ಪುಟ:ಶಕ್ತಿಮಾಯಿ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮ ಸ, ಚಂದ್ರಿಕೆ ದೇವಾ, ಯಾವ ಕ್ಷುಲ್ಲಕ ಬಡಕನ್ನಿಕೆಗೆ ನಂಗೇಶ್ವರಿಯಂಥ ಅತ್ಯುಚ್ಚ ಪದವಿಯನ್ನು ನೀನು ಅನುಗ್ರಹಿಸಿರುವಿಯೋ, ಇಂಧ ನನ್ನನ್ನು ಆಕೆಯ ಬಾಲ್ಯ ಸ್ನೇಹಿತನಾದ ಗಣೇಶದೇವನು ಕಿಂಚಿತ್ತಾದರೂ ಆದರಿಸಿದ್ದರೆ, ನಾನು ಈ ಶ್ರೇಷ್ಠ ಪದವಿಗಿಂತ ಹೆಚ್ಚು ಸಮಾಧಾನ ಹೊಂದುತ್ತಿದ್ದೆನಲ್ಲ? ಎಂದು ಹಲವು ಬಗೆಯಾಗಿ ಮನಸ್ಸಿನಲ್ಲಿ ಯೋಚಿಸುತ್ತ ಕುಳಿತಿದ್ದಳು. ಆ ಷ್ಟರಲ್ಲಿ ಗಾಯಸುದ್ದೀನನು ಶಕ್ತಿಮಯಿಯ ಕನೆ ಯನ್ನು ಎತ್ತಿ ಮು ದೀಡುತ್ತ ಆ ಬಾಲಿಕೆಯ ತೊದಲು ನುಡಿಗಳನ್ನು ಕೇಳುತ್ತ ಸಾವಕಾಶ ವಾಗಿ ಶಕ್ತಿಮಯಿಯ ಬಳಿಗೆ ಬಂದನು. ಆಗ ಶಕ್ತಿಮಯಿಯ ಲಕ್ಷ್ಯವು ಅವನ ಕಡೆಗೆ ಇದ್ದಿಲ್ಲ. ಅವಳ ಮನಸ್ಸು ಯೋಚನೆಗಳಿಂದ ಆವರಿಸಿ ತು, ಎಂದೂ ಈ ಪರಿ ಚಿಂತಾಯುಕ್ತಳಾಗದ ಶಕ್ತಿಯನ್ನು ಈ ದಿವಸ ಚಿಂತಾಸಮುದ್ರದಲ್ಲಿ ಮುಳುಗಿರುವದನ್ನು ಕಂಡು ಗಾಯಸು ದ್ವೀನನು ಪರಮಾಶ್ಚರ್ಯಚಕಿತನಾದನು. ಆದರೆ ಅವನು ನೆಟ್ಟಗೆ ಅವಳ ಹತ್ತರಕ್ಕೆ ಒಮ್ಮೆಲೆ ಬರಲಿಲ್ಲ. ತುಸು ಹಿಂದಕ್ಕೆ ಸರಿದು ಒತ್ತಟ್ಟಿಗೆ ನಿಂತು, ಆಕೆಯ ಬಾಯಿಂದ ಯಾರಾದರೂ ಶಬ್ದಗಳು ಹೊರಡುತ್ತವೋ ಏನೋ ಎಂಬದನ್ನು ಕೇಳುವದಕ್ಕಾಗಿ ನಿರೀಕ್ಷಿಸಹ ತ್ರಿದನು. ಆದರೆ ಹತ್ತರ ಹುಡುಗರಿದ್ದವೆಂದರೆ, ಅವು ಎಂಥ ದೃಢ ಮನಸ್ಸಿನವನ ತಲ್ಲೀನತೆಯನ್ನೂ, ಮನವನ್ನೂ, ಏಕಾಗ್ರವನ್ನೂ ಈ ಡಲೆ ಚ್ಯುತಿ ಹೊಂದಿಸಿ ಬಿಡುತ್ತವೆಂಬದು ಅನುಭವಸಿದ್ಧ ಸಂಗತಿಯು. ಇದರಂತೆ ಗಾಯಸುದ್ದೀನನ ಬಳಿಯಲ್ಲಿದ್ದ ಆ ಚಿಕ್ಕ ಮಗುವು ತಂದೆ ಯ ಏಕಾಗ್ರತೆಯನ್ನು ಭಂಗಗೊಳಿಸಿತು. ಮಗಳ ಆ ಶಬ್ದದಿಂದ ಗಾಯಸುದ್ದೀನನಂತೆ ಶಕ್ತಿಮಯಿಯ ಚಿತ್ರವೂ ಏಕಾಗ್ರತೆಯನ್ನು ಬಿಟ್ಟುಕೊಡಲು, ಅವಳು ಮಗಳ ಕಡೆಗೆ ಹೊರಳಿ ನೋಡಿದಳು. ಆಗ ಆಕೆಗೆ ಅವಳ ಮಗಳೂ, ಗಾಯನುದ್ದೀನನೂ ಒಮ್ಮೆಲೆ ಕಣ್ಣಿಗೆ ಬಿದ್ದರು. ಮಗುವು ಓಡುತ್ತ ಬಂದು ತಾಯಿಯ ತೊಡೆಯ ಮೇಲೆ ಕುಳಿತಿತು!