عدت رفته ಕೇಳಿಸಿತು. ಆಗ ಅವನು-ಹೌದು, ಈಶ್ವರನು ಎಲ್ಲರನ್ನೂ ಸ್ವತಂ ತ್ರರನ್ನಾಗಿ ನಿರ್ಮಿಸಿರುವದೇನೋ ಸತ್ಯವು; ಆದರೆ ಸ್ವತಂತ್ರ ನಿಯ ಮದಿಂದ ಮಾತ್ರ ಯಾರನ್ನೂ ನಿರ್ಮಿಸಿರುವದಿಲ್ಲ. ಹಿಂದೂ- ಮುಸ ಲ್ಯಾನ, ಶ್ರೀಮಂತ-ದರಿದ್ರ ಇವರನ್ನೆಲ್ಲ ಒಂದೇ ಚೈತನ್ಯವು ಸಂಚರಿಸು ತದೆ. ಒಂದೇ ಪ್ರಕಾರದ ನ್ಯಾಯಧರ್ಮಗಳು ಅವರನ್ನು ಪರಿಪಾ ಲಿಸುತ್ತದೆ. ದೇವರಿಗೆ ಎಲ್ಲರೂ ಸಮಾನರೇ, - ಗಣೇಶದೇವನ ತಾಯಿಯಿಂದ ಅಪಮಾನಹೊಂದಿದ ಶಕ್ತಿಯು ಕೆಲಹೊತ್ತಿನ ಪೂರ್ವದಲ್ಲಿ ಅಂತರಂಗದಲ್ಲಿ ಇದೇ ತತ್ವವನ್ನು ವಿಚಾರಿ ಸುತ್ತಿದ್ದಳು. ಈಗ ಯವನನ ಬಾಯಿಂದಾದರೂ ತನ್ನ ಅಭಿಶಾ ಪದ ಇನರಾವೃತ್ತಿಯಾದಂತೆ ಆಕೆಗೆ ಕೇಳಿಸಿತು. ಆಗ ಅವಳು ತುಸು ಮೆಟ್ಟಿ ಬಿದ್ದಳು; ಮತ್ತು ಈ ಮುಸಲ್ಮಾನನು ಸಾಮಾನ್ಯ ಮನುಷ್ಯ ನಿಂದು ಆಕೆಯು ಕಂಡು ಹಿಡಿದಳು. ತನ್ನ ಮನೋಗತವು ಇವ ನಿಗೆ ಗೊತ್ತಿರುವದೆಂದು ಅಕೆಯ ನಿದರ್ಶನಕ್ಕೆ ಬಂತು. ಆ ಕೂಡಲೆ ಅವಳು-ಹಾಗಾದರೆ ಪ್ರಪಂಚದಲ್ಲಿ ನಾವೆಲ್ಲರೂ ಸಮಾನರಾಗಿದ್ದರೆ ಈ ಭೇದಭಾವವೇಕೆ ಇರುತ್ತಿತ್ತು? ಅಜ್ಞಾನ-ಮಾಯಾ ಇದೇ ಇದಕ್ಕೆ ಕಾರಣವು ಎಂದು ಪ್ರತ್ಯುತ್ತರವು ಪ್ರಾಪ್ತವಾಯಿತು. ಶಕ್ತಿ-ಈ ಮೂಯೆಯ ಅವಶ್ಯಕತೆಯೇನು? ಈ ಮಾಯೆಯೇ ಇಲ್ಲಿಯ ಎಲ್ಲ ದುಃಖಗಳಿಗೆ ಕಾರಣವಾಗಿರಲು, ಭಗವಂತನು ಈ ಮಾಯೆಯ-ಅಜ್ಞಾನವನ್ನು ಸಂಸಾರದಿಂದ ದಾಕೆ ತೆಗೆದು ಹಾಕಿರುವದಿಲ್ಲ? " ಮುಸಲ್ಮಾನ-ಮಾಯೆಯನ್ನು ಕಿತ್ತೊಗೆದರೆ ಸೃಷ್ಟಿಯಲ್ಲಿ ಉಳಿಯುವದೇನು? ತನ್ನ ಸೃಷ್ಟಿಯ ರಕ್ಷಣಕ್ಕಾಗಿಯೂ, ತನ್ನ ಉ ದೇಶ ಸಾಧಿಸುವದಕ್ಕಾಗಿಯ ಭಗವಂತನಿಗೆ ಈ ಮಾಯೆಯ
ಪುಟ:ಶಕ್ತಿಮಾಯಿ.djvu/೪೬
ಗೋಚರ