ವಿಷಯಕ್ಕೆ ಹೋಗು

ಪುಟ:ಶಕ್ತಿಮಾಯಿ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0 ಸ, ಚಂದ್ರಿಕ, ಆಜೀಮ-ಖಾವಂದ, ಇನ್ನು ಸ್ವಲ್ಪ ಹೊತ್ತಿನಲ್ಲಿ ನಾವು ನಬಾಬನನ್ನು ಸೆರೆಯಾಳಾಗಿ ಮಾಡುತ್ತಿದ್ದೆವು. ಆದರೆ ತಮ್ಮ ಅಕ ಲ್ಪಿತ ಆಜ್ಞೆಯನ್ನು ಕೇಳಿ, ಸೈನಿಕರೆಲ್ಲರು ನಿರುತ್ಸಾಹಿಗಳಾದರು, ವರ್ಪಾಕಾಲವಾದ್ದರಿಂದ ಮಳೆಯ ಅದೇ ಕಾಲಕ್ಕೆ ಧಾರೆಗಟ್ಟಿ ಸುರಿಯಹತ್ತಿತು. ಸ್ವಲ್ಪ ನಿಂತು ಪ್ರಯತ್ನ ಮಾಡಬೇಕೆನ್ನುವಷ್ಟರಲ್ಲಿ ಗಾಯಸುದ್ದೀನನು ಪಲಾಯನವನ್ನು ಹೇಳಿದನು. ಅದರಿಂದ ಆಗ ಅವನನ್ನು ಹಿಡಿಯುವದು ನನ್ನಿಂದಾಗಲಿಲ್ಲ, ಬಾದಶಹ(ಸಿಟ್ಟಿನಿಂದ ಕಣ್ಣು ಕೆಂಪಗೆ ಮಾಡಿ) ನಿನ್ನಿಂದಾ ಗಲಿಲ್ಲವೇ? ಈ ಪ್ರಕಾರದ ನಾಮರ್ದ ವಾಕ್ಯವನ್ನು ಈ ಮೊದಲು ನಾನು ಯಾವ ಸೇನಾಪತಿಯ ಮುಖದಿಂದಲೂ ಕೇಳಿದ್ದಿಲ್ಲ: ಬೇಖ *, ನಿನ್ನನ್ನು ಸೇನಾಪತಿಯೆಂದು ನಿಯಮಿಸಿದ್ದೇ ನನ್ನ ತಪ್ಪಾಗಿದೆ ಯೆಂಬಂತೆ ತೋರುತ್ತದೆ, ಸೇನಾಪತಿಯು ಏನನ್ನೂ ಮಾತಾಡಲಿಲ್ಲ. ಬಾದಶಹನ ಸಂ ತಾಪದ ವಾಕ್ಯವನ್ನು ಕೇಳಿ ನಿರುತ್ಸಾಹಿಯಾಗಿ ಕುಳಿತುಕೊಂಡನು. ಆಗ ಮಂತ್ರಿಯು ನುಡಿದನೇನಂದರೆ, ಮಂತ್ರಿ-ಖಾವಂದ, ಆಗಿ ಹೋದ ಮಾತಿನ ಬಗ್ಗೆ ಬೇದ ಪಡುತ್ತ ಕೂಡುವ ಸಮಯದಲ್ಲ. ಪ್ರತಿಕ್ಷಣದಲ್ಲಿ ಗಾಯಸುದ್ದಿ ನನು ಮುಂದರಿಯುತ್ತಿರುವನು. ಅವನ ಸೈನ್ಯವು ಈಚೆಗೆ ನಮ್ಮಗಿಂತ ಎಷ್ಟೋ ಪಾಲು ಹೆಚ್ಚಾಗಿರುವದು, ಇನ್ನೂ ಹೆಚ್ಚುತ್ತಲೇ ಇರುವದು. ಆದ್ದರಿಂದ ಅವನ ಪ್ರತಿರೋಧಕ್ಕೆ ತಕ್ಕ ಉಪಾಯವನ್ನು ಜಾಗ್ರತೆ ಯಾಗಿ ಯೋಚಿಸುವದು ಉಕ್ತವಾಗಿದೆ. “ಗರಜಕ ಅಕ್ಕಲ ನಪಿ ಎಂಬಂತೆ ಆ ಮುದಿ ಹುಚ್ಚಭ್ರಾಂತಿಷ್ಠ ಬಾದಶಹನು ಸಭಾಸದರ ವಿಚಾರದಂತೆ ಗಣೇಶದೇವ ನೊಡನೆ ಸಂಧಿಯನ್ನು ಮಾಡಿಕೊಳ್ಳಲಿಕ್ಕೆ ಒಪ್ಪಿದನು,