೪೮ - na*
- *
- *
ಸ ಚಂದ್ರಿಕೆ ಪ್ರಸಂಗದಲ್ಲಿ ಅವನು ನಿನಗೆ ಯಾವ ಬಗೆಯ ಅನ್ಯಾಯವನ್ನೂ ಡಿರುವದಿಲ್ಲ. ನೀನು ಮಾತ್ರ ಅವನೊಡನೆ ಈಗ ಸುಮ್ಮ ಸುಮ್ಮನೆ ದ್ವೇಷ ಬೆಳಿಸುತ್ತಿ, ಶಕ್ತಿ:-ನಾನೇ ದ್ವೇಷ ತಾಳುವೆನೇ? ವಿಶ್ವಾಸಕ್ಕೆ ಪಾತ್ರನೂ, ಪ್ರೇಮಕ್ಕೆ ಯೋಗ್ಯನೂ, ಹೃದಯದ ಅಧಿಕಾರಿ ಎಂದು ಯಾವ ನನ್ನು ಈ ಬಡ ಭಿಕ್ಷುಕಿಯು ನಂದಳೋ, ಆ ನೀಹನೇ ನನಗೆ ಪ್ರತಿ ರೋಧವನ್ನು ಮಾಡಿದ ಬಳಿಕ ನಾನು ಅವನ ದ್ವೇಷಮಾಡದೆ, ಮತ್ತೆ ನು ಮಾಡಬೇಕೆನ್ನುವೆ? ಬೋಗಿನಿ-ತಂಗೀ, ನಿನಗೆ ಮರುಳು ಹಿಡಿದಿದೆ. ದಯ ಧರ್ಮವು ಉಚ್ಛಧರ್ಮವು, ಇದರಲ್ಲೇನೂ ಸಂದೇಹವಿಲ್ಲ. ಆದರೆ ಹೃದಯಧರ್ಮವೆಂದು ಯಾವುದಕ್ಕೆ ನೀನು ಕರೆಯುತ್ತೀ? ಪರಸ್ಪರರ ದೃಢಪ್ರೇಮವೇ ಹೃದಯ ಧರ್ಮವಾಗಿದೆ. ನೀನು ಯಾರನ್ನು ಪ್ರೀತಿ ಸುವೆಯೋ ಅವರೂ ಅದರಂತೆ ನಿನ್ನನ್ನು ಪ್ರೀತಿಸಿದರೆ ಮಾತ್ರ ಅದಕ್ಕೆ ಹೃದಯಧರ್ಮವೆಂತಾಗಲಿ, ಪ್ರಯಧರ್ಮವೆಂತಾಗಲಿ ಹೇಳಬ ಹುದು; ಮತ್ತು ಈ ಪ್ರಕಾರದ ಪ್ರೇಮವು ಪರಸ್ಪರರಲ್ಲಿ ಉಂಟಾ ದಾಗಲೇ ಒಬ್ಬರು ಇನ್ನೊಬ್ಬರ ಹೃದಯದ ಅಧಿಕಾರಿಯಾಗುವರು. ಈ ಬಂಧನಕ್ಕೊಳಪಟ್ಟವರು ಹೃದಯಧರ್ಮವನ್ನು ಅನ್ನ ಮಾಡಿದರೆ ಮೂತ್ರ ವಿಶ್ವಾಸಘಾತಕ, ಕರ್ತವ್ಯಪರಾಹ್ಮಖ, ಧರ್ಮ ಭ್ರಷ್ಟ ಮುಂತಾದ ನೀಚ-ಕೋಟೆಗಳಲ್ಲಿ ಗಣಿಸಲ್ಪಡುವರು. - ಆದರೆ ಬಾಲ್ಯಕಾಲದಲ್ಲಿ ನಿನ್ನೊಡನೆ ಆಟವಾಡಿದ ಮೂತ್ರದಿಂದ ಅವನು ನಿನ್ನೊಡನೆ ಪ್ರೇಮಸೂತ್ರದಿಂದ ಬಿಗಿಯಲ್ಪಟ್ಟಿರುವನೆಂದು ನೀನು ಕಲ್ಪಿಸಿಕೊಳ್ಳುವದು ತೀರ ಅಸಂಗತವು. ಪುರುಷರ ಪ್ರೇಮವು ವಿಶೇಷವಾಗಿ ಯೌವನಾವಸೆಯ ಪುರುಷರ ಪ್ರೇಮವು ವಿಚಿತ್ರವಾ ಗಿರುವರು. ಕೆಲವು ಕಾಲದಿಂದ ನೀನು ಅವನಿಂದ ದೂರವಾಗಿದ್ದದರಿಂದ