ಹದಗೆಟ್ಟು ಕರ್ಣ ಕೇಳದವೊಲಾಯಿತು ನಿನ್ನ
ಬದಿಯೊಳಾನಿರ್ದು ವ್ಯಾಧಿಯಲಿ ಬಡವಾದೆನೆನೆ
ಸುದತಿಯಳ ಮುದ್ದಿಸಿದ೧ ನಿಜಲಿಂಗ ಭವಭಂಗ ಶರಣಜನವರದ ಜಯತು
‖ ೨೭ ‖
ಶಶಿಯು ಗಗನದಲಿ ಬಲು ಬಿಸಿಗಾತ್ರವನು ತಳೆದ
ನಿಶಿವೈರಿ ೨ಬಲಿ೨ಸೀತಳವನಾಂತ ಜಗವರಿಯೆ
ಒಸೆದು ಹಿಮಗಿರಿರಾಜ ಖೇಚರಕೆ ಪಾರಿದನು ಹನುಮಂತ ರತಿಯ ಕಾಂತ
ಅಸಮಶರ ಭೂಮಿಯನು ಕದ್ದ ರಾಕ್ಷಸನಂತೆ
ವಿಷಗೊರಳ ಚಿತ್ತೈಸೆನಲು ಮೆಚ್ಚಿ ಸತಿಯ ಸಂ
ತಸದಿಂದ ಮುದ್ದಿಸಿದ ನಿಜಲಿಂಗ ಭವಭಂಗ ಶರಣಜನವರದ ಜಯತು‖ ೨೮
‖
ಕನ್ನಡಿಯ ಮೇಲ್ವಲಗೆಯೊಳಗೆ ಪಾರ್ವತಿಯ ಮೊಗ
ಚೆನ್ನಾಗಿ ಪೊಳೆಯೆ ಗಗನದಿ ಮೆರೆವ ಪೂರ್ಣಶಶಿ
ಯೆನ್ನುತಲಿ ಷಣ್ಮುಖನು ಗಣಪತಿಗೆ ತೋರುತಿರಲವ ನೋಡುತಿರಲದರೊಳು
ತನ್ನ ರೂಪವ ಕಂಡು ಇನ್ನುಂಟೆ ಪ್ರತಿಗಣಪ
ನೆನ್ನುತವನನು ಸೀಳ್ವೆನೆಂದು ಸೊಂಡಿಲ ನೆಗಪು
ವನ್ವಯಕೆ ನೆರೆ ನಗುವ ನಿಜಲಿಂಗ ಭವಭಂಗ ಶರಣಜನವರದ ಜಯತು‖ ೨೯
‖
ಕಂಗೊಳಿಪ ಕುಂತಳಕೆ ನಾಸಿಕಕೆ ವೈರತ್ವ
ಕಂಗಳಿಗೆ ರಾಜಿಸುವ ಪಣೆಗೆ ಬಲು ವೈರತ್ವ
ರಂಗುದುಟಿಗಳ್ಗೆ ರದನಂಗಳ್ಗೆ ವೈರತ್ವ ಮೊಲೆಗೆ ಮಧ್ಯಕೆ ವೈರವು೩
ಇಂಗಿತದಿ ತಿಳಿಯಲಿಂತಪ್ಪ ಹಗೆತನವಿರಲು
ಸಂಗಡಿಸಿಕೊಂಡು ಸಂತೈಸಿಕೊಂಡಿರುತಿರ್ಪ
ಮಂಗಳಾಂಗಿಯ೪ಕಾಂತ೪ ನಿಜಲಿಂಗ ಭವಭಂಗ ಶರಣಜನವರದ ಜಯತು
‖ ೩೦ ‖
ಪುಟ:ಶತಕ ಸಂಪುಟ.pdf/೧೦೯
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೬೯