ಪುಟ:ಶಕ್ತಿಮಾಯಿ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ, ht ಯುಕ್ತ ದನಿಯಿಂದ ಸಾಬುದ್ದೀನನನ್ನು ಗಾಯಸುದ್ದೀನನು ಜೀವ ದಿಂದಿಡುವದಿಲ್ಲ; ಈ ಮಾತಿನಲ್ಲಿ ಕೈ ಹಾಕಿ ನೀವು ಮಾತ್ರ ವ್ಯರ್ಥವಾಗಿ ನಿಮ್ಮ ಪ್ರಾಣಗಳನ್ನು ನೀಗುವಿರಿ. ಇದು ಈಗ ಬಾದಶಹನ ರಾಜ್ಯ ವಾಗಿರುವದಿಲ್ಲ; ಅವನ ಆ ನೂತನರಾಣಿ ಸೈತಾನೀ ಶಕ್ತಿಮಯಿಯ ರಾಜ್ಯವಾಗಿರುತ್ತದೆ ಎಂದು ನುಡಿದದ್ದನ್ನು ಕೇಳಿ, ಆಜೀಮಖಾನನು ರೋಷದಿಂದ 'ಸುಲ್ತಾನ ಸೆಕಂದರ ಶಹನಿಗೆ ವಿದ್ರೋಹಿಯಾಗಿ ನಾವು ಗಾಯಸುದ್ದಿ ನನಿಗೆ ಈ ಸಿಂಹಾಸನವನ್ನು ಕೊಡಿಸಿದ್ದು ಕೇವಲ ಇಂಥ ಅನ್ಯಾಯದಾಚರಣೆಗಳನ್ನು ಸಹಿಸುವದಕ್ಕೇನು? ಬಾದಶಹನು ಸಾಹೇ ಬುದ್ದೀನನನ್ನು ಬಿಟ್ಟು ಕೊಡದಿದ್ದರೆ ನಾವು ಪುನಃ ಯುದ್ಧ ಪ್ರವೃತ್ತರಾ ಗಬೇಕಾದೀತು. ಇನ್ನೆಂದೂ ಶಸ್ತ್ರವನ್ನು ಧರಿಸಲಿಕ್ಕಿಲ್ಲೆಂದು ಪಣ ತೊಟ್ಟ ನಾವು, ಈ ಕುಮಾರನ ಪ್ರಾಣ ರಕ್ಷಣಕ್ಕಾಗಿ ಪುನಃ ಕೈ ಯಲ್ಲಿ ಖಡ್ಗವನ್ನು ಹಿಡಿದೇ ತೀರೇವು' ಹೀಗೆ ಅವರು ಕುತುಬನ ಬಳಿಗೆ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿದರು; ಹಾಗೂ ಈ ವಿಷಯದಲ್ಲಿ ಶಕ್ತಿಮಯಿ ರಾ ಣಿಯಾದರೂ ಏನನ್ನು ವಳೆಂಬದನ್ನು ಪ್ರತ್ಯಕ್ಷ ತಿಳಕೊಳ್ಳುವದ ಕಾಗಿ ಅವರು ಆಕೆಯೆಡೆಗೆ ನಡೆದರು; ಶಕ್ತಿಯ ವಿವಾಹವಾದಂದಿ ನಿಂದ ಸೈತಾನಿ, ರಾಕ್ಷಸಿ, ವಾಷಿನಿ ಮೊದಲಾದ ಅನೇಕ ವಿಶೇಷಣ ಗಳು ಆಕೆಗೆ ಪ್ರಾಪ್ತವಾಗಿದ್ದವು; ಮತ್ತು ಅವೆಲ್ಲವುಗಳನ್ನು ಅವಳು ಕುತುಬನೊಬ್ಬನಿಂದಲೇ ಪಡೆಯಬೇಕಾಗಿತ್ತು. ಯಾಕಂದರೆ ಅಜ ಸ್ವಾರ್ಥಿಯ, ಮಹಾಧೂರ್ತನೂ ಆದ ಆ ಕುತುಬನು ತನ್ನ ನೀಚ ಕೃತ್ಯಗಳು ಜನರಿಗೆ ತಿಳಿದು, ಜನರೋಷಕ್ಕೆ ತಾನು ಗುರಿಯಾಗಬಾರ ದೆಂದು ಬೇಕೆಂತಲೇ ಜನರಲ್ಲಿ ಆ ನೂತನ ರಾಣಿಯ ವಿಷಯವಾಗಿ ಅಲ್ಲದ ಸಲ್ಲದ ಸಂಗತಿಗಳನ್ನು ಹರಡಿಸಿ, ಆಕೆಯಲ್ಲಿ ಜನಾನುರಾಗವು