ವಿಷಯಕ್ಕೆ ಹೋಗು

ಪುಟ:ಶಕ್ತಿಮಾಯಿ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ne 4, ಚಂದ್ರಕ, ಪದಬೆಳಕಿಗೆ ಹಿಡಿದನು. ಆ ರುಂಡವನ್ನು ನೋಡಿ ಬಾದಶಹನು ಸಿಟ್ಟಿನಿಂದ ಎಚ್ಚರದ ಪಿ-ಕುತುಬ, ಇದು ಯಾರ ಶಿರವು? ಚೆನ್ನಾಗಿ ದೀಪದ ಮುಂದೆ ಹಿಡೆ ನೋಡೋಣ, ಎನ್ನಲು, ಕುತುಬನು ಅದನ್ನು ದೀಪದ ಹತ್ತರ ಕೈ ತಂದನು. ಕೂಡಲೆ ಬಾದಶಹನು (ಮತ್ತಿಷ್ಟು ಸಿಟ್ಟಿನ ಆವೇಶ ದಿಂದು-ಸೈತಾನ್, ಇದನ್ನೇನು ಮಾಡಿದೆ' ಎಂದು ಗಟ್ಟಿಯ ಗಿ ಕೂಗಿದವನೇ ಕ್ಷಣಹೊತ್ತು ಹುಚ್ಚನಂತೆ ಮುಗ್ಧನಾದನು. ಉತ್ತರಕ್ಷಣದಲ್ಲಿ ಅವನು ಸ್ಮೃತಿಹೊಂದಿ ಶಕ್ತಿಮಯಿಯನ್ನು ಕೊಂದದ್ದಕ್ಕಾಗಿ ಕುತುಬನನ್ನು ಅಲ್ಲಿಂದಲ್ಲಿಯೇ ತುಂಡುತುಂಡಾಗಿ ಸಂಹರಿಸಿದನು; ಆ ಬೇಲಖಾನೆಯ ಕಾವಲುಗಾರರನ್ನು ಸಂಹುಸಿ ದನು; ಕುಮಾರಸಾಹೇಬುದ್ದೀನನ್ನೂ ಸಂಹರಿಸಿಬಿಟ್ಟನು. ಅಸ ರಾಧಿ-ನಿರಪರಾಧಿಗಳನ್ನೊ೦ದೂ ವಿಚಾರವಾಡದೆ ತನ್ನ ಪ್ರಿಯತಮೆ ಯ ಸಂಚಾರದಿಂದ ಉನ್ಮತ್ತನಾದ ಆ ಯವನ ಬಾದಶಹನು ಕಂಡ ಕಂಡವರನ್ನು ಕೊಲ್ಲಲಿಕ್ಕೆ ಆಜ್ಞಾಪಿಸಹತ್ತಿದನು. ಬಾದಶಹನ ರೆ: ಅತ್ಯಾಚಾರಕ್ಕಾಗಿ ಪಾಂಡುಯಾ ನಗರದ, ಅದರಂತೆ ವಂಗ ದೇಶದ, ಎಲ್ಲ ಪ್ರಜೆಗಳ ಹೃತ್ಕಂಪವಾಯಿತು. ಕೆಲವರು ಗುಪ್ತವಾಗಿಯೂ, ಬೇರೆ ಕೆಲವರು ಡಾಣಾಡಂಗುರವಾಗಿಯ ಗಣೇಶದೇವನ ಪಕ್ಷವ ಹಿಸಿದರು. ಮದಾಂಧನಾದ ಗಾಯಸುದ್ದೀನನು ಪನಃ ಗಣೇಶದೇ ವನೊಡನೆ ಯುದ್ಧ ಹೂಡಿದನು. ಆದರೆ ಎಣ್ಣೆ ತೀರಿದ ದೀಪದಂತೆ ಆ ಬಾದಶಹನ ಪಕ್ಷವು ಕ್ಷಿಪ್ರದಲ್ಲಿಯೇ ಕ್ಷಯವಾಯಿತು. ಹೀಗೆ ಎಲ್ಲರ ಸಂಹಾರಕ್ಕೆ ಕಾರಣನಾದ ಗಾಯಸುದ್ದೀನನೂ ಆ ಯುದ್ಧ ದಲ್ಲಿ ಸಂಹರಿಸಲ್ಪಟ್ಟನು.