ಶಕ್ತಿಮುಯೂ ೧೭೫ ಹೊರಟು ಮಹಾಲಿನಹೊರಗೆ ಬಂದನು. ಅಷ್ಟರಲ್ಲಿ ಬಾಧಶಹನು ಪುನಃ ಅವನನ್ನು ಕರೆದು-ಎಚ್ಚರ ನೋಡು, ಕುತುಬ, ಬೇಗಮೆಯು ಕಾರಾಗೃಹದಿಂದ ಹೊರಬಿದ್ದು ಹೋಗುವವರೆಗೆ ಗಣೇಶದೇವನ ಶಿರಚ್ಛೇ ದವಾಗಂತೆ ಎಚ್ಚರಪಡತಕ್ಕದ್ದು. ತಿಳಿಯಿತೇ, ಎನ್ನಲು, ಖಾವಂದರವರ ಹುಕುಮಿನನಂತೆಯೇ ನಡಕೊಳ್ಳುವೆನು.' ಎಂದು ಹೇಳಿ ಕುತುಬನು ನಡೆದನು. ಆದರೆ ಶಕ್ತಿಯ ಕಾರಸ್ಥಾನವನ್ನೆಲ್ಲ ತಿಳಿಯದ ಕುತುಬನು ಬೇ ಲಿಗೆ ಬರುವಷ್ಟರಲ್ಲಿ ಮೊದಲನೇ ಪಹರೆಯವರು ಅಲ್ಲಿ ಇರಲಿಲ್ಲ. ಸುದ್ದಿ ಹೇಳಹೋದವನು ಕುತುಬನ ಮನೆಯಲ್ಲಿ ಅವನ ಹಾದೀಕಾಯುತ್ತ ಕುಳಿತಿದ್ದನು, ಕುತುಬನು ಬೇರೆ ಪಹರೆಯವರನ್ನು ವಿಚಾರಿಸಿದನು. “ಯಾರೋ ಇಬ್ಬರು ಹೆಂಗಸರು ತಮ್ಮ ಪಹರೆಯಕಾಲದಲ್ಲಿ ಈ ಪರ ವಾನಿಗೆಯ ಉಂಗುರವನ್ನು ತೋರಿಸಿ ಒಳಗೆ ಹೋಗಿದ್ದರು, ಆದರೆ ತುಸು ಹೊತ್ತಿನಲ್ಲಿಯೇ ಬಂದದಾರಿಯಿಂದ ಅವರು ತಿರುಗಿ ಹೋದರು.' ಎಂಬ ಸಂಗತಿಯನ್ನು ತಿಳಿಸಿ ಅವರು ತಮ್ಮಲ್ಲಿಯ ಉಂಗುರವನ್ನು ಅವನಿಗೆ ತೋರಿಸಿದರು. ಹಾಗಾದರೆ ಸದ್ಯಕ್ಕೆ ಗಣೇಶದೇವನೊಬ್ಬನೇ ಕೋಣೆಯಲ್ಲಿರುವನೆಂದು ತಿಳಿದು, ಶಿರಚ್ಛೇದಮಾಡುವದಕ್ಕಾಗಿ ಕುತು ಬನು ಅವನ ಕೋಣೆಯ ಬಳಿಗೆ ಹೋಗಿ, ಅವನು ಮಲಗಿರುವನೋ, ಎಜ್ಯ ತಿರುವನೋ ಎಂಬದನ್ನು ತಿಳಕೊಳ್ಳುವದಕ್ಕಾಗಿ ಆ ಕೋಣೆಯ ಕಿಟಿ ಕಿಯ ಹತ್ತಿರ ನಿಂತನು. ಆಗ ಕೋಣೆಯಲ್ಲಿ ಮಲಗಿದ್ದ ಶಕ್ತಿಮಯಿಯು ಸುಸ್ವಪ್ನಾವ ಸೈಯನ್ನು ಹೊಂದಿದ್ದಳು. ಆ ಸ್ವಪ್ನದಲ್ಲಿ ಅವಳಿಗೆ ತನ್ನ ಬಾಲ್ಯ ದಂತೆ ದೂರದಲ್ಲಿ ಗಣೇಶದೇವನು ಕೊಳಲಿನಲ್ಲಿ ಈ ಪದವನ್ನು ಹಾಡು ತಿರುವಂತೆ ಭಾಸವಾಗುತ್ತಿತ್ತು:
ಪುಟ:ಶಕ್ತಿಮಾಯಿ.djvu/೧೮೪
ಗೋಚರ