ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೭ -ಶಾಕುಂತಲನಾಟಕ ನವೀನಟೀಕೆ ಆಸಕ್ತರಾಗಿರುವರಲ್ಲದೆ, ಪರಸ್ತ್ರೀಯರ ಆಲಿಂಗನ ಚುಂಬನಾದಿಗಳಲ್ಲಿ ಸ್ವಲ್ಪಮಾ ದರೂ ಅಭಿಲಾಷೆಯಿಲ್ಲದೆ ಪರಾಲ್ಮುಖವಾದ ವ್ಯಾಪಾರವುಳ್ಳವರು ” ಎಂದು ನುಡಿಯಲು; ಶಾಜ್ ೯ರವನು- ಎಲೈ ವಂಚಕನಾದ ರಾಯನೇ ಕೇಳು. ಪೂರ್ವದಂತೆ ಶಕುಂತಲೆಯೊಡನೆ ಮಾಡಿದ ಗಾಂಧರ್ವವಿವಾಹ ಮೊದಲಾದ ಕಾರವಂ ಅನ್ಯ ಯರ ಸಂಭೋಗದಿಂ ಮರೆತು ಇವಳು ಎನ್ನ ಪತ್ನಿ ಯಲ್ಲ ವೆಂದು ಹೇಳುತ್ತಿರುವೆಯೋ ಆಗಲೆ ನೀನು ಮಹಾಪಾಪಾತ್ಮನೆಂಬುವುದು ತಿಳಿದಿರುವೆನು ಎಂದು ನುಡಿಯಲು; ರಾಯನು ಆ ನಿಷ್ಟುರವಾಕ್ಯವಂ ಕೇಳಿ, ( ಎಲೈ ಋಷಿಯೇ, ನಾನು ಪೇ ಳುವ ವಾಕ್ಯಗಳಿಗೂ ಈ ಶಕುಂತಲೆಯು ಪೇಳಿದ ವಾಕ್ಯಗಳಿಗೂ ಗೌರವಲಾಘ ಮಂಗಳಂ ಈಗ ನಿನ್ನನ್ನೇ ಕೇಳುವೆನು. ಹೇಗಂದರೆ-ಪೂರ್ವದಲ್ಲಿ ಈ ಶಕುಂತಳೆ ಯೊಡನೆ ಗಾಂಧರ್ವವಿವಾಹ ಮೊದಲಾದ ಕಾವ್ಯಗಳಂ ಮಾಡಿ ಈಗ ಮರೆತು ಮಢನಾಗಿರುವೆನೋ, ಅಲ್ಲದೆ ಈಗ ಸಂಶಯವು ಪ್ರಾಪ್ತವಾದುದಕ'ಂದ ಈ ಶಕುಂತಲೆಯು ತನ್ನ ಕಾರವಂ ಗೆಲ್ಲುವುದ ಕ್ರೋಸುಗ ಅನ್ನ ತವಂ ಪೇಳುತ್ತಿರುವ ಪೇಳು ಮತ್ತು ಜ್ಞಾನಶೂನ್ಯನಾಗಿ ಮೊದಲು ಮಾಡಿದ ಕಾಠ್ಯವಂ ಮಾತು ಈ ಶಕುಂತಲೆಯಂ ತಿರಸ್ಕರಿಸಿದೆನಾದರೆ ಪತ್ನಿ ಪರಿತ್ಯಾಗದಿಂ ಮಹಾಪಾಪವು ಸಂಭ ವಿಸುತ್ತಿರುವುದು. ಅದಲ್ಲದೆ ಇವಳು ಸುಳ್ಳು ಮಾತುಗಳಂ ಪೇಳಲು ಆ ವಾಕ್ಯಕ್ಕೆ ಒಪ್ಪಿ ಇವಳಂ ಪತ್ನಿಯನ್ನಾಗಿ ಮಾಡಿಕೊಂಡೆನಾದರೆ ಪರಸ್ತ್ರೀಯರ ಸಂಗದಿಂ ಮ ಹಾಪಾತಕಿಯಾಗುವೆನು. ಇದಕ್ಕೇನುತ್ತರವಂ ಪೇಳುವೆನು ?” ಎನಲು, ಆ ವಾಕ್ಯಕ್ಕೆ ಶಾಜ್ರವನು ಬಹು ಚನ್ನಾದುದೆಂದು ಉತ್ತರವಂ ಪೇಳಲೋ ಸುಗ ಆಲೋಚನೆಯಂ ಗೆಯ್ಯುತ್ತಿರಲು; ಆಷ್ಟರಲ್ಲೇ ಆ ರಾಯನ ಪುರೋಹಿತನು ಇವರೆಲ್ಲರೂ ಹೇಳುತ್ತಿರುವ ವಿವಾದವಾಕ್ಯವಂ ಕೇಳುತಿರ್ದು ರಾಯನಂ ಕು” ತು- ಎಲೈ ಮಹಾರಾ ಜನೇ, ನಾನು ಹೇಳಿದ ಪ್ರಕಾರಕ್ಕೆ ಮಾಡಲು ಯುಕ್ತವಾಗಿ ತೋಳುವುದು ? ಎನ್ನ ಲು; ರಾಯನು... ಎಲೈ ಪರೋಹಿತರೇ, ಎನ್ನ ಪಾಪ ಪುಣ್ಯಕ್ಕೆ ನೀವು ಬಾಧ್ಯ ರಾದ್ದ ೫೦ ಹೇಗೆ ಅಪ್ಪಣೆಯನ್ನೀಯುತ್ತಿರುವಿರೋ ಆ ಪ್ರಕಾರವಾಗಿ ನಡೆದು ಕೊಳ್ಳುವೆನು ” ಎಂದು ನುಡಿಯಲು; ಆ ಪುರೋಹಿತನು- ಅಯ್ಯಾ ರಾಯನೇ ಈ ಶಕುಂತಲೆಯು ಗರ್ಭಿಣಿ