ಪುಟ:ಶಕ್ತಿಮಾಯಿ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وو ಶಕ್ತಿಮಯಿ. ನನ್ನ ಆಜ್ಞೆಯ ಮಾರ್ಗನಿರೀಕ್ಷಣೆಮಾಡುವ ಅದೆಂಧ ಸೇನಾಪತಿಯು ನೀನು ಹೋಗು ಈಗಿಂದೀಗಲೇ ಆ ಗುಲಾಮನನ್ನು ಬಂಧಿಸಿಕೊಂಡು ಬಂದು ನನ್ನೆದುರಿಗೆ ನಿಲ್ಲಿಸು. ಕೂಡಲೆ ಅಜೀಮಖಾನನು ಸಪರಿವಾರವಾಗಿ ಗಣೇಶದೇವನ ಬಿಡಾರಕ್ಕೆ ನಡೆದನು. ಗಣೇಶದೇವನು ಸನ್ಯಾಸಿನಿಯ ಸೂಚನೆಯಂತ ಈ ಮೊದಲೇ ಅಲ್ಲಿಂದ ತನ್ನ ಶಿಬಿರವನ್ನು ಕಿತ್ತಿ ಬೇರೊಂದುಸುರಕ್ಷಿತ ಸ್ಥಳದಲ್ಲಿ ಸ್ಥಾಪಿಸಿ ಯುದ್ಧಕ್ಕೆ ಸಿದ್ಧನಾಗಿದ್ದನು. ಆಗ ಸೇನಾಪ ತಿಯು ಹತಮುಖನಾಗಿ ತನ್ನ ದಂಡಿನಕಡೆಗೆ ಬರುತ್ತಿರಲು, ನಡುವೆ ನಬಾಬ ಗಾಯಸುದ್ದೀನನ ಸೈನ್ಯವನ್ನು ಕಂಡನು. ಕೂಡಲೆ ಉಭಯ ಸೈನ್ಯಗಳಲ್ಲಿ ಯುದ್ಧಕ್ಕೆ ಆರಂಭವಾಯಿತು, ಎಷ್ಟೋ ಹೊತ್ತಿನವರೆಗೆ ಒಂದು ಪಕ್ಷದ ವೀರರು ಪರಪಕ್ಷದವರಮೇಲೆ ಬಾಣಗಳನ್ನೆರಚುತ್ತಿದ್ದರು. ಉಭಯ ಪಕ್ಷಗಳಲ್ಲಿ ಕೆಲಕೆಲವು ಸೈನ್ಯವು ಕ್ಷಯವಾದ ಬಳಿಕ ಸಂಧ್ಯಾ ಕಾಲವಾಗಲು, ಗಾಯಸುದ್ದೀನನು ಸಸೈನ್ಯವಾಗಿ ಆ ಅರಣ್ಯದಲ್ಲಿ ಕಾಣದಾದನು, ಎರಡನೇ ದಿವಸ ಬಾದಶ ಹನ ಹುಕುಮಿನಿಂದ ಆ ಅರಣ್ಯದಲ್ಲಿ ಅಲ್ಲಲ್ಲಿಗೆ ಬಾದಶಹನ ಸೈನಿಕ ರ ಟೋಳಿಗಳು ನಿಲ್ಲಿಸಲ್ಪಟ್ಟವು. ಗಣೇಶದೇವನಾದರೂ ಅದೇ ಆರ ಣ್ಯದಲ್ಲಿ ಭದ್ರವಾದ ಸ್ಥಳದಲ್ಲಿ ತನ್ನ ಶಿಬಿರವನ್ನು ಸ್ಥಾಪಿಸಿ, ದಿನಾಜಿ ಪುರ ರಾಜ್ಯದಿಂದ ಸೈನಿಕರನ್ನು ಬರಮಾಡಿಕೊಳ್ಳಹತ್ತಿದನು. ಇದರಿಂದ ಅವನ ಸೈನ್ಯವು ದಿನದಿನಕ್ಕೆ ಹೆಚ್ಚುತ್ತ ಹೋಯಿತು, ಈ ಪ್ರಸಂಗದಲ್ಲಿ ಬಾದಶಹನು ಒಂದು ಕಡೆಗೆ ತನ್ನ ಮಗನ ಸಂಗಡ, ಮತ್ತೊಂದು ಕಡೆಗೆ ಗಣೇಶದೇವನ ಸಂಗಡ ಯುದ್ದ ಮಾಡಬೇಕಾಯಿತು, ಬಾದಶಹನಿಗೆ ಸಾವು ಸವಿಾಪಿಸಿತ್ತು, ಅಂತೇ ಅವನಿಗೆ ಈ ಪ್ರಕಾರದ ದುರ್ಬುದ್ಧಿಯಾಯಿತು. ಅವನು ಮನೆಯ ಒಳಗೂ, ಹೊರಗೂ ಶತ್ರುಗಳನ್ನು ಸಂಪಾದಿಸಿದನು. ಇಷ್ಟೇ ಅಲ್ಲ, ವೃದ್ಧಾ