮನಸ್ಸು ಕೆಡಿಸಿ ಬಿಟ್ಟರೆ ತನ್ನ ಉಳಿದ ಕೆಲಸಗ ಳನ್ನು ಶೀಘ್ರವಾಗಿ ಮಾಡಿಕೊಳ್ಳಲಿಕ್ಕೆ ಬರಬಹುದೆಂದು ತಿಳಿದು ಅವನು ಆ ಗಂಡಹೆಂಡಿಂದಿರ ನಡುವೆ ವೈಮನಸ್ಸಾಗುವ ಹಾಗೆ ಯು ಕೈ ಹಾಕಹತ್ತಿದನು. ದಿನಾಜಪುರದ ರಾಜನಾದ ಗಣೇಶದೇವನು ಈಗ ಹ್ಯಾಗೂ
ಪುಟ:ಶಕ್ತಿಮಾಯಿ.djvu/೧೪೯
ಗೋಚರ