ವಿಷಯಕ್ಕೆ ಹೋಗು

ಪುಟ:ಶಕ್ತಿಮಾಯಿ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- --- -- So ಕ. ಚಂದ್ರಿಕ. ಕುದುರೆಯನ್ನು ಹಿಡಕೊಂಡು ನನ್ನ ಸಂಗಡ ಬಾ, ಅಕೋ ಅಲ್ಲಿ ಕೂತು ಕೆಲಹೊತ್ತು ಮಾತಾಡೋಣವಂತೆ, ಎಂದು ನುಡಿದು ಮುಂದೆ ಸಾಗಲು ಕುಮಾರನು ಶಕ್ತಿಯ ಹಿಂದೆ ಹಿಂದೆ ಹೋಗಿ, ಕುದುರೆಯ ಲ ಗಾಮವನ್ನು ಅಲ್ಲಿಯ ಒಂದು ಕಂಟಿಗೆ ಕಟ್ಟಿದನು. ನದೀತೀರದದಟ್ಟ ವಾದ ಗಿಡಗಳ ಮಧ್ಯದಲ್ಲಿ ಆಗಲೆಕೊಡಲಿಯಿಂದ ಕಡಿದು ಉರಳಿಸಿದ ಒಂದು ಹುಣರೇಮರವಿತ್ತು. ಅದರ ಒಟ್ಟಾರೆಯು ನೀರಿನಲ್ಲಿಯ ಉಳಿದ ಭಾಗವು ನೆಲದಮೇಲೆಯೇ ಬಿದ್ದಿತ್ತು. ' ಶಕ್ತಿಯು ಅಲ್ಲಿಗೆ ಬಂ ದು ಅದರಬೊಟ್ಟೆಯಮೇಲೆ ಕುಳಿತಳು. ಕುಮಾರನು ಶಕ್ತಿಯಹತ್ಯ ರ ಮರದಒಂದು ಕೊಂಬೆಯನ್ನು ಹಿಡಕೊಂಡುನಿಂತನು. ಸೂರ್ಯ ನು ಅಸ್ತಂಗತನಾಗಿದ್ದನು. ಆದರೆ ನಿರಾಕಾಲದ ಧಮ್ರವರ್ಣ ವುತೃದ್ಧಿಯನ್ನು ಇನ್ನೂ ಆವರಿಸಿದ್ದಿಲ್ಲ. ಪಶ್ಚಿಮದಿಕ್ಕಿನ ಆಕಾಶದಲ್ಲಿ ಪ್ರಕಾಶಿಸುವ ಕೆಂಪುಬಣ್ಣದ ತೇಜೋಮೇಘಗಳು ಸಾಲುಗೊಂಡಿದ್ದ ವು. ಅವುಗಳ ಕಾಂತಿಯಿಂದ ಜಲ, ಸ್ಥಳಗಳು ಒಳ್ಳೆ ಕೆಂಪಾಗಿ ತೋರುತ್ತಿದ್ದವು. ಆದರೆ ಶಕ್ತಿಯ ಸುಂದರವಾದ ಮುಖದಮೇಲೆ ಆರಕ್ತ ಕಾಂತಿಯು ಶೋಭಿಸಿದಷ್ಟು ಮತ್ತೆಲ್ಲಿಯೂ ಅದು ಶೋಧಿ ಸಿರಲಿಕ್ಕಿಲ್ಲ. ಶಕ್ತಿ ಕುಮಾರಿಕೆಯು ಬಂಗಾಲದ ಸರ್ವಸಾಧಾರಣ ಹೆಂಗಸರಂ ತೆ ಸಂಪಿಗೆಯ ಬಣ್ಣದ ಅಥವಾ ಬಿಳಿಭಾಯೆಯುಕ್ತ ಅರಿಶಿನ ಮೈ ಬಣ್ಣದ ಹೆಣ್ಣು ಮಗಳಾಗಿದ್ದಿಲ್ಲ; ಆಕೆಯ ಮೈಬಣ್ಣವು ಇರಾನೇ ಹೆಂಗಸರಂತೆ ತೇಜೋಮಯ-ಪ್ರಫುಲ್ಲ-ಪ್ರದೀಪ್ತವಾದ ಸುವರ್ಣಕಾಂ ತಿಯುಳ್ಳದ್ದಾಗಿತ್ತು. ಬರೇ ಮೈಕಾಂತಿಯೇ ಅಲ್ಲ, ಅವಳ ಹವಣಿ ಯ ನಿಡಿದಾದ ಸರಳ ಮಗು, ವಕ್ರರೇಖೆಯಂತೆ ಮುಚ್ಚಲ್ಪಟ್ಟ ಓಹ್ವಾಧರಗಳು, ಬೇರೆ ಬೇರೆಯಾಗಿ ಕಾಣುವ ಸಾಧಾರಣ ಗಲ್ಲಗಳು, ಕರಿಯ ಹುಬ್ಬುಗಳೆಂಬ ಧನುಷ್ಯಗಳಿಂದ ಪರಿವೇಷ್ಟಿತಗಳಾದ ಕಮಲ