ಶಕ್ತಿಮಯಿ. ೧೭೩ ಕಂಬಳಿ ಹಾಗು ಜೀರ್ಣವಾದದ್ದೊಂದು ವಸ್ತ್ರ ಇವುಗಳು ಬಿದ್ದಿದ್ದವು. ಅವಳು ಅವುಗಳನ್ನು ಒಳ್ಳೆ ಆದರದಿಂದ ಎತ್ತಿ ಹೃದಯದಲ್ಲಿರಿಸಿಕೊಂ ಡಳು. ಬಳಿಕ ಅವಳು ಆ ವಸ್ತ್ರವನ್ನು ಹಾಸಿ ಕಂಬಳಿಯನ್ನು ಹೊದ್ದು ಕೊಂಡು ಗಣೇಶದೇವನು ಮಲಗಿದ್ದ ಸ್ಥಳದಲ್ಲಿಯೇ ಬಿದ್ದು ಕೊಂಡಳು. ಇ೦ದು ಆಕೆಯು ತನ್ನ ಜೀವಿತದ ಪವಿತ್ರ ಕರ್ತವ್ಯವನ್ನು ಮುಗಿಸಿದ್ದ ರಿಂದ ಆಕೆಯ ಮನಸ್ಸು ಅತ್ಯಂತ ಉಲ್ಲಸಿತವಾಗಿತ್ತು. ಅದರಿಂದ ಅದು ಇಹದಲ್ಲಿಯ ಸೌಖ್ಯಾ ಸೌಖ್ಯಗಳಲ್ಲಿ ಲೀನವಾಗದೆ, ಶಾಶ್ವತನಾದ ಭಗವಂತನ ಗುಣ ಗಾನಮಾಡುವದರಲ್ಲಿ ಮಗ್ನವಾಗಿತ್ತು. ಕುತುಬನು ಶಕ್ತಿಯನ್ನು ಕಾರಾಗೃಹಕ್ಕೆ ಮುಟ್ಟಿಸಿ ತನ್ನ ಮನೆಗೆ ನಡೆದನೆಂದು ಹಿಂದಿನ ಒಂದು ಪ್ರಕರಣದಲ್ಲಿ ವಿವರಿಸಿತ್ತಷ್ಟೇ? ಆದರೆ ಜೈಲಿನಿಂದ ಹೊರಟ ಬಳಿಕ ಕುತುಬನು “ಈಗಲೇ ಬಾದಶಹನಿಗೆ ಶಕ್ತಿಯ ಈ ಗುಪ್ತ ಕಾರಸ್ಥಾನವನ್ನು ತಿಳಿಸಿ ಅವನನ್ನು ಇಲ್ಲಿಗೆ ಕರಕೊಂ ಡುಬಂದು ಇವಳ ಕೃತಿಯು ಅವನ ಕಣ್ಣಿಗೆ ಬೀಳುವಂತೆ ಮಾಡಬೇಕು. ಅ೦ದರೆ ಈವಳ ಈ ದುಷ್ಕೃತಿಯನ್ನು ನೋಡಿ, ಸಿಟ್ಟಿನ ಭರದಲ್ಲಿ ಬಾದ ಶಹನು ಗಣೇಶದೇವನನ್ನು ಆಗಿಂದಾಗಲೇ ತುಂಡರಿಸುವನಲ್ಲದೆ, ಇವಳನ್ನೂ ಕೊಲ್ಲಿಸಬಹುದು; ಇಲ್ಲವೆ ಇವಳನ್ನು ತ್ಯಜಿಸಿ ತನ್ನ ರಾಜ್ಯ ದಿಂದಾದರೂ ಹೊರಹೊರಡಿಸಬಹುದು ಎಂದು ಮನಸ್ಸಿನಲ್ಲಿ ಕಲ್ಪಿಸಿ ಕೊಂಡು ನೆಟ್ಟಗೆ ಮನೆಗೆ ಹೋಗಲಿಲ್ಲ. ಅವನು ಆ ಅಪರಾತ್ರಿಯಲ್ಲಿ ಪ್ರಾಸಾದಕ್ಕೆ ಬಂದನು. ಗಾಯಸುದ್ದೀನನು ಇನ್ನೂ ಮಲಗಿದ್ದಿಲ್ಲ. ಅವನು ಹಾಸಿಗೆಯ ಮೇಲೆ ಸುಮ್ಮನೆ ಅಡ್ಡಾಗಿದ್ದನು; ಅಗ ಕುತು ಬನು ಅಲ್ಲಿಗೆ ಹೋಗಿಬಾದಶಹನಿಗೆ ಕುರ್ನಸಾತ್ ಮಾಡಿದನು, ಕಡಲೆ ಬಾದಶಹನು ಲಗುಬಗೆಯಿಂದ ಹಾಸಿಗೆಯ ಮೇಲೆ ಎದ್ದು ಕುಳಿತನು; ಹಾಗು ಕುತುಬನಿಗೂ ಸಮೀಪದ ಒಂದು ಕಾಪ್ಪಾಸನದ ಮೇಲೆ ಕೂಡ್ರಲಿಕ್ಕೆ ಸೂಚಿಸಿದನು. ಆಗ ಕುತುಬನು ಆ ಖುರ್ಚಿಯನ್ನು
ಪುಟ:ಶಕ್ತಿಮಾಯಿ.djvu/೧೮೨
ಗೋಚರ