ಪುಟ:ಶತಕ ಸಂಪುಟ.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೭೯


ನಿನ್ನ ನಾಮದೊಳಿರಿಸು ನಿಜಲಿಂಗ ಭವಭಂಗ ಶರಣಜನವರದ ಜಯತು|| ೬೩ ||


ಒಮ್ಮೆ ಸಂಸಾರವನ್ನು ತೊರೆಯಬೇಕೆಂಬಂತೆ
ಒಮ್ಮೆ ಸಂಸಾರವನ್ನು ಮಾಡಬೇಕೆಂಬಂತೆ
ಒಮ್ಮೆ ದೇವರ ಭಜನೆಯನ್ನು ಮಾಡಿ ನಿತ್ಯಪದವಿಯ ಪಡೆಯಬೇಕೆಂಬುವ
ಒಮ್ಮೆ ದೇವರ ಭಜನೆಯಿಂದೇನು ಫಲವೆಂದು
ಹಮ್ಮೆಸಿ ಹರಿಯುತಿಹ ಮನವನೊಬ್ಬುಳಿಗೊಳಿಸಿ
ನಿಮ್ಮ ಚರಣದೊಳಿರಿಸು ನಿಜಲಿಂಗ ಭವಭಂಗ ಶರಣಜನವರದ ಜಯತು|| ೬೪ ||


ಏನೇನು ತಿಳಿ” ಯದಜ್ಞಾನಿ ದಿಟವಿಹುದೆನುತ
ನೈಸುತೆನ್ನ ಕೈ ಬಿಡಲಾಗದೆಲೆ ದೇವ
ನೀನು ಶಂಕರನು ಭವಹರನು ಶಶಿಧರನು ಸಿರಿಕರನುಮೆಯವರನೆನ್ನುತ
ನಾ ನಿನ್ನ ಚರಣಶತಪತ್ರವನು ನಂಬಿದೆನು
ಜ್ಞಾನವನು ಕೊಟ್ಟು ಸಲಹುವುದೆನ್ನ ಜಗದೊಡೆಯ
“ನೀನಲ್ಲದಿನ್ನುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು || ೬೫
||


ಸ್ಥಿರಪದವು ಬರುತಿರ್ಪ ಚರಿತವನು ಪಿಡಿದಂತೆ
ಮರಮರ ಭವಕೆ ಬಹ ಚರಿತವನು ತೊರೆವಂತೆ
ನರಲೋಕದಾಟದೊಳಗಿದ್ದುದಕೆ ಮನವ ತೊಡಕಿಸದೆ ಹೊರಗಾಗುವಂತೆ
ನಿರುತದಿಂದಾತ್ಮದೊಳು ಶಿವ ನಿಮ್ಮ ರೂಪವನು
ಅರಿವಂತೆ ಮರೆವಂತೆ ಕರೆವಂತೆ ಬೆರೆವಂತೆ
ವರವಿತ್ತು ಸಲಹುವುದು ನಿಜಲಿಂಗ ಭವಭಂಗ ಶರಣಜನವರದ ಜಯತು || ೬೬ ||


ನೀನಿದ್ದ ಸಮಯದಲ್ಲಿ ನಿನ್ನ ತಿಳಿಯದೆ ಜ್ಞಾನ
ಹೀನನಾದಡೆ ಬಳಿಕ ನೀ ತೊಲಗಿದಾಕ್ಷಣಕೆ
ಏನು ಪೇಳುವೆನಿನ್ನು ಬಗೆಬಗೆಯ ಯೋನಿಯೊಳು ತೋಳತೋಳಲಿ ಬಳಬಳಲುತ
ನಾನೆಂತು ಜೀವಿಸುವೆನಯ್ಯ, ಕರುಣಾಕರನೆ