ಪುಟ:ಶಕ್ತಿಮಾಯಿ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೨ ಸ, ಚಂದ್ರಿಕೆ ಎಷ್ಟೋ ಸಾರೆ ಪ್ರೇಮಕಲಹಗಳಾಗಿದ್ದವು. ಆದರೆ ಇಂದಿನ ಅವರ ಆ ಪ್ರೇಮಕಲಹವು ವಿಕೋಪಕ್ಕೆ ಹೋಯಿತು, ಶಕ್ತಿಮ ಯಿಯ ಮನಸ್ಸು ಗಾಯಸುದ್ದೀನನ ವಿಷಯದಲ್ಲಿ ಇಂದಿನಷ್ಟು ಅವಿಶ್ವಾಸವನ್ನೆಂದೂ ವಹಿಸಿದ್ದಿಲ್ಲ. ಆಗ ಅವಳು ಬಾಲ್ಯ ಸಖನಾ ದ ಗಣೇಶದೇವನ ಪ್ರಾಣಹರಣವಾಗುವದನ್ನು ಕಣ್ಣಾರೆ ನೋಡು ತ್ರ ಈ ದುಷ್ಟ ಯವನನ ಸಹವಾಸದಲ್ಲಿರುವದಕ್ಕಿ೦ತ ಆತನ ಪ್ರಾ ಣರಕ್ಷಣಕ್ಕಾಗಿ ನಾನು ನನ್ನ ಜೀವವನ್ನು ಕಳಕೊಳ್ಳುವದೇ ಲೇ ಸೆಂದು ಮನಸ್ಸಿನಲ್ಲಿ ನಿರ್ಧರಿಸಿಕೊಂಡಳು, ಇಷ್ಟರಲ್ಲಿ ಶಕ್ತಿಮಯಿಯು ಆ ಚಿಕ್ಕ ಮಗುವು ಆಕೆಯ ತೊಡೆಯಿಂದ ಇಳಿದು ತಂದೆಯ ತೊಡೆಯ ಮೇಲೆ ಕುಳಿತು ತಾ ಯಿಯ ಕಡೆಗೆ ನೋಡುತ್ತ-ಅವ್ಯಾ, ನೀನು ಬಹಳ ದುಷ್ಟಳು. ಆದ್ದರಿಂದ ನಾನು ನಿನ್ನ ಬಳಿಗೆ ಬರುವದಿಲ್ಲ, ಎಂದು ನುಡಿಯಿತು. ಆ ಹಸುಗೂಸು ಅಕಲ್ಪಿತವಾಗಿ ನುಡಿದ ನುಡಿಯ ಪರಿಣಾ ನವ ಗಾಯಸುದ್ದೀನನಲ್ಲಿ ವಿಶೇಷವಾಗಿ ಆಗಲಿಲ್ಲ; ಆದರೆ ಶಕ್ತಿ ಯು ಅದನ್ನು ಕೇಳಿ ಮನದಲ್ಲಿ ಬಹಳ ನೊಂದುಕೊಂಡಳು. ಆಕೆ ಯು ಮನಸಿನಲ್ಲ-ದೇವಾ, ಈ ಕೂಸಿಗೆ ಕೂಡ ನನ್ನ ಸ್ವಭಾವವು ದುಷ್ಟವಾಗಿ ತೋರಿತಲ್ಲವೆ! ಧೂ, ಇಂಧ ನನ್ನ ಜೀವಿತವನ್ನು ಇಟ್ಟು ಕೊಂಡು ಬಾಳುವದಕ್ಕಿಂತ ನಿನ್ನ ನಾಮ ಸ್ಮರಣವನ್ನು ಮಾಡುತ್ತ ದೇಹಾವಸಾನ ಮಾಡಿಕೊಳ್ಳುವದೇ ವಿಹಿತವಾಗಿ ನನಗೆ ತೋರು ಇದೆ, ಎಂದು ಬಗೆದು ದೇವರನ್ನು ಅನನ್ಯ ಭಾವದಿಂದ ಪ್ರಾರ್ಥಿಸಿದಳು, ಗಾಯಸುದ್ದೀನನು ಎಡಬಲದ ಗಿಡಬಳ್ಳಿಗಳೊಳಗಿನ ಹೂಗ ಳನ್ನು ಆ ಕೂಸಿಗೆ ಹರಿದು ಕೊಡುತ್ತ ಅದರೊಡನೆ ಆನಂದದಿಂದ ಮಾ ತಾಡುತ್ತ, ಕಲೆಯುತ್ತ ಕುಳಿತಿದ್ದನು. ಕೆಲಹೊತ್ತಿನ ಮೇಲೆ ಅವ ರೆಲ್ಲರೂ ಅಲ್ಲಿಂದೆದ್ದು ಮಂದಿರದ ಕಡೆಗೆ ನಡೆದರು. ಆಗ ಸಮೀಪದ 2L