ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦ ಕರ್ಣಾಟಕ ಕಾವ್ಯಕಲಾನಿಧಿ ಶಕುಂತಲೆ, ಈ ರಾಯಂಗೆ ನಾವು ಹೇಳತಕ್ಕ ವಾಕ್ಯವಂ ಪೇಳಿದಾಗ್ಯೂ ಈ ರಾಯನು ಈ ಪ್ರಕಾರವಾಗಿ ವಕ್ರವಾಕ್ಯವಂ ನುಡಿಯುತಿರುವನಾದ್ದಂ ನೀನು ಗುರುತಿನ ಮಾತಿರ್ದಲ್ಲಿ ಅ50 ಪೇಳಬಹುದು ಎನ್ನಲು ; ಆ ಶಕುಂತಲೆಯು. ಆಪ್ರಕಾರವಾಗಿರ್ದ ಅನುರಾಗವೇ ಈ ಅವಸ್ಥೆಯಾ ದಲ್ಲಿ ಗು” ತಿನ ವಾಕ್ಯದಿಂ ಫಲವೇನು? ಎನ್ನ ಶರೀರವು ಅತಿ ದುಃಖಕ್ಕೆ ಪಾತ್ರವಾ ದುದು” ಎಂದು ತನ್ನ ಮನದಲ್ಲಿ ಆಲೋಚನೆಯಂ ಗೆಯ್ಯು ರಾಯನಂ ಕು ತು41 ಎಲೈ ಆರ್ಯಪುತ್ರನೇ ಎಂದು ಅರ್ಧವಚನವಂ ಪೇಳೆ- ವಿವಾಹವಾಗಿರುವುದೇ ಸಂದೇಹವಾಗಿರುವಲ್ಲಿ ಆರ್ಯಪುತ್ರನೆಂದು ಕರೆಯುವ ಸಂಪ್ರದಾಯವು ಹಾಗಿರಲಿ' ಎಂದು ನುಡಿದು, ಮರಳಿ, ಪುರುವಂಶದಲ್ಲಿ ಹುಟ್ಟಿದ ರಾಯನೇ, ಕೇಳು. ಪೂರ್ವದಲ್ಲಿ ನಮ್ಮ ತಪೋವನಕ್ಕೆ ಬಂದಿರ್ದಾಗ್ಗೆ ಸ್ವಭಾವವ್ಯಾಕುಲಚಿತ್ತಳಾದ ಎನ್ನ೦ ನಿನ್ನ ಗರ್ಭ ದಲ್ಲಿ ಹುಟ್ಟಿದ ಪುತ್ರನಿಗೆ ಸಮಸ್ತ ರಾಜ್ಯಕ್ಕೆ ದೊರೆಯನ್ನಾಗಿ ಮಾಡುವೆನೆಂ ತಲೂ, ಬಹುಜನ ಸ್ತ್ರೀಯರಿದ್ದರೂ ನೀನೇ ಎನಗೆ ಪ್ರೇಮ ಪಾತ್ರಳಾದ ಪಟ್ಟದ ಸ್ತ್ರೀ ಯಾಗುವೆಯೆಂತಲೂ, ಇನ್ನು ನಾನಾಪ್ರಕಾರವಾದ ವಾಕ್ಯಗಳಿ೦ ವಂಚಿಸಿ, ಈಗ ವಿವಾಹವಾದುದೇ ಆಪದ್ದ ವೆಂಬ ನಿಷ್ಟುರವಾಕ್ಯದಿಂ ನಿರಾಕರಿಸುವುದು ನಿನಗೆ ಯುಕ್ತ ಮಲ್ಲ ! ” ಎನಲು; ರಾಯನು ಶಕುಂತಲೆಯಾಡಿದ ವಾಕ್ಯವಂ ಕೇಳಿ ಇವಳ ವಾಕ್ಯದಿಂ ಪುಟ್ಟಿದ ಪಾಪವು ಶಾಂತವಾಗಲೆಂದು ತನ್ನ ಕಿವಿಗಳಂ ಮುಚ್ಚಿ, ಅವಳಂ ಕು ತು_ಎಲ್‌ ಶಕುಂತಲೆಯೇ, ತೀರಂಗಳಂ ಮೀಜಿ ಹರಿಯುವ ನದಿಯು ನಿರ್ಮಲವಾಗಿರ್ದ ಜಲವಂ ಕೆಸುಗೆಯು ಬೇರು ಸಹಿತವಾಗಿ ತೀರವೃಕ್ಷಗಳಂ ಹೇಗೆ ನಾಶವಂ ಪೊಂ ದಿಸುತಿರುವದೋ, ಅದಂತೆ ನೀನು ಪುರುವಂಶದಲ್ಲಿ ಪಟ್ಟಿದವರು ಪರಸ್ತ್ರೀಯರಂ ಸ್ಮರಿಸತಕ್ಕವರು ಎಂಬ ಪ್ರಸಿದ್ದಿ ಕೆಡಿಸುವುದಕ್ಕೋಸುಗವೂ ಎನ್ನ೦ ದುಷ್ಟನೆಂದೆನಿ ಸುವದಕ ಏನು ಯೋಚನೆಯಂ ಗೈದೆ ! ” ಎಂದು ನುಡಿಯಲು : ಶಕುಂತಲೆಯು-- ಎಲೈ ರಾಯನೇ, ಆದರೂ ಚಿಂತೆಯೇನು? ಯಥಾರ್ಥ ಮಾಗಿ ಪರಸ್ತ್ರೀಯರು ಮುಟ್ಟ ತಕ್ಕನಲ್ಲ ಎನೆಂದು ನುಡಿಯುತ್ತಿರುವೆಯಷ್ಟೆ. ನೀನು ಕೊಟ್ಟಿರುವ ಗುಹುತಿನ ಉಂಗುರದಿ೦ ನಿನ್ನ ಸಂಶಯವಂ ವೋಗಲಾಡಿಸುವೆನು ?” ಎನ್ನು ; ರಾಯನು 1 ಎಲ್ ಸ್ತ್ರೀಯೇ, ಈ ವಾಕ್ಯಮಂ ಯುಕ್ತವಾಗಿ ಹೇಳಿದೆ. • ಮುಳಿಯಂ 'ಸು' ಎಗ್ಯ;