ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೬ -ಕರ್ಣಾಟಕ ಕಾವ್ಯಕಲಾನಿಧಿ ಶಕುಂತಲೆಯ ಭಾವಚಿತ್ರದ ಪಠವಂ ತರುವುದು ' ಎಂದು ಆಜ್ಞೆ ಯನಿತ್ತು ಬಂದಿರು ವೆಯಷ್ಟೆ. ಈಗ ಆ ಮಾಧವೀಮಂಟಪಕ್ಕೆ ಬಿಜಯಂಗೆಯಬಹುದು ' ಎಂದು ಬಿನ್ನ ಯಿಸಿ, ಮುಂದುಗಡೆಯಲ್ಲಿ ಮಾರ್ಗವಂ ತೋರಿಸುತ್ತ ಬರಲು; ಸಾನುಮತಿಯು ಅದೃಶ್ಯಳಾಗಿ ರಾಯನನ್ನು ಅನುಸರಿಸಿ ಬರುತ್ತಿರಲು: ವಿದೂಷಕನು- ಎಲೈ ಮಹಾರಾಜನೆ, ಈಯದ್ದಿದ ರತ್ನಶಿಲೆಗಳಿಂದೊಪ್ಪತ, ಪಷ್ಟವಾಸನೆಗೆ ಮೊರೆದೆಲಗುವ ಮಿ ದುಂಬಿಗಳ ಗಾನಸ್ವರದಿಂ ಬಾಗಿರುವ ಪೂ ಗೊಂಚಲುಗಳಲ್ಲಿ ಕುಳಿತು ತೂಗಾಡುವ ಶುಕ ಷಿಕ ಮೊದಲಾದ ಪಕ್ಷಿಗಳ ಕಲಕಲ ಧ್ವನಿಗಳಿಂ ಭರಿತವಾಗಿ ಶೀತೋಪಚಾರಕ್ಕೆ ರಮಣೀಯವಾಗಿರುವ ಈ ಮಾಧವೀ ಮಂಟಪವಂ ಪ್ರವೇಶವಂ ಗೆಯ್ದು ಸಂತೋಷದಿಂ ಕುಳಿತುಕೊಂಡಿರಬಹುದು" ಎಂದು ರಾಯನನೊಡಗೊಂಡು ಆ ಮಂಟಪದಲ್ಲಿ ಕುಳಿತು ಕೊಳ್ಳಲು ; ಸಾನುಮತಿಯು ಬಳ್ಳಿಗಳ ಮ«ತೆಗೊಂಡು, ಎನ್ನ ಸ್ನೇಹಿತಳ ಪುತ್ರಿ ಯಾದ ಶಕುಂತಲೆ ಯ ಒರೆದಿರುವ ಭಾವಚಿತ್ರಪಟವಂ ನೋಡಿ, ಅವಳಲ್ಲಿರುವ ಜನಾಧಿಪನಾದ ಈ ದುಷ್ಯಂತರಾಯನ ಅಭಿಮತವಾದ ಅನುರಾಗದ ಪರಿಯನ್ನ ಅದು ಪೋಗಿ, ಆ ಮೇನಕೆಗೆ ವಿತರಿಸುವೆನು ?' ಎಂದು ಸವಿ ಸವಂ ನಿರಿ, ಮ¥ತಿಯಾಗಿ ನೋಡುತ್ತಿರಲು; ರಾಯನು-'ಎಲೈ ಸ್ನೇಹಿತನೇ, ಈಗ ಆ ಶಕುಂತಲೆಯೊಡನೆ ಕಣ್ಣಾಶ್ರ ಮದಲ್ಲಿ ಮೊದಲು ಮಾಡಿದ ಶೃಂಗಾರಚೇಷ್ಟೆ ಯ ವೃತ್ತಾಂತವಂ ಸ್ಮರಿಸಿಕೊಳ್ಳು, ವೆನು. ನಿನ್ನ ಸಂಗಡ ಅವಳ ಸಂಗತಿಯಂ ಪೇಳಿರ್ದೆನು. ಆದರೂ ಆ ಶಕುಂತ ಲೆಯಂ ಸಭಾಮಧ್ಯದಲ್ಲಿ ತಿರಸ್ಕಾರವಂ ಗೆಯ್ಯುವ ಕಾಲದಲ್ಲಿ ನೀನು ಎನ್ನ ಸವಿ ಪದಲ್ಲಾದರೂ ಇದ್ದು ಕೊಂಡು ಎನಗೆ ಸಂಶಯ ಬಂದ ವೇಳೆಯಲ್ಲಿ ಜಪ್ತಿಯ ಗದೆ ನಾನು ಮತ್ತೆ ತಂತೆ ನೀನೂ ಮರೆತು ಪೋದೆ ಎಂದು ನುಡಿಯಲು; ವಿದೂಷಕನು( ಅಯ್ಯಾ ರಾಯನೇ, ನಾನು ಮರೆಯಲಿಲ್ಲ. ನಾನು ಪ್ರತಿಷ್ಠಾನಪಟ್ಟಣಕ್ಕೆ ಪೂಜೆ ಮಟ್ಟು ಬರುವಾಗ್ಗೆ ನೀನು ಎನ್ನೊ ಡನೆ ಶಕುಂತ ಲೆಯ ವೃತ್ತಾಂತವೆಲ್ಲ ವಂ ಪೇಳಿ,-ಎಲೈ ಮಿತ್ರನೇ, ಈಗ ನಾನು ಎನೋದಕ್ಕೂಸು ಗಮಾಗಿ ಈ ವಾರ್ತೆಯಂ ಸೇಳಿರುವೆನು, ಇದಂ ಯಥಾರ್ಥವನ್ನಾಗಿ ತಿಳಿಯದಿರು ಎಂದು ಕಣ್ಣಾಶ್ರಮದಲ್ಲಿ ಹೇಳಿದೆಯಷ್ಟೆ. ಮೃಪ್ಪಿಂಡದಂತೆ ಮಂದಮತಿಯಾದ ನಾನು ನೀನು ಹೇಳಿದ ಶಕುಂತಲೆಯ ವಾರ್ತೆಯೆಲ್ಲ ವಂ ವಿನೋದಕ್ಕೆ ನುಡಿದೆಯೆಂದೇ ತಿಳಿದೆನು. ಅದರ ಮುಂದಾಗತಕ್ಕೆ ಕಾರ್ಯವು ಒವತ್ತರವಾಗಿರುವುದು.