ಪುಟ:ಶಕ್ತಿಮಾಯಿ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

yಲಿ ಶಕ್ತಿಮಯಿ. ೧ನೆಯ ಪ್ರಕರಣ XX ಸುಖವೊ? ದುಃಖವೋ? Hಳು ಹಿಂದೆ ಎರಡನೆಯ ಪ್ರಕರಣದಲ್ಲಿ ವರ್ಣಿಸಿದ ಅನ್ನೊತ್ಸವದ ದಿವಸ ಸಾಯಂಕಾಲದಲ್ಲಿ ಸಲ್ಲಾನ ಸಿಕಂದರಶಹನು ಆಜೀಮಖಾನ ನೊಡನೆ ಉದ್ಯಾನಕ್ಕೆ ನಡೆದನು. ಅವನು ಅಲ್ಲಿ ಶಕ್ತಿಯನ್ನು ಯಾವ ವಿಧದಿಂದ ಕೈವಶ ಮಾಡಿಕೊಳ್ಳಬೇಕೆಂದು ಸೇನಾಪತಿಯೊಡನೆ ಆಲೋಚಿಸುತ್ತಿದ್ದನು. ರಾಜಸಭಾ ಮಧ್ಯದಲ್ಲಿ ಬಂದು ತನ್ನ ಲಾವ ಣ್ಯದಿಂದ ಬೆಳಗಿದ ಶಕ್ತಿಯನ್ನು ಆಗಲೆ ತನ್ನ ಅಂತಃಪುರದಲ್ಲಿ ಸೇರಿ ಸಿಕೊಳ್ಳಬೇಕೆಂದು ಬಾದಶಹನು ಮನಸ್ಸು ಮಾಡಿದ್ದನು; ಆದರೆ ಪೂರ್ವಾಪರ ಸಂಗತಿಗಳನ್ನು ತಿಳಕೊಳ್ಳದೆ ಹಾಗೆ ಮಾಡುವದು ಅಯೋಗ್ಯವೆಂದು ಅವನಿಗೆ ಅನಿಸಿದ್ದರಿಂದ, ಅವನು ಆ ಮಾತನ್ನು ಅಲ್ಲಿಗೇ ನಿಲ್ಲಿಸಿದ್ದನು. ಸಾಯಂಕಾಲದಲ್ಲಿ ಅಸ್ಪೋತ್ಸವದ ಕಾರ್ಯ ಗಳೆಲ್ಲ ಮುಗಿದು ಎಲ್ಲ ಜನರು ತಮ್ಮ ತಮ್ಮ ಬಿಡಾರಗಳಿಗೆ ತೆರಳಿ ದ್ದರಿಂದ ಮಧ್ಯಾಹ್ನದಲ್ಲಿ ತನ್ನ ಮನಸ್ಸಿನೊಳಗೆ ಬಂದ ಸಂಗತಿ ಯನ್ನು ಚರ್ಚಿಸುವದಕ್ಕಾಗಿ ಆಡೇಮಖಾನನೊಡನೆ ಅಲ್ಲಿಗೆ ಬಂದಿ ದ್ದನು. ಅದೇ ಕಾಲಕ್ಕೆ ಸುಲ್ತಾನ ಪುತ್ರನಾದ ನವಾಬ ಗಾಯ ಸುದ್ದೀನನು ತನ್ನ ಬಿಡಾರಕ್ಕೆ ತೆರಳಬೇಕೆಂದು ತಂದೆಯ ಅಪ್ಪಣೆ ಯನ್ನು ಕೇಳಿಕೊಳ್ಳಲು ಬಂದನು; ಆದರೆ ಸುಲ್ತಾನನು ಸೇನಾಪತಿ ಯೊಡನೆ ಏಕಾಂತದಲ್ಲಿ ಆಲೋಚಿಸುವದನ್ನು ಅರಿತು ಅದೇನೆಂಬ ದನ್ನು ತಿಳ ಕೊಳ್ಳುವದರ ಸಲುವಾಗಿ ಅವನು ಅಲ್ಲಿಯೇ ಒತ್ತಟ್ಟಿಗೆ ಮರೆಗೆ ನಿಂತನು. ಕೂಡಲೆ ನವಾಬನಿಗೆ ಬಾದಶಹನ ಇಂಗಿತವು ತಿಳಿ ಯ ಬಂತು, ಶಕ್ತಿಯ ವಿಷಯಕ್ಕೆ ಸುಲ್ತಾನನು ಮನಸ್ಸು ಮಾಡಿ