ವಿಷಯಕ್ಕೆ ಹೋಗು

ಪುಟ:ಶತಕ ಸಂಪುಟ.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೬
ಶತಕ ಸಂಪುಟ


ಕೊಲುತಿರ್ಪಯ್ಯಗಳೋದು ಬೇನೆಯಳಿವಾ ತೀಕ್ಷ್ಣೌಷಧಂ ಪಾಡುಬಿ
ದ್ದುಳುವಾರಂಬದ ಧಾನ್ಯ ಶತ್ರುಜಯ ಪುತ್ರೋತ್ಪತ್ತಿ ಕೈಗಿಕ್ಕುವಾ
ಬಳೆ ರಾಜಾಶ್ರಯಮಶ್ವಲಾಭದ ಧನಂ ಬೇಹಾರಮಿಂತೆಲ್ಲಮುಂ
ಪಲಕಷ್ಟಂ ಕಡೆಗೊಳ್ಳಿತೈ ಹರಹರಾ ಶ್ರೀ ಚೆನ್ನಸೋಮೇಶ್ವರಾ
‖ ೨೫ ‖

ತೆರವಂ ಕಾಣದ ಬಾಳ್ಕೆಯಲ್ಪಮತಿ ಕ್ಷುದ್ರಾರಂಭಮಲ್ಪಾಶ್ರಯಂ
ಕಿರುದೋಟಂ ಕಡೆವಳ್ಳಿ ಬೀಳುವನೆ ಮುಂಗೈಯಾರ್ಭಟಂ ಸಾಲದಾ
ದೊರೆಕಾರ್ಯ೦ ಘೃತಮಿಲ್ಲದೂಟದ ಸುಖಂ ಮುಗ್ಧಾಂಗನಾ ಸಂಗಮುಂ
ಬರಿಗೈಯಂ ಸುರಿದಂತೆಲೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೨೬ ‖

ತರಮಂ ಕಾಣದ ತಾಣದಲ್ಲಿ ಕಪಟಂಗಳ್ ಮಾಳ್ಪರಿರ್ಪಲ್ಲಿ ನಿ-
ಷ್ಠುರ ಭಾಷಾನೃಪನಲ್ಲಿ ನಿಂದೆ ಬರಿದೇ ಬರ್ಪಲ್ಲಿಯನ್ನೋದಕಂ
ಕಿರಿದಾದಲ್ಲಿ ರಿಪುವ್ರಜಂಗಳೆಡೆಯೊಳ್ ದುಸ್ಸಂಗ ದುರ್ಗೋಷ್ಠಿಯ-
ಲ್ಲಿರಿಸಲ್ಲಿರ್ದೊಡೆ ಹಾನಿಯೈ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೨೭ ‖

ಸುಡು ಸೂಪಂ ಘೃತಮಿಲ್ಲದೂಟವ ಪರಾನ್ನಾಪೇಕ್ಷೆಯಾ ಜಿಹ್ವೆಯಂ
ಸುಡು ದಾರಿದ್ರ್ಯದ ಬಾಳ್ಕೆಯಂ ಕಪಟಕೂಟಂ ಮಾಳ್ಪ ಸಂಗಾತಿಯಂ
ಸುಡು ತಾಂಬೂಲವಿಹೀನ ವಕ್ಕ್ರವ ಪರಸ್ತ್ರೀ ನೋಡುವಾ ಕಣ್ಗಳಂ
ನುಡಿಯಿಂ ತಪ್ಪುವ ರಾಜನಂ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೨೮ ‖

ಉಣದಿರ್ಪಾ ಧನಮಿರ್ದೊಡೇನು ಸುತನಿರ್ದೇಂ ಮುಪ್ಪಿನಲ್ಲಾಗದಾ
ಒಣಗಲ್ ಪೈರಿಗೆ ಬಾರದಿರ್ದ ಮಳೆ ತಾಂ ಬಂದೇನದಾಪತ್ತಿನೋಳ್
ಮಣಿದುಂ ನೋಡದ ಬಂಧುವೇತಕೆಣಿಸಲ್ ಕಾಲೋಚಿತಕ್ಕೈದಿದಾ
ತೃಣವೇ ಪರ್ವತವಲ್ಲವೇ ಹರಹರಾ ಶ್ರೀಚೆನ್ನಸೋಮೇಶ್ವರಾ
‖ ೨೯ ‖

ಮಳೆಯಲ್ಲಿಕ್ಕಿದ ಜೇನು ಶೂದ್ರ ಕಲಿತಿರ್ಪಾ ವಿದ್ಯೆಯುಚ್ಚಿಷ್ಟಮಾ-