ವಿಷಯಕ್ಕೆ ಹೋಗು

ಪುಟ:ಶತಕ ಸಂಪುಟ.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೭೮
ಶತಕ ಸಂಪುಟ

ಆವ ಮನೆಯೊಳಗಿಪ್ಪ ದೀವಿಗೆಯ ಬೆಳಗೊಂದೆ
ಆವ ಹಸುವನ್ನು ಕರೆಯ ಕೀರರುಚಿ ಕರಮೊಂದೆ
ಆವ ಕೃಷಿಯೊಳು ಬೆಳದ ತಿಲದೊಳಗೆ ಬಪ್ಪ ತೈಲವ ನೋಡೆ ಗುಣಮದೊಂದೆ
ಆವ ಕುಲದೊಳಗಿರಲು ಆವನಾಮದೊಳಿರಲು
ಆವ ರೂಪಾಗಿರಲು ಒಳಗಿರುವ ಸ್ವಯಂಜ್ಯೋತಿ
ದೇವ ನೀನಹುದಹುದು ನಿಜಲಿಂಗ ಭವಭಂಗ ಶರಣಜನವರದ ಜಯತು|| ೬೦ ||

ಎಂಬತ್ತು ನಾಲ್ಕುಲಕ್ಷದ ಯೋನಿಯೊಳಗೆಲ್ಲ
ಬೆಂಬಿಡದೆ ತೊಳತೊಳಲಿ ಸಕಲರೊಳಗಧಿಕವೆಂ
ದೆಂಬ ಮಾನುಷ ಜನ್ಮದೊಳು ಮುಟ್ಟಿದಾಗಿಬಳಿಕ ಶಿವ ನೀನು ಕರುಣಿಯೆಂದು
ಇಂಬಾಗಿ ತಿಳಿತಿಳಿದು ನಂಬಿದೆನು ನಿನ್ನ ಪಾ
ದಾಂಬುಜವ ಬಿಡದೆನ್ನ ರಕ್ಷಿಸುದು ದುರಿತಾದ್ರಿ
ಶಂಬ ನೀನಹುದಹುದು ನಿಜಲಿಂಗ ಭವಭಂಗ ಶರಣಜನವರದ ಜಯತು || ೬೧
||

ಭವಗಡಲನುತ್ತರಿಸಿ ಕಡೆಹಾಯ್ದು ಹೋಗುವರೆ
ಹವಣವಾಗಿರುತಿರ್ಪ ಕಾಯವೆಂದೆಂಬ ಹಡ
ಗವಿದು ಕೈಸಾರಿರ್ದ ಸಮಯದಲ್ಲಿ ಶಿವ ನಿಮ್ಮ ಧ್ಯಾನವನು ಮರೆಯದಂತೆ
ಏವರವಾಗಿರುತಿರ್ಪ ಜ್ಞಾನವನ್ನು ಕೊಟ್ಟು ಸಲ
ಹುವುದೆನ್ನ ಪರಮಾತ್ಮ ಪರಂಜ್ಯೋತಿ ಪರಬ್ರಹ್ಮ
ಧವಳಾಂಗ ದಯಭರಿತ ನಿಜಲಿಂಗ ಭವಭಂಗ ಶರಣಜನವರದ ಜಯತು|| ೬೨ ||

ನಿನ್ನ ನಾಮಾಮೃತವಹಾಯೆಂದು ಸವಿವಂತೆ
ನಿನ್ನ ನಾಮವ ನುತಿಸಿಯಡಿಗಡಿಗೆ ನಲಿವಂತೆ
ನಿನ್ನ ನಾಮವ ನೆನೆದು ಹರುಷಾಬ್ಬಿಯೊಳು ಬಿದ್ದು ಮುಳುಗಿ ನಲಿದಾಡುವಂತೆ
ನಿನ್ನ ನಾಮವ ನುತಿಸಿಯೆನ್ನ ಮೈಮರೆವಂತೆ
ನಿನ್ನ ನಾಮವು ಸತತ ಮರೆಯಲಿರುವಂತೆ