ವಿಷಯಕ್ಕೆ ಹೋಗು

ಪುಟ:ಶಕ್ತಿಮಾಯಿ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ್ತಿಮಯಿ ರ್೬

• •°* - ಆಗ ಬಾದಶಹನು ಒಂದು ದರ್ಬಾರವನ್ನು ಆರಿಸಿದನು. ಎಲ್ಲ ಅಮೀರ-ಉದುರಾವ ಮಾನಕರಿಯರೂ ಬಂದು ತಮ್ಮ ತಮ್ಮ ಪೀಠ ಗಳನ್ನಲಂಕರಿಸಿದರು ಭಾಟ ಜನರು ಜಯಜಯಕಾರಗಳನ್ನು ಮಾಡು ತಿರಲು, ಬಾದಶಹನು ಒಳ್ಳೆ ಆಡಂಬರದಿ೦ದ ಸಭಾಗೃಹವನ್ನು ಪ್ರವೇಶಿಸಿ, ಸಿಂಹಾಸನದಲ್ಲಿ ಕುಳಿತನು. ಸಭಿಕರೆಲ್ಲರೂ ತೋರಿಕೆ ಯಲ್ಲಿ ಒಳ್ಳೆ ಹರುಷವನ್ನು ತೋರಿಸಲಿಕ್ಕೆ ಪ್ರಯತ್ನಿಸುತ್ತಿದ್ದರು. ನಿಜವಾದ ನಿಷ್ಟೆ ಯ ಪ್ರೇಮವೂ ವಿಶ್ವಾಸವೂ ಯಾರಲ್ಲಿಯ ಇರ ದ್ದರಿಂದ ಪ್ರತಿಯೊಬ್ಬರ ಮುಖಮಂಡಲಗಳು ನಿಸ್ತೇಜವಾಗಿದ್ದವು. ಬಳಿಕ ಬಾದಶಹ-ಸೇನಾಪತಿ, ಗಣೇಶದೇವನು ಇನ್ನೂ ನಮ್ಮಿಂದ ಜಿತನಾಗಲಿಲ್ಲವೆ? ಸೇನಾಪತಿ-ಖಾವಂದ, ನಮ್ಮ ಸೈನ್ಯವು ದಿನಾಜವುರವನ್ನು ಸುತ್ತುಗಟ್ಟಿತ್ತು. ಇನ್ನೆರಡುದಿವಸ ತಡೆದಿದ್ದರೆ ಆ ರಾಜಧಾನಿಯು ನಿಸ್ಸಂದೇಹವಾಗಿ ನಮ್ಮ ಹಸ್ತಗತವಾಗುತ್ತಿತ್ತು. ಆದರೆ......... ಆಜೀಮಖಾನನ ತಂದೆಯಾದ ವೃದ್ಧಮಂತ್ರಿಯು-ಬಾದ ಶಹ, ಯುವರಾಜ ಗಾಯಸುದ್ದೀನನನ್ನು ನಮ್ಮ ಸೈನಿಕರು ಈ ಅರ ಣ್ಯದಲ್ಲಿಯೇ ಮುತ್ತಿ ಹಣ್ಣು ಮಾಡುತ್ತಿರಲು,ನೀನು ಸೇನಾಪತಿಗೆಯುವ ರಾಜನ ಸುವರ್ಣಗ್ರಾಮವನ್ನು ಮುತ್ತು ಪದಕ್ಕೇತಕ್ಕೆ ಆಜ್ಞಾಪಿಸಿದೆ? ಬಾದಶಹ-ಆಗಿನ ನನ್ನ ವಿಚಾರವು ಸುಳ್ಳಾಯಿತು. ನನ್ನ ಎರಡನೇ ಮಗನಾದ ಸೇರಿಸುದ್ದೀನನೇ ನನಗೆ ಆ ಭ್ರಾಮಕ ವಿಚಾರ ವನ್ನು ಸೂಚಿಸಿದನು; ಮಂತ್ರಿ-ಸುಳ್ಳಲ್ಲ, ಆ ದಿನ ಗಾಯಸುದ್ದೀನನು ನಿಶ್ಚಯವಾಗಿ ಕೈವಶವಾಗುತ್ತಿದ್ದನು. ಆದರೆ ತಮ್ಮ ಆಜ್ಞಾನುಸಾರ ಸೈನ್ಯದವರು ಅಲ್ಲಿಂದ ಚಲಿಸಿದ್ದರಿಂದ ಅವನು ಪುನಃ ಭದ್ರವಾದ ಸ್ಥಳಕ್ಕೆನಡೆದನು, ಬಾದಶಹ-ಆಜೀಮಖಾ, ಅದು ನಿನ್ನ ತಪ್ಪೇ; ಹಾಗೆ ಅವನು ಅಂದು ಕೈವಶವಾಗುತ್ತಿದ್ದರೆ ನೀನು ಪ್ರಯತ್ನ ವನ್ನೇಕೆ ಮಾಡಲಿಲ್ಲ?