ಪುಟ:ಶಕ್ತಿಮಾಯಿ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಸ, ಚಂದ್ರಿಕೆ. ತಿದ್ದ ಒಬ್ಬ ರಮಣೀಮಣಿಯು, ಈಗ ಆ ಸಭೆಯ ತೀರ ಹತ್ತಿರಕ್ಕೆ ಬಂದು, ಅಲ್ಲಿದ್ದ ಒಂದು ಎತ್ತರವಾದ ಬಂಡೆಗಲ್ಲಮೇಲೆ ನಿಂತು ರಾಜಕುಮಾರನನ್ನು ಸನ್ಮಾನಿಸುವದಕ್ಕಾಗಿ ತನ್ನ ಕೊರಳೊಳಗಿನ ಒಂದು ಒಣಹೂಮಾಲೆಯನ್ನು ತೆಗೆದು ಕುಮಾರನ ಕೊರಳೊಳಗೆ ಬೀಳುವಂತೆ ಅದನ್ನು ನಿಂತಲ್ಲಿಂದಲೇ ತೂರಿದಳು. ಆದರೆ ಒಣಗಿ, ಬಾಡಿದ್ದ ಆ ಮಾಲೆಯು ಕುವರನ ಕೊರಳಲ್ಲಿ ಹೋಗಿಬೀಳದೆ, ಸು ಲ್ಯಾನನ ಮೈಗೆ ತಾಕಿ ನೆಲಕ್ಕೆ ಬಿತ್ತು. ಅದರಿಂದ ಕುಮಾರನಿಗೆ ಖಡ್ಗ ವನ್ನು ಕಟ್ಟುತ್ತಿದ್ದ ಸುಲ್ತಾನನ ಲಕ್ಷಭೇದವಾಗಲು, ಅವನ ಕೈ ಯಿಂದ ಖಡ್ಗವು ಚಾರಿ ನೆಲಕ್ಕೆ ಬಿತ್ತು. ಕೂಡಲೆ ಅವನು ತನ್ನ ಬೊ |ದಮುಖವನ್ನು ಮೇಲೆಮಾಡಿ ಸುತ್ತಲೂ ನೋಡಹತ್ತಿದನು. ಸುಲ್ತಾ ನನಿಗೆ ತಾಕುವಂತೆ ಮಾಲೆ ಒಗೆದಿದ್ದ ಆ ತರುಣಿಯನ್ನು ಸಭಿಕರೆಲ್ಲರೂ ಸಿಟ್ಟಿನಿಂದ ನೋಡ ಹತ್ತಿದರು. ಆಗ ಸುಲ್ತಾನ ಪುತ್ರನಾದ ನಬಾಬ ಗಾಯಸುದ್ದೀನನು ನೆಲದ ಮೇಲೆ ಬಿದ್ದಿದ್ದ ಆ ಒಣಮಾಲೆಯನ್ನು ಕೈಯಲ್ಲಿ ತಕ್ಕೊಂಡು_ಕುಮಾರಗಣೇಶದೇವ, ಅದಾರು ಈ ಒಣ ಮಾಲೆಯನ್ನು ನಿನ್ನ ಸನ್ಮಾನಕ್ಕಾಗಿ ಅರ್ಪಿಸಿರುವರು? ಎಂದು ಹಾಸ್ಯ ಪೂರ್ವಕ ಪ್ರಶ್ನೆ ಮಾಡಿದನು. ಸುಲ್ತಾನಪುತ್ರನ ನಗೆಯಿ೦ದ ಸಭಿಕ ರಲ್ಲಿಯ ಸಿಟ್ಟು ಇಳಿಯಿತು. ಆಗ ಸುಲ್ತಾನನೂ ನಕ್ಕು ಮತ್ತೆ ಖಡ್ಗವನ್ನು ಗಣೇಶದೇವನಿಗೆ ಕಟ್ಟತೊಡಗಿದನು ಪುನಃ ಜಯಜಯ ಕಾರವಾಯಿತು. ಜನರು ಹೂಗಳನ್ನು ತೂರಿದರು. ಅಷ್ಟರಲ್ಲಿ ಸಂದಟಿತವಾದ ಜನರೊಳಗಿಂದ ಒಬ್ಬ ತರುಣಿಯು-ಬಕುಲಮಾಲೆ ಯನ್ನು ತೂರಿದ ತರುಣಿಯು-ಕಾಲುಗಳನ್ನ ಪ್ಪಳಿಸಿ ತನ್ನ ಬರವನ್ನು ವ್ಯಕ್ತಗೊಳಿಸುತ್ತ ನಬಾಬ ಗಾಯಸುದ್ದೀನನ ಸನಿಯಕ್ಕೆ ಬಂದಳು. ಅವಳು ಅವನನ್ನು ಅಭಿನಂದಿಸಿ-“ನನ್ನ ಹೂಮಾಲೆಯು ನನಗೆ ಮರಳಿದೊರೆಯುವ ಆಜ್ಞೆಯಾಗಬೇಕು' ಎಂದು ದಿಟ್ಟತನದಿಂದ