೬೮ •y - cover ಸ, ಚಂದ್ರಿಕೆ ವ್ಯದ ಮೂಲಕ ಅವನ ಮತಿಯು ಸ್ಥಿರವಿದ್ದಿಲ್ಲ. ನೀತಿಯಂತೂ ಅವನಿಂದ ಎಷ್ಟೋ ದೂರ ಓಡಿಹೋಗಿತ್ತು, ಕ್ಷಣಕ್ಷಣಕ್ಕೆ ಪರ ಸ್ಪರವಿರುದ್ದವಾದ ಅವನ ಸುಕುಮುಗಳಿ೦ದ ಸೈನ್ಯಾಧಿಕಾರಿಗಳೆ ೪ ಬೇಸತ್ತು ಹೋಗಿದ್ದರು. ಈ ಪ್ರಕಾರದ ಬಾದಶಹನ ಹುಕುಮು ಗಳನ್ನು ಮನ್ನಿಸುವದರಿಂದ ತಮಗೆ ಜಯವಾಗದೆ ಅಪಜಯವು ಮಾ ತ್ರ ನಿಶ್ಚಯವಾಗಿ ಆಗುವದೆಂದು ಅವರು ಭಾವಿಸಿದ್ದರು. ಸಭಾಸ ದರೆಲ್ಲರೂ ಕ್ರುದ್ಧರೂ ಅಸಂತುಷ್ಟರೂ ಆಗಿದ್ದರು. ದಂಡಾಳುಗಳಾ ದರೂ ನಿರುತ್ಸಾಹಿಗಳೂ, ಚೈತನ್ಯ ಹೀನರೂ ಆದರು. ದೇಶದಲ್ಲಿ ಅನ್ನಾಭಾವವಾಯಿತು. ಯುದ್ಧದಲ್ಲಿ ಭರತಿಯಾದ ದಂಡಾಳುಗಳು (ರಿಕಟ್ಟ) ಇಡೀ ವರ್ಷವನ್ನು ಸಮರಾಂಗಣದಲ್ಲಿಯೇ ಕಳೆದದರಿಂದ, ಕೃಷಿಕರ್ಮವನ್ನು ಹೆಂಗಸರೂ ಹುಡುಗರೇ ಮಾಡಬೇಕಾಯಿತು. ಅದರಿಂದ ಆ ವರ್ಷ ದೇಶದಲ್ಲೆಲ್ಲ ದುರ್ಭಿಕ್ಷವೇ ದುರ್ಭಿಕ್ಷ, ದಂಡಾ ಳುಗಳಿಗೆ ಸಿಧಾ ಸಾಮಗ್ರಿಗಳು ಬಾದಶಹನಿಂದ ಸರಿಯಾಗಿ ಸಿಗ ದಾದವು. ಬಾದಶಹನು ತನ್ನ ಸೈನಿಕರಿಗೆಲ್ಲ ಒಪ್ಪತ್ತೇ ಆಹಾರವನ್ನು ಕೊಡಹತ್ತಿದನು. ಭಾಗ್ಯಲಕ್ಷ್ಮಿಯು ಕೂಡ ಬಾದಶಹನಿಂದ ಚಾರ ಹತ್ತಿದಳು, ಆಗ ವೈರಿಗಳನ್ನು ಕೊಲ್ಲಬೇಕು ಇಲ್ಲವೆ ತಾವಾದರೂ ರಣದಲ್ಲಿ ಮಡಿಯಬೇಕು, ಎಂಬ ನಿಶ್ಚಯದಿಂದ ಬಾದಶಹನು ಯುದ್ಧ ವನ್ನು ನಡೆಸಬೇಕೆಂದು ಯೋಚಿಸಿದನು. ಆದರೆ ಸಭಾಸದರು ಬಾದ ಶಹನ ಈ ವಿಚಾರಕ್ಕೆ ಸಂಪೂರ್ಣವಾಗಿ ನಿಷೇಧಿಸಿದರು. ಅವರು ಗಣೇಶದೇವನೊಡನೆ ಸಂಧಿಯನ್ನು ಮಾಡಿಕೊಂಡು ಅವನ ಸಹಾಯ ದಿಂದ ನವಾಬನನ್ನು ಹಣಿಯಬೇಕೆಂದು ಬಾದಶಹನಿಗೆ ಹಲವು ಸಾರೆ ಆಲೋಚನೆಯನ್ನು ಹೇಳಿದರು. ಆದರೂ ಆ ದುರಾಗ್ರಹಿಯು ಇಂದಿನ ವರೆಗೆ ಅವರ ಮಾತಿನ ಕಡೆಗೆ ಲಕ್ಷ್ಯ ಕೊಟ್ಟಿದ್ದಿಲ್ಲ. ಇಂದು ಮೇಲೆ ಹೇಳಿದಂತೆ ತೀರ ಕಠಿಣಪ್ರಸಂಗವು ಬರಲು, ಅವನು ಸಭಾಸದರ ಆ ವಿಚಾರಕ್ಕೆ ಸಮ್ಮತಿಯನ್ನೀಯಬೇಕೆಂದನು.
ಪುಟ:ಶಕ್ತಿಮಾಯಿ.djvu/೮೭
ಗೋಚರ