ಪುಟ:ಶಕ್ತಿಮಾಯಿ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿವಿ ೧೪೭ ಸ್ವಚ್ಛವಾದ ಕಿರಣಗಳನ್ನು ನಮ್ಮ ಶಕ್ತಿಮಯಿಯು ಆ ಉಪವನದ ಮೇಲೆ ಕೆಡವುತ್ತ ಸಾವಕಾಶವಾಗಿ ದಾರಿಯನ್ನು ಕ್ರಮಿಸುತ್ತಿದ್ದನು. ಉದ್ಯಾನದೊಳಗಿನ ಕಾರಂಜಿಗಳಿಂದ ಚಿಮ್ಮುವ ನೀರಿನ ಝರ್ ಝರ್ ಎಂಬ ಇಂಪಾದ ಸಪ್ಪಳವೂ, ಮ೦ದವಾಯುವಿನಿಂದ ಅಲ್ಲಾಡುವ ಗಿಡ-ಬಳ್ಳಿಗಳ, ಎಲೆ-ಟೊಂಗೆಗಳ ಸಣ್ಣ ಪುಟ್ಟ ಸಪ್ಪಳವು, ನದೀಪವಾ ಹದ ಮೃದುಮಧುರವಾದ ಸಪ್ಪಳದೊಡನೆ ಬೆರೆತು ಆ ಪುಷ್ಟವಾಟಿಕೆ ಯಲ್ಲೆಲ್ಲ ಸುಮನೋಹರವಾದ ಸಂಗೀತದ ಇಂಪಾದ ನಾದವನ್ನು ಆ ಸಂಧ್ಯಾ ಕಾಲದಲ್ಲಿ ಉಂಟು ಮಾಡಿದ್ದವು. ಅಂಧ ಆ ಅತ್ಯಂತ ಮನೋಹರವಾದ ವೇಳೆಯಲ್ಲಿ ಆ ಉಪವನದೊಳಗಿನ ಒಂದು ಸುರೋ ಭಿತವಾದ ಆಸನದ ಮೇಲೆ ಕುಳಿತು ಮನಸ್ಸನ್ನು ರಮಿಸುತ್ರಿದ್ರ ಶಕ್ತಿ ಮಯಿಯು ಅತ್ಯಂತ ವ್ಯಾಕುಲಭಾವದಿಂದ- 'ಗಣೆಶದೇವನನ್ನು ಬಾದಶಹನು ಗಲ್ಲಿಗೇರಿಸಬೇಕೆಂದಿರುವನೇ? ಛೇ, ಮರ್ಲಾ -ಯವ ನಾ, ಈ ಶಕ್ತಿಮಯಿಯ ದೇಹದಲ್ಲಿ ಪ್ರಾಣ ಬಿಡುವವರೆಗೆ ಆ ಕೃತಿ ಯು ನಿನ್ನಿಂದೆಂದಿಗೂ ಆಗದು. ಹೇಳಿ ಕೇಳಿ ನಾನು ಹೆಂಗಸು; ('ಹೆಂಗಸರ ಬುದ್ದಿ ಮೊಣಕಾಲಕೆಳಗೆ' ಎಂಬ ಮಾಕ್ತಿಯು ಈಗ ನನಗೆ ದಿಟವಾಗಿ ತೋರಿ ಬಂತು. ನಾನು ಆ ಸನ್ಯಾಸಿನಿಯ ಮಾತು ಕೇಳಿ, ಅಂದೇ ಈ ಸೇಡಿನ ಹವ್ಯಾಸದಿಂದ ತುಸು ವರಾಲ್ಮುಖಳಾಗಿ ದೃರೆ, ಬಾಲ್ಯ ಸ್ನೇಹಿತನ-ಗಣೇಶದೇವನ ಮೇಲೆ ಈ ಘೋರ ಪ್ರಸಂ ಗವು ಎಂದಿಗೂ ಬರುತ್ತಿಲ್ಲವಲ್ಲ? ಆದರೆ ಮಿಂಚಿ ಹೋದ ಮಾ ತಿಗೆ ಈಗ ಚಿಂತಿಸಿ ಫಲವೇನು? ಆದರೆ ನಿರುವಾಯವೆಂದು ತಿಳಿದು ಸುಮ್ಮನೆ ಕೂಡುವದು ಈ ಶಕ್ತಿಮಯಿಯಿಂದಾದೀತೇ? ಎಂದಿಗೂ ಆಗಲಿಕ್ಕಿಲ್ಲ, ಮಿತಿಮೀರಿ ಹೆಣಗಿ, ಮಾಡಬಾರದ ಹಲವು ಸಾಹಸ ಗಳನ್ನು ಮಾಡಿ, ಗಣೇಶದೇವನನ್ನು ಬಂಧಮುಕ್ತ ಮಾಡಿಸಿದೆನೆಂದರೆ, ನನ್ನ ಜೀವಿತದ ಇತಿ ಕರ್ತವ್ಯವಾಯಿತೆಂದು ನಾನು ಬಗೆಯುತ್ತೇನೆ.