ಪುಟ:ಶಕ್ತಿಮಾಯಿ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ, ಪ್ರೇಮದಲ್ಲಿ ಬೆರೆತು ಹೋಯಿತು. ಆನಂದವೆಂಬ ಮಹಾಸಮುದ್ರದಲ್ಲಿ ಅವಳು ಮನಸೂತ್ರವಾಗಿ ವಿಹರಿಸುತ್ತಿದಳು. ಆಗ ಹೊರಗೆ ನಿಂತಿದ್ದ ಕುತುಬನು ಸಂಗಡಿಗನೊಬ್ಬನಿಗೆ ಕೈದಿಯು ಗಾಢನಿದ್ರೆಯಲ್ಲಿದ್ದಾನೆ; ಆದ್ದರಿಂದ ನಾನು ಕಾಲಲ್ಲಿ ಯೇ ನನ್ನ ಕೆಲಸವನ್ನು ತೀರಿಸಿಕೊಂಡು ಬರುತ್ತೇನೆ. ಅಷ್ಟರಲ್ಲಿ ನೀನು ಒಂದು ದೀಪವನ್ನು ತಕ್ಕೊಂಡು ಬಾ, ಎಂದು ಹೇಳಿಕಳಿಸಿ, ತಾನು ಆ ಕೋಣೆಯಲ್ಲಿ ಸೇರಿದನು. ಸಂಗಡಿಗನು ಹಿಲಾಲ(ದೀಪ) ನ್ನು ತಂದು ಆ ಕೋಣೆಯ ಬಾಗಿಲಲ್ಲಿ ನಿಲ್ಲಿಸುತ್ತಿದ್ದನು. ಅಷ್ಟರಲ್ಲಿ ಸುಲ್ತಾನ ಗಾಯಸುದ್ದೀನನು ಉನ್ಮತ್ತನಂತೆ ಓಡುತ್ತೋಡುತ್ತ ಅಲ್ಲಿ ಗೆ ಬಂದನು. ಆಗ ಕುಳ.ಬನು ಒಳಗೆ ಹೊಕ್ಕಿರುವನೆಂದು ಅವನಿ ಗೆ ತಿಳಿಯಲು, ಅವನ ಹೌಹಾರಿ, ತಾನು ಸ್ವತಃ ಬಾದಶಹನಿರುವೆನೆಂಬದ ರ ಅರಿವು ಕೂಡ ಅವನಲ್ಲಿ ಉಳಿಯದೆ, ಅವನು ಆ ಕತ್ತಲೆಯ ಕೋಣೆ ಯ ಹೊಕ್ಕನು. ಆದರೆ ಬಾದಶಹನು ಹೀಗೆ ಮದ್ದಾನೆಯಂತೆ ಒಳಗೆ ಹೋಗುವಷ್ಟರಲ್ಲಿ ಕುತುಬನೇ ಭಿನ್ನ ರುಂಡವನ್ನು ಕೈಯಲ್ಲಿ ಹಿಡಕೊಂಡು ಹೊರಗೆ ಬಂದನು. ಕಡಲೆ ಬಾದಶಹನು ಕುತುಬ ನನ್ನುದ್ದೇಶಿಸಿ-ಮುಳಬ, ಕೆಲಸವಿನ್ನೂ ಪೂರೈಸಿಲ್ಲವಷ್ಟೆ? ಸ್ವಲ್ಪ ತಡೆ; ಈಗಲೇ ಶಿರಚ್ಛೇದ ಮಾಡಬೇಡ. ಗಣೇಶದೇವನು ಇಲ್ಲಿಂದ ಓಡಿಹೋಗಿದ್ದು, ಅವನ ಸ್ಥಳದಲ್ಲಿ ಸುಲ್ತಾನೆಯು ಕುಳಿತಿರಬಹುದಾಗಿ ನನಗೆ ಸಂಶಯ ಬಂದಿದೆ. ಆದ್ದರಿಂದ ದೀಪದ ಬೆಳಕಿನಲ್ಲಿ ನೋಡಿ ಕೆಲಸಮಾಡು.” ಎಂದು ತೀರ ಅಧೀರತೆಯಿಂದ ನುಡಿದನು. ಆದರೆ ಕುತುಬನು ಬಾದಶಹನ ಮತಿಗೇನೂ ಉತ್ತರ ಕೊಡ ಅಲ್ಲ. ಕೈಯಲ್ಲಿಯ ಭಿನ್ನ ರುಂಡವನ್ನು ಬಾದಶಹನಿಗೆ ತೋರಿಸಿ, ತನ್ನ ಕೃತಿಯೆ-ಗಣೇಶದೇವನನ್ನೇ ಸಂಹರಿಸಿರುವೆನೆಂಬ ಕೃತಿಯ-ಸಮ ರ್ಥಮಾಡಿಕೊಳ್ಳಬೇಕೆಂದು ಅವನು ಅದನ್ನು ಬಾದಶಹನೆದುರಿಗೆ ದೀ