ಭೂರಿಕೋಪದಿ ಹಳಿಯೆ ಭಾಸ್ಕರಗೆ ಕುಂದೇನು
ಮಾರಾರಿ ನಿನ್ನ ನಿಂದಿಸುವವರು ನರಕದೊಳು
ಸೇರುವರು ಸತ್ಯವಿದು ನಿಜಲಿಂಗ ಭವಭಂಗ ಶರಣಜನವರದ ಜಯತು ‖೩೮
‖
ಬಲುಲೋಭಿಗಳ ಬಳಿಯೆ ಧನವಿದ್ದು ಫಲವೇನು
ಕಲಿಯಿಲ್ಲದವಗೆ ೧ಚಂದ್ರಾಯುಧವು ಇದ್ದೇನು೧
ನೆಲೆಯರಿತುವೋದಲರಿಯದವನ ಬಳಿಯೆ ಕಾವ್ಯಸಾರಂಗಳಿದ್ದರೇನು
ಹೊಲಬರಿಯದನ ಬಳಿಯೆ ಸಂಜೀವವಿದ್ದೇನು
ಮಲಹರನೆ ನಿನ್ನ ಭಜಿಸದ ಮನುಜ ನರಜನ್ಮ
ದಲಿ ಬಂದು ಫಲವೇನು ನಿಜಲಿಂಗ ಭವಭಂಗ ಶರಣಜನವರದ ಜಯತು
‖ ೩೯ ‖
ಸಂಗರಕೆ ಭೀತಿಗೊಂಬುವ ಬಂಟನಿ೨ದ್ದೇನು
ಮುಂಗಂಡು ಮಾತನಾಡದ ಸಚಿವನಿ೨ದ್ದೇನು
ಇಂಗಿತವನರಿತು ನಡೆಯದ ಗೆಳೆಯನಿ೨ದ್ದೇನು ವಿಮಲಶಾಸ್ತ್ರಾಗಮವನು
ಅಂಗಯಿಸಿ ಓದಿಕೊಳ್ಳದ ಪಾರ್ವನಿದ್ದೇನು
ಅಂಗಭವಹರ ನಿಮ್ಮ ಸ್ತುತಿಮಾಡದಿಪ್ಪ ಪಾ
ಪಾಂಗನವನಿದ್ದೇನು ನಿಜಲಿಂಗ ಭವಭಂಗ ಶರಣಜನವರದ ಜಯತು ‖ ೪೦
‖
ಕೊಟ್ಟಬಳಿಕಿನ್ನು ಮನದೊಳಗೆ ಕುದಿವನು ಮೂರ್ಖ
ಕೆಟ್ಟು ಪಿಸುಣಿಗ ನೆಂಟರನು ಸೇರುವನು ಮೂರ್ಖ
ನಿಷ್ಠವಂತರ ಹಳಿದು ನಿಂದಿಸುವನತಿಮೂರ್ಖ ದಯದೊಳಾಳುವವೊಡೆಯನ
ಬಿಟ್ಟಾಡಿ ದೂರಿಕೊಂಬುವನೀಗ ಕಡುಮೂರ್ಖ
ಸೃಷ್ಟಿಗೀಶ್ವರ ನಿಮ್ಮ ೩ಸ್ತುತಿಗಳನು ಜಗದೊಳಗೆ
ಬಿಟ್ಟವನು ೪ಬಲು೪ ಮೂರ್ಖ ನಿಜಲಿಂಗ ಭವಭಂಗ ಶರಣಜನವರದ ಜಯತು
‖ ೪೧ ‖
ಪುಟ:ಶತಕ ಸಂಪುಟ.pdf/೧೧೨
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೭೨
ಶತಕ ಸಂಪುಟ