ವಿಷಯಕ್ಕೆ ಹೋಗು

ಪುಟ:ಶಕ್ತಿಮಾಯಿ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ. ಲಿಕ್ಕೆ ಕೂಡ ಹಿಂಜರಿಯಲಿಕ್ಕಿಲ್ಲ. ಕ್ಷಣಹೊತ್ತಿನ ಮುಂದೆ ಇದೇ ಮಾತನ್ನು ಮುಸಲ್ಮಾನನು ಆಡಿದ್ದಕ್ಕೆ ಶಕ್ತಿಗೆ ವಾಗತ್ಯವೆನಿಸಿದಂತಾಗಿತ್ತು. ಆದರೆ ಆ ಕಠೋರ ನುಡಿಯನ್ನು ಈಗಅವಳೇ ನಿ೦ಕೆಯಿಂದ ನುಡಿದಳು. ಬಳಿಕಶಕ್ತಿಯು ಸಂತಾಪವೇಗವನ್ನು ತಡೆಯುವದಕ್ಕಾಗಿ ಸ್ವಲ್ಪ ಹೊತ್ತು ಸುಮ್ಮ ನಾದಳು. ಆ ಮೇಲೆ ಅವಳು-ದೇವೀ, ಯೋಗಿಸಿ, ನಾನು ನಿಮಗೆ ಆ ಸಂಗತಿಯನ್ನೇ ತಿಳಿಸಬಂದಿರುವೆನು. ಇಂದು ನಾನು ಅವನಿಂದ ತಿರಸ್ಕೃತಳಾಗಿರುವೆನು, ಜರಿಯಲ್ಪಟ್ಟಿರುವೆನು. ಅದಕ್ಕಾಗಿ ನಾನು ಸೇಡು ಬಯಸುವೆನು; ನಾನು ಅವನನ್ನು ಇಚ್ಚಿಸುತ್ತೆನೆ ಅವನು ನನ್ನ ವಶವಾಗಬೇಕೆಂದು ಬಯಸುತ್ತೇನೆ, ಅದು ಸಾಧ್ಯವಾಗದಿದ್ದರೆ ಮಾತ್ರ ನಾನು ಸೇಡು. ..... .. ಯೋಗಿನಿ-ತಂಗೀ, ಶಾಂತಳಾಗು. ಕೋಮಲ ಶರೀರದ ಸ್ತ್ರೀಯರಿಗೆ ಸೇಡು ತೀರಿಸಿಕೊಳ್ಳುವ ಹವ್ಯಾಸವು ಶೋಭಿಸುವದಿಲ್ಲ. ಅದು ಅವರಿಗೆ ತೀರ ಅಯೋಗ್ಯವು, ನಿನ್ನ ಮನೋಗತದಂತೆಯೇ ಈ ಸೃಷ್ಟಿಯು ನಡೆಯಬೇಕೆಂದು ನೀನು ಬಯಸುತ್ತೀಯೇನು? ಭಗವಂತನ ಸೃಷ್ಟಿನಿಯಮಗಳಿಗೆ ವಿರೋಧವಾಗಿನಡೆಯುವದರಿಂದಲೇ ನೀನು ಮನು ಷ್ಣ ಜನ್ಮವನ್ನು ಅದರಲ್ಲಿಯೂ ಜನ್ಮವನ್ನು ಎತ್ತಿರುವಿ, ಬಾಲ್ಯ ದಲ್ಲಿ ಕುವರನು ನಿನ್ನೊಡನೆ ಆಡಿದ ಮಾತ್ರದಿಂದ ಅವನು ಈಗ ನಿನ್ನನ್ನು ವಿವಾಹಮಾಡಿಕೊಳ್ಳಲೇಬೇಕೆಂದು ಆಗ್ರಹಪಡುತ್ತೀಯೇ ನು? ನಿನ್ನ ಇಚ್ಛೆಯನ್ನು ತೃಪ್ತಿಗೊಳಿಸುವದು ಕುಮಾರನ ಕರ್ತ ವ್ಯವಲ್ಲ. ನಿನ್ನ ಕರ್ಮಫಲವೇ ನಿನ್ನ ಈ ದುಃಖಕ್ಕೆ ಕಾರಣವಾಗಿರು ವದು, ಅವನನ್ನು ದೋಷಿಯಾಗಿ ಭಾವಿಸುವದು ವ್ಯರ್ಥವು, ಸೇಡಿನ ಹವ್ಯಾಸದಿಂದ ಜರ್ಜರವಾಗುವದು ಅಕರ್ತವ್ಯವು ಮನಸ್ಸಿನಲ್ಲಿ ಯೋ ಚಿಸಿ ನೋಡು, ಭಿಕ್ಷುಕಿಯ ಅಧಿಕಾರವೆಪ್ಟೆಂಬದನ್ನು. ಈ