೪e ಸ ಚಂದ್ರಿಕೆ ವನ್ನಿಟ್ಟು ಶಕ್ತಿಯ ತಂದೆಯು ಈವರೆಗೆ ಈಕೆಯ ವಿವಾದವನ್ನು ಮಾಡಿದ್ದಿಲ್ಲ. ಶಕ್ತಿಗಾದರೂ ಈಹೊತ್ತಿನವರೆಗೆ ಆ ಮಾತಿನಲ್ಲಿ ಸಂ ಪೂಣ೯ವಿಶ್ವಾಸವಿತ್ತು, ಆದರೆ ತನ್ನ ಪ್ರಿಯನು-ಗಣೇಶದೇವನು, ತನ್ನ ನ್ನು ಧಿಕ್ಕರಿಸಿದ್ದರಿಂದ ಆಕೆಗೆ ಅದೆಲ್ಲ ಈ ದಿವಸ ಸುಳ್ಳೆಂದು ಮನವರಿಕೆಯಾಯಿತು. ಆಕೆಯ ಎಲ್ಲ ಆಶಾಕಲ್ಪನೆಗಳೂ ಈ ದಿನ ಸುಳ್ಳಾದವು, ಆದ್ದರಿಂದ ಮುಸಲ್ಮಾನನ ಮಾತಿನಿಂದ ಆಕೆಯಲ್ಲಿ ಆ ಹೈಾದವುಂಟಾಗುವುದರ ಬದಲು ಕಡುಕೋಪವುಂಟಾಗಲು, ಅವಳು ಈ ಸಂಗತಿಯನ್ನು ಈ ಮೊದಲೇ ನಾನು ಅನೇಕರ ಬಾಯಿಂದ ಕೇಳಿ ರುವದರಿಂದ ಈಗ ಪುನಃ ಇದನ್ನು ಕೇಳಲು ಇಚ್ಛಿಸುವದಿಲ್ಲ. ಸಾ ಧುಸಂತರ ಬಾಯಿಂದ ಈ ತರದ ಉಪಹಾಸೋಕ್ತಿಗಳು ಹೊರಡಬ ಹುದೇ? ಒಬ್ಬನ ಹೃದಯವನ್ನು ಕೂಡ ವಶೀಕರಣಮಾಡಿಕೊಳ್ಳಲಿಕ್ಕೆ ಯಾವಳು ಅಶಕ್ತಳೂ, ಅಸಮರ್ಧಳೂ ಆಗಿರುವಳೋ, ಅವಳು ನೂರಾರು ಜನ ರಾಜಮಹಾರಾಜರುಗಳ ಹೃದಯಗಳನ್ನು ಹ್ಯಾಗೆ ತುಳಿದಾಳು? ಮುಸಲ-ಇದು ಉಪವಾಸವಲ್ಲ, ಅನೇಕ ಜನರ ಸುಖದುಃ ಖಗಳನ್ನು ಒರೆಹಚ್ಚಿನೋಡುವದಕ್ಕಾಗಿಯೇ ದೇವರು ನಿನ್ನನ್ನು ಸೃ ಮೈಸಿರುವನು. ಕ್ಷಮೆಯೇ ನಿನ್ನ ಏಕನಿಷ್ಠ ಆಳು. ನೀನು ರಾಜರಾ ಜೇಶ್ವರಿಯು.........
- ಶಕ್ತಿಯು ತುಸು ಅವಿಶ್ವಾಸತಾಳಿ ನಕ್ಕಳು. ಆ ನಗೆಯಲ್ಲಿ ನಿರಾಶೆಯ ಹೊಳಪು ಸ್ಪಷ್ಟವಾಗಿ ತೋರುತ್ತಿತ್ತು. ಆಗ ಅವಳು ದೇವರು ನನ್ನನ್ನು ಕ್ಷಮಾಶೀಲಳನ್ನಾಗಿ ಮಾಡುವನೇ? ಹೀಗಾದೀ ತೆ೦ದು ನಾನೂ ಒಮ್ಮೆ ಮನಸ್ಸಿನಲ್ಲಿ ಭಾವಿಸಿದ್ದೆನು, ಆದರೆ ಈಗ ನೋಡಿದರೆ ನನ್ನ ಆ ಭಾವನೆಯು ಕೇವಲ ಅಸಂಭವವೆಂದು ಮಾತ್ರ ತೋರುತ್ತದೆ. ದರಿದ್ರ ಕನ್ಯಯಾದ ಈ ಶಕ್ತಿಮಯಿಯು ರಾಜರಾಜೇ