ಪುಟ:ಶಕ್ತಿಮಾಯಿ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮರೂ. ೧೫೧ ವನೇ ಕಾರಣನಾದ್ದರಿಂದ ಅವನನ್ನು ಅವಳು ಅಂತರಂಗದಲ್ಲಿ ಬಹಳ ಶಪಿಸತೊಡಗಿದಳು. ಮುಂಭಾಗದಲ್ಲಿ ಕಾರಂಜಿಯು ಒಂದೇಸವನೆ ಸುಗಂಧೋದ ಕವನ್ನು ಚಿಮ್ಮುತ್ತಲಿತ್ತು; ಆ ಕಾರಂಜಿಯಿಂದ ಎತ್ತರದ ಮೇಲೆ ಪುಟಿ ಯುವ ತುಪಾರಗಳೊಳಗಿಂದ ಎದುರಿಗಿನ ಆಕಾಶದೊಳಗಿನ ತಾರೆಗಳು ಸುಮನೋಹರವಾಗಿ ವಿನುಗುತ್ತಲಿದ್ದವು; ಚಂದ್ರನಂತೂ ಪೂರ್ಣ ಸೊಬಗಿನಿಂದ ತನ್ನ ಗರ್ವಭಾವವನ್ನು ನೋಡುವವರಿಗೆ ವ್ಯಕ್ತಪಡಿಸು ಧೀರವೇಗದಿಂದ ಸಾಗಿದ್ದನು; ಆದರೆ ನೆತ್ತರಗಣ್ಣಿನ ಶಕ್ತಿಮಯಿ ಯು ಆ ಉಪವನದೊಳಗಿನ ಈ ಎಲ್ಲ ಚಮತ್ಕಾರಗಳನ್ನು ನೋಡಿ ಯ ನೋಡಲಿಲ್ಲವೆಂಬಂತೆ ತನ್ನ ಓಪ್ಲಾಧರಗಳನ್ನು ಒಂದಕ್ಕೊಂದು ಸಲ್ಲಗ್ನದಿಂದ ಗಟ್ಟಿಯಾಗಿ ಹಿಡಿದು, ಅವನತ ಮೊಗದಿಂದ ಹತ್ತರದ ಲ್ಲಿದ್ದ ಒಂದು ಹೂಬಳ್ಳಿಯ ಹೂಗಳನ್ನು ಹರಿದು ಭಿನ್ನ ಭಿನ್ನವಾಗಿ ಮಾಡಿ ಚೆಲ್ಲುತ್ತ ಕುಳಿತಿದ್ದಳು. ಸುಲ್ತಾನನು ಚಂದ್ರನ ಕಿರಣಗಳಲ್ಲಿ ಕ್ರೋಧೋಜ್ವಲವಾಗಿ ಕಾಣುವ ಶಕ್ತಿಯ ಮುಖದ ಕಡೆಗೆ ಕೆಲಹೊತ್ತು ಟಕಮಕನೋಡಿ“ಪ್ರಿಯೆ, ಹೀಗೇಕೆ ಸಿಟ್ಟಾಗಿರುವೆ? ಬಿಡು ಚಿಂತಿಸಬೇಡ ಬಿಡು; ನಾನಿರುವವರೆಗೆ ನೀನು ಯಂಚಿತ್ತಾದರೂ ಚಿಂತೆ ಪಡುವ ಕಾರಣವಿಲ್ಲ; ಇಷ್ಟೇ ಅಲ್ಲ, ನನ್ನ ಪಶ್ಚಾತ್ತಾದರೂ ನಿನಗೆ ಯಾವ ಪ್ರಕಾರದ ಕೇಶವೂ ಉಂಟಾಗದಂತೆ ನಾನು ನನ್ನ ರಾಜ್ಯದ ವ್ಯ ವಸ್ಥೆ ಮಾಡಿಟ್ಟಿರುವೆನು, ಅಂದಮೇಲೆ ಮತ್ತೆ ಯೋಚನೆಯೇ? ಎಂದು ನುಡಿಯುತ್ತ ಸಸ್ನೇಹದಿಂದ ಅವಳನ್ನು ಬಿಗಿದಪ್ಪಿ, ಚು೦ ಬಿಸಿದನು. ಗಾಯಸುದ್ದೀನನೊಡನೆ ಶಕ್ತಿಯ ವಿವಾಹವಾಗಿ ಇಂದಿಗೆ ಐದು ವರ್ಷಗಳಾಗಿದ್ದವು. ಈ ಐದು ವರ್ಷಗಳಲ್ಲಿ ಅವರೀರ್ವರಲ್ಲಿ