ಪುಟ:ಶಕ್ತಿಮಾಯಿ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೦ ಸ, ಚಂದ್ರಿಳ. ಒಂದನ್ನು ತನ್ನ ಮೈತುಂಬ ಹೊದ್ದುಕೊಂಡಳು. ಉಳಿದ ಒಂದು ಶಾಲಿನತುಂಡನ್ನೂ, ಪೀತಾಂಬರದ ಎರಡು ತುಂಡುಗಳನ್ನೂ ಯೋಗಿನಿಯ ಕೈಗಿತ್ತು, ಇವುಗಳಲ್ಲಿಯು ಒಂದು ಪೀತಾಂಬರದ ತುಂಡನ್ನು ನೀನು ಉಟ್ಟುಕೊಂಡು ಆ ಶಾಲನ್ನು ನನ್ನಂತೆ ಹೊದ್ದು ಕೋ, ರಾಗು ಆ ಇನ್ನೊಂದು ಪೀತಾಂಬರದ ತುಂಡನ್ನು ನಿನ್ನ ಬಗಲಲ್ಲಿ ಹಿಡಿದುಕೊಂಡುನಡೆ. ಕಾರಾಗೃಹಕ್ಕೆ ಮುಟ್ಟಿದ ಬಳಿಕ ಅದನ್ನು ಗಣೇಶದೇವನಿಗೆ ಉಡಲಿಕ್ಕೆ ಕೊಡು; ನಾನು ಹೊದ್ದು ಕೊಂಡಿರುವ ಈ ಶಾಲನ್ನು ಅವನಿಗೆ ಹೊಡೆಯಲಿಕ್ಕೆ ಕೊಡುವೆನು. ಬಳಿಕ ನೀವಿಬ್ಬರೂ ಬಂದದಾರಿಯಿಂದ ಕ್ಷಣಸಹ ವಿಲಂಬಮಾಡದೆ ತಿರುಗಿ, ಬಂದಜನರೇ ತಿರುಗಿ ಗುವರೆಂದು ತಿಳಿದು ಕಾವಲು ಗಾರರು ನಿನಗಾವತರದ ಅತಂಕವನ್ನೂ ಮಾಡಲಾರರು. ಯೋಗಿನೀ ನಡೆ ಹಾಗಾದರೆ, ಆ ಜೇಲಖಾನೆಗೆ ಹೋಗುವಾ, ಎಂದಳು. - ಗಣೇಶದೇವನ ಬದಲಾಗಿ ಶಕ್ತಿಯು ಬೇಲಿನಲ್ಲಿ ಉಳಿಯಬೇ ಕೆಂಬದು ಈ ಮೊದಲೇ ಅವರಿಬ್ಬರಲ್ಲಿ ಗೊತ್ತಾದ್ದರಿಂದ ಯೋಗಿನಿ ಯು ಆ ವಿಷಯಕ್ಕೆ ಪುನಃ ಪ್ರಶ್ನೆ ಮಾಡಲಿಲ್ಲ. ಗಣೇಶದೇವನಲ್ಲಿ ಸಂಪೂರ್ಣ ಅನುರಕ್ತಳಾದ ಶಕ್ತಿಗೆ, ಅವಳು ಪರಸ್ತ್ರೀಯಾದ್ದರಿಂದ ಈ ಜನ್ಮದಲ್ಲಿ ಅವನ ಸಂಘಟನದಯೋಗವು ಒದಗಿ ಬರುವ ಸಂಭವವಿ ದ್ವಿಲ್ಲ. ಅದರಿಂದ ಹಾಗೂ ಅವಳು ತನ್ನ ಶೇಷಾಯುಷ್ಯವನ್ನು ಅತ್ಯಂ ತ,ವಿರಹತಾಪದಿಂದಲೂ, ಪಶ್ಚಾತ್ತಾಪದಿಂದಲೂ ಸವಿಸಬೇಕಾಗಿತ್ತು; . ಆದರೆ ಅವಳನ್ನು ಹಾಗೆ ಅಖಂಡವಾಗಿ ಕೊರಗ ಹಚ್ಚುವದಕ್ಕಿಂತ ಪ್ರಸ್ತುತಪ್ರಸಂಗದಲ್ಲಿ ಅವಳು ಬಾದಶಹನ ವಿರುದ್ಧವಾಗಿ ಗಣೇಶ ದೇವನನ್ನು ಬಂಧ ಮುಕ್ತ ಮಾಡಿದರೆ ಬಾದಶಹನು ಕ್ರೋಧಾವೇಶ ದಿಂದ ಅವಳನ್ನು ತುಂಡರಿಸಿ ಬಿಡುವದು ಖಂಡಿತವು, ಹೀಗೆ ಆಕೆಯು ಒಮ್ಮೆ ಈ ನಿಂದ್ಯ ಜನ್ಮದಿಂದ ಪಾರಾದಳೆಂದರೆ ಆಕೆಗೆ ತಾನು ಪರಮ