ಪುಟ:ಶಕ್ತಿಮಾಯಿ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ Nume>

  • -

- - ಅದನ್ನು ಕೇಳಿ ನಿರೂಪಮೆಯು ಆತ್ಮಾನಂದದಿಂದ ಆಯ್ಕ, ರಾಜಕುಮಾಲನೆ ಬಂದನು? ಎಂದು ನಾಳಿಗೊಂಡಳು. ಆಗ ಕುಸುಮೆ-ಕಾಮಿನಿಯರು-ನಿರೂಪಮೆ ನಿನ್ನನ್ನೇ ವರಿಸುವಂ ತೆ ನಾವು ರಾಜಕುಮಾರನಿಗೆ ಹೇಳುವೆವಾ ಎಂದು ನುಡಿದರು. ಅಷ್ಟರಲ್ಲಿ ಕುಮಾರನು ಅವರ ಹತ್ತಿರಕ್ಕೆ ಬಂದೇಬಿಟ್ಟನು. ಅವರು ಕುಮಾರನಿಗೆ ತಮ್ಮ ಆಟದ ಸಂಗತಿಯನ್ನೆಲ್ಲ ಹೇಳಿ ಅವನ ನ್ನು ಕುರಿತು 'ಕುಮಾರ, ನಿನ್ನ ರಾಣಿಯು ನಿರೂಪಮೆಯೋ ಶಕ್ತಿಯೋ? ಎಂದು ಕೇಳಿದರು. ಗಣೇಶದೇವನು ಏನನ್ನೂ ಅರಿಯ ದವನಂತೆ ನಟಿಸಿ-ನಾನಂತೂ ರಾಜನೇ; ಆದರೆ ರಾಣಿಯಾರೆಂಬದನ್ನು ನೀವೇ ಹೇಳಿರಿ, ಎಂದು ನಗುತ್ತ ಕೇಳಿದನು. ಅಷ್ಟರಲ್ಲಿ ತನ್ನ ಕೈಯಲ್ಲಿದ್ದ ಮಾಲೆಯನ್ನು ನಿರೂಪಮೆಯ ರಾಜಕುಮಾರನ ಕೊರಳಲ್ಲಿ ಹಾಕಿದಳು. ಕೂಡಲೆ ಅವರು ಅದನ್ನು ತೆಗೆದು ಶಕ್ತಿಯ ಕೊರಳಿಗೆ ಹಾಕಿ ನೋಡಿರಿ, ಈಕೆಯೇ ನನ್ನ ರಾಣಿಯು” ಎಂದು ನುಡಿದು ಶಕ್ತಿಯನ್ನು ಆಕೊಂಡು ಮುದ್ದಿ ಸಿದನು. ಆಗಿನ ಶಕ್ತಿಯ ಮುಖಮಂಡಲದ ಗಂಭೀರಯುಕ್ತ ಆಹಾ ದದತೇಜಸ್ಸು ಯುವತಿಯರ ಗಂಭೀರ ತೇಜಸ್ಸನ್ನು ಕೂಡ ಹಿಂದೂಡು ವಂತಿತ್ತು. ಆಗ ನಿರೂಪಮೆಯ ಕನ್ನೊಳಗಿಂದ ಒಂದೆರಡು ಅಶು ಬಿಂದುಗಳುದುರಿದವು. ಶಕ್ತಿಯು ಕೂಡ ರಾಜಕುಮಾರನ ವಿವಾಹವು ನಿಜವಾಗಿಯೇ ಆಯಿತೆಂದು ಆಕೆಯು ಭಾವಿಸಿದಳು. ಆಗ ನಿರೂಪ ಮೆಯು ಕುಮಾರನನ್ನು ಕುರಿತು: ಒಳ್ಳೇದು, ಶಕ್ತಿಯೇ ರಾಣಿ ಯಾಗಲಿ; ನಾನು ಇಂದಿನಿಂದ ನಿನ್ನ ದಾಸಿಯಾಗುವೆನು' ಎಂದು ನಿರ್ಮಲಾಂತಃಕರಣದಿಂದ ಹೇಳಿದಳು.