ಪುಟ:ಶಕ್ತಿಮಾಯಿ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ ೧೩ ಧನು ತನ್ನ ಕುದುರೆಯನ್ನು ಎಲ್ಲಕ್ಕೂ ಮುಂದೆ ನೂಕಿದನು. ಕೂಡಲೆ ಕುದುರೆಯು ಹೇಕರಿಸುತ್ತ ಬಾದಶಹನ ಸನಿಯಕ್ಕೆ ಬರಲು, ಈ ವರೆಗೆ ಕೇವಲ ಮುಗ್ಧಭಾವವನ್ನು ಧರಿಸಿದ್ದ ಜನಸಮೂಹವು ಏಕಸಮಯಾ ವಚ್ಛೇದದಿಂದ "ರಾಜಕು ವಾರ ಗಣೇಶದೇವಕೀ ಜಯ ಎಂಬ ಜಯಘೋಷವನ್ನು ಮಾಡಿತು. ಆ ಅಶ್ವಾರೋಹಿಯಾದ ಯುವಕನು ನೆಟ್ಟಗೆ ಮಂಗೇಶ್ವರನಬಳಿಗೆ ಬಂದು ಅವನನ್ನು ತಿವಾರ ಅಭಿನಂದಿಸಿ ಆಮೇಲೆ ಗುರಿಯಕಡೆಗೆ ದಿಟ್ಟಿಸಿನೋಡಿ ತನ್ನ ನಿಡಿದಾದ ಬಾಣವನ್ನು ಬಿಟ್ಟನು. ಬಾಣದ ಸ ಶಬ್ದವು ಅಡಗುವಷ್ಟರಲ್ಲಿ ಪುನಃ 'ರಾಜಕು ಮಾರ ಗಣೇಶದೇವಕೀಜಯ ಎಂಬ ಜಯಘೋಷವಾಯಿತು. ಬಳಿಕ ಎಲ್ಲ ಜನರು ಪಾಪಾಣಮೂರ್ತಿಯ ಚತುಷ್ಪಾರ್ಶ್ವಗಳಲ್ಲಿ ಸುತ್ತು ವರೆದು ನೋಡುತ್ತಾರೆ, ಬಾಣವು ಪಕ್ಷಿಯ ಕಣ್ಣನ್ನು ಮಾತ್ರ ಒಡೆದು ಪಾರಾಗಿಹೋಗಿದೆ; ಉಳಿದ ಯಾವ ಅವಯವಗಳಿಗೂ ಬಾಣದ ಆಘಾತವಾಗಿರಲಿಲ್ಲ! ಆಗ ಎಲ್ಲರಮುಖದಿಂದಲೂ "ದಿನಾಜಪುರದ ರಾಜಕುಮಾರನಾದ ಗಣೇಶದೇವನು ಈ ಪಣವನ್ನು ಗೆದ್ದನು. ಧನ್ಯ! ಧನ್ಯ!” ಎಂಬ ಶಬ್ದಗಳು ಹೊರಡಹತ್ತಿದವು. ಅವನ ಸನ್ಮಾನಕ್ಕಾಗಿ ಪ್ರೇಕ್ಷಕವೃಂದವು ಜಯಜಯಕಾರಮಾಡುತ್ತಿರಲು, ಸಭಾಸದರು ಪುಷ್ಪವೃಷ್ಟಿಗರೆಯುತ್ತಿರಲು, ಗಣೇಶದೇವನು ತನ್ನ ಅಶ್ವದಿಂದಿಳಿದು ಬಾದಶಹನ ಹತ್ತಿರಕ್ಕೆ ಹೋದನು. ಆಗ ಸುಲ್ತಾನನೂ ಕುದುರೆಯಿಂ ದಿಳಿದು ಆ ರಾಜಕುಮಾರನನ್ನು ಗೌರವಿಸತೊಡಗಿದನು. ವಂಗೇಶ್ವ ರನು ಕುಮಾರನಿಗೆ 'ರಾಯಬಹದ್ದೂರ' ಎಂಬ ಬಿರುದನ್ನು ದಯಪಾ ಲಿಸಿದ್ದಲ್ಲದೆ, ಒಂದು ಅಮೂಲ್ಯ ಖಡ್ಗವನ್ನು ತನ್ನ ಸ್ವಂತಕಮ್ಮಿಂದ ಅವನ ಟೊಂಕದಲ್ಲಿ ಕಟ್ಟ ಹತ್ತಿದನು. ನಾಲ್ಕೂ ಕಡೆಯಿಂದ ಪುನಃ ಜಯ ಜಯಕಾರಶಬ್ದವೂ, ಪುಷ್ಪವೃಷ್ಟಿಯ ಆಗಹತ್ತಿದವು. ಇಷ್ಟೊ ತಿನವರೆಗೆ ದೂರನಿಂತು ಕುಮಾರನು ಗುರಿಹೊಡೆಯುವದನ್ನು ನೋಡು