ಪುಟ:ಶತಕ ಸಂಪುಟ.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚಂಪಾರಣ್ಯದ ಪಕ್ಷಿಗೊಂದು ತರುಗೊಡ್ಡಾಗಲ್ ಫಲಂ ತೀವಿದಾ
ಮರಗಳ್ ಪುಟ್ಟವೆ ಪುಷ್ಪವೊಂದು ಬಳಲಲ್ ಭೃಂಗಕ್ಕೆ ಪೂವಿಲ್ಲವೇ
ನಿರುತಂ ಸತ್ಕವಿಗೊರ್ವ ಗರ್ವಿ ಪುಸಿಯುತ್ತುಂ ಲೋಭಿಯಾಗಲ್ ನಿಜಂ
ಧರೆಯೊಳ್ ದಾತರು ಪುಟ್ಟರೆ ಹರಹರಾ ಶ್ರೀ ಚೆನ್ನಸೋಮೇಶ್ವರಾ - ೩೧

ಉಡುರಾಜಂ ಕಳೆಗುಂದಿ ಪೆರ್ಚದಿಹನೇ ನ್ಯಗ್ರೋದಬೀಜಂ ಕೆಲಂ
ಸಿಡಿದುಂ ಪೆರ್ಮರನಾಗದೇ ಎಳೆಗರುಂ ಎತ್ತಾಗದೆ ಲೋಕದೊಳ್
ಮಿಡಿಪಣ್ಣಾಗದೆ ದೈವದೊಲ್ಮೆಯಿರಲು ಕಾಲಾನುಕಾಲಕ್ಕೆ ತಾಂ
ಬಡವಂ ಬಲ್ಲಿದನಾಗನೇ ಹರಹರಾ ಶ್ರೀ ಚೆನ್ನಸೋಮೇಶ್ವರ - ೪೪
ಇವು ಆತನ ಕವಿತ್ವ ಶಕ್ತಿಗೆ ಉದಾಹರಣೆಗಳು.
ಹೆಜ್ಜೆ ಹೆಜ್ಜೆಗೆ ಬಳಸುವ ಪುರಾಣವ್ಯಕ್ತಿಗಳ ದೃಷ್ಟಾಂತಗಳು ಕವಿಯ ಪುರಾಣ
ಪ್ರಜ್ಞೆಯನ್ನು ಎತ್ತಿ ತೋರಿಸುತ್ತವೆ.
ಮೃಡ ತಾಂ ಭಿಕ್ಷವಬೇಡನೆ, ದ್ರುಪಜೆ ತಾಂ ತೊತ್ತಾಗಳೆ ಪಾಂಡವರ್
ಪಿಡಿದೋಡಂ ತಿರಿದುಣ್ಣರೆ ಖಳನ ಕೈಯೊಳ್ ಸಿಕ್ಕಳೆ ಸೀತೆ ತಾಂ
ಸುಡುಗಾಡಕ್ಕಿಗೆ ಬಂಟನಾಗನೆ ಹರಿಶ್ಚಂದ್ರಂ ನರರ್‌ ಪೂರ್ವದೊಳ್
ಪಡೆದಷ್ಟುಣ್ಣದೆ ಪೋಪರೇ ಹರಹರಾ ಶ್ರೀ ಚೆನ್ನಸೋಮೇಶ್ವರಾ - ೩೫
ಹೀಗೆಯೇ ೩೭, ೩೮, ೩೯, ೪೧, ೪೩, ೪೬, ೪೭, ೪೮, ೬೬, ೭೭, ೭೮, ೮೬,
೯೨, ೯೩, ೯೫, ೯೬, ೯೭ ಮೊದಲಾದ ಪದ್ಯಗಳನ್ನು ನೋಡಬಹುದು.
ಭಾಷೆಯ ಬಳಕೆಯಲ್ಲಿ ಕವಿ ಬಂಧುರತೆಗಿಂತ ಸರಳತೆಯತ್ತ ಒಲವು
ತೋರಿದ್ದಾನೆ. ಸಾಮಾನ್ಯರಿಗೂ ತನ್ನ ಕಾವ್ಯ ಸುಲಭವೇದ್ಯವಾಗಬೇಕು; ತಾನು
ಹೇಳುವ ನೀತಿ ಅವರ ಹೃದಯಕ್ಕೆ ನಾಟಬೇಕು; ಅದರಿಂದ ಅವರ ಬಾಳು
ಹಸನಾಗಬೇಕು ಎನ್ನುವ ಆಶಯ ಇಟ್ಟುಕೊಂಡಿರುವುದರಿಂದ ಅದಕ್ಕೆ ಅನುಗುಣವಾಗಿ
ಸರಳ, ಸರಸ ಭಾಷೆಯನ್ನು ಬಳಸಿದ್ದಾನೆ. ನಿರೂಪಣೆಯಲ್ಲಿ ನಿರರ್ಗಳತೆ ಮೈವೆತ್ತಿದೆ.
ಖ್ಯಾತ ಕರ್ನಾಟಕ ವೃತ್ತ - ಅದರಲ್ಲಿಯೇ ಮತ್ತೇಭವಿಕ್ರೀಡಿತ ವೃತ್ತ ರಚಿಸುವಲ್ಲಿ
ಆತನ ಛಂದೋಪರಿಣತಿ ಎದ್ದು ಕಾಣುತ್ತದೆ. ಲೀಲಾಜಾಲವಾಗಿ ವೃತ್ತಗಳನ್ನು
ಹೆಣೆಯುತ್ತಾನೆ. ಕಾವ್ಯದ ಓಟಕ್ಕೆ ಎಲ್ಲಿಯೂ ಅಡೆತಡೆ ಉಂಟಾಗಿಲ್ಲ.
" ಭಾವಕ್ಕೆ ಅನುಗುಣವಾದ ಭಾಷೆ; ಮಾತಿಗೊಂದು ಮಾರ್ಮಿಕ ಗಾದೆ.
ಹಸಿಗೋಡೆಯಲ್ಲಿ ಹರಳು ಇಟ್ಟಂತೆ. ಒಂದೊಂದು ನಾಣ್ಣುಡಿಗೆ ಒಂದೊಂದು
ದೃಷ್ಟಾಂತ. ಕವಿಯ ನುಡಿಗೆ ಹುಸಿ ಎಂಬುದೇ ಇಲ್ಲ " (ಡಾ. ಎಂ. ಎಸ್.

xxix