ಪುಟ:ಶಕ್ತಿಮಾಯಿ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓ ಚಕ ಈ ಅಪರಿಚಿತ ವ್ಯಕ್ತಿಯನ್ನು ಕಂಡು ಆಕೆಯು ಕೊಂಚವೂ ಅಲ್ಲ ಜಲಿಲ್ಲ. ಆಕೆಯು ಯವನನ ಸ್ಪರ್ಶದಿಂದ ಕ್ರುದ್ಧಳೂ, ತಿರಸ್ಕಾರ ಯುಕ್ತಳೂ ಮಾತ್ರ ಆಗಿ, ಸಿಟ್ಟಿನಿಂದ-'ಎಲ್ಲಿಯ ಹತಭಾಗ್ಯನು ನೀನು? ಯಾಕೆ ನನ್ನನ್ನು ಮುಟ್ಟಿದೆ? ” ಯವನನು ಮೆಲ್ಲ ಮೆಲ್ಲಗೆ ಮಾತಾಡತೊಡಗಿದನು:- ನೀನು ಮರ್ಛಾಗತಳಾಗಿ ಬಿದ್ದಿರುವೆಯೆಂದು ನಾನು ತಿಳಕೊಂಡಿದ್ದೆನು.” ಅವನ ಮಾತು ಮುಗಿಯುವಷ್ಟರಲ್ಲಿ ಶಕ್ತಿಯು ನನ್ನ ಮ ರ್ಛಯು ತಿಳಿದಿರಲಿ ಅಥವಾ ಹಾಗೇ ಇರಲಿ, ನಿನಗೇತಕ್ಕೆ ಆ ಗೊಡ ಮೆಯುಗಿ ನೀನು ಯವನನಾಗಿದ್ದು ನನ್ನ ಸ್ನೇಕೆ ಮುಟ್ಟಿದೆ? ಆಗ ಆ ಯವನನು ಆ ಗಿಡದ ಕೆಳಗೆ ಕುಳಿತು ತನ್ನ ತಲೆಯಮೇ ಲಿನ ಮುಂಡಾಸವನ್ನು ತೆಗೆದುನೆಲದಮೇಲೆ ಅಂಗಾತವಾಗಿಟ್ಟು ಕೆಲ ನಮೇಲೆ ಮತ್ತೆ ಅದನ್ನು ಚೆನ್ನಾಗಿ ತಲೆಗೆ ಸುತ್ತಿದನು. ಬಳಿಕ ಅವನು-ಮುಟ್ಟಿದ್ದರಲ್ಲಿ ದೆಹವೇನು? ನಿನ್ನನ್ನು ಯಾವ ದೇವರು ಯಾವ ಘಟಕಗಳಿಂದ ನಿರ್ಮಿಸಿರುವನೋ ನನ್ನನ್ನೂ ಅದೇ ದೇವರು ಅವೇ ಘಟಕಗಳಿಂದ ನಿರ್ಮಿಸಿರುವನು, ನೀನು ಹಾಗೆ ಮನುಷ್ಯ ಹಾಗೆಯೇನಾನೂ ಮನುಷ್ಯನು, ನಿನ್ನ ನನ್ನ ಸ್ಪರ್ಶಗಳಲ್ಲಿದೋಷವೇನು? ಶಕ್ತಿ-ಮಡಿಬಾಳೆ, ನೀನು ಗಂಡಸು, ನಾನು ಹೆಂಗಸು; ನೀನು ಮುಸಲ್ಮಾನ, ನಾನು ಹಿಂದೂ; ನೀನು ನೀಚವಂಶದವನೂ ನೀಡಧರ್ಮದವನೂ ಇರುವೆ; ನನ್ನ ವಂಶವೂ ಧರ್ಮಗಳೂ ಪರ ಮ ಶ್ರೇಷ್ಠವಾದವುಗಳು. ಭಗವಂತನೇ ನಮ್ಮಿಬ್ಬರನ್ನೂ ಸೃಷ್ಟಿಸಿರು ವದು ನಿಜವು, ಆದರೆ ಒಬ್ಬರಂತೆ ಮತ್ತೊಬ್ಬರನ್ನು ಮಾಡಿಲ್ಲ. ನೀನೂ ಸ್ವತಂತ್ರ ಮನುಷ್ಯನು; ನಾನೂ ಸ್ವತಂತ್ರ ಮನುಷ್ಯಳು. ಕತ್ತಲೆಯೊಳಗೆ ಶಕ್ತಿಯ ಕೆಂಪಡರಿದ ಕಣ್ಣುಗಳು ಯವನನಿಗೆ ಕಾಣಲಿಲ್ಲ. ಆದರೆ ಆಕೆಯ ಕರೋರಧ್ವನಿಯು ಮಾತ್ರ ಸ್ಪಷ್ಟವಾಗಿ