ಪುಟ:ಶಾಕುಂತಲ ನಾಟಕ ನವೀನ ಟೀಕೆ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

--ಶಾಕುಂತಲನಾಟಕ ನವೀನಟೀಕೆ ೧೪n ರಾಯನು ಮರಳಿ ಆ ಉಂಗರವಂ ನೋಡುತ್ತ ವಿರಹ ಹೆಚ್ಚಿನ ಎಲೆ ಮಿತ್ರನೇ, ಈ ಉಂಗರದ ವೃತ್ತಾಂತವಂ ಚೆನ್ನಾಗಿ ತಿಳಿದೆಯ? ಎಂದು ನುಡಿಯಲು; ದೂಷಕನು ರಾಯ-ನಾಡುವ ವಾಕ್ಯವಂ ಕೇಳಿ, ಅವನ ಚೇಷ್ಟೆಗಳಂ ನೋಡಿ- ಈ ರಾಯನು ಹುಚ್ಚರ ವರ್ಗ ವನ್ನನುಸರಿಸಿದನು. ಇನ್ನು ಮಾಡತಕ್ಕು ದೇನೆಂದು, ತನ್ನ ಮನದಲ್ಲಿ ಯೋಚಿಸುತ್ತಿರಲು; ರಾಯನು ಮರಳಿ ಆ ರತ್ನ ಮುದ್ರಿಕೆಯಂ ಕುಳತು- ಎಲೆ ಮುದ್ರಿ ಕೆಯೇ, ಸುಂದರಾಂಗಿಯಾಗಿ ಮೃದುವಾದ ಬೆರಳಿನಿಂ ಕೂಡಿಯಿರುವ ಎನ್ನ ಕಾಂತ ೪ಾದ ಶಕುಂತಲೆಯ ಕರವಂ ಬಿಟ್ಟು ಜಲದಲ್ಲಿ ಹೇಗೆ ಮುಳುಗಿದೆ? ” ಎಂದು ನುಡಿದು, ಅಷ್ಟೇ ಅಲ್ಲೇ, ಈ ಉ೦ಗರವಾದರೋ ನಿರ್ಜೀವಿಯಾಗಿರುವುದು, ಆದ್ದeಿ೦ದ ಅದಲಿ ಗುಣಂಗಳೆ೦ ನಿಂದಿಸಲಾಗದು. ಸಜೇವನಾಗಿ ಸಮಸ್ತ ಧರ್ಮ ಗಳಂ ತಿಳಿಯುತ್ತಾ, ದೊರೆಯೆನಿಸಿಕೊಂಡು ಇರುವ ನಾನು ಪ್ರಿಯಳಾದ ಶಕುಂತ ಲೆಯಂ ಪತ್ನಿ ಯಲ್ಲವೆಂದು ತಿರಸ್ಕಾರವಂ ಮಾಡಿರುವೆನಾದ್ದ ೪೦ ಎನ್ನ ಗುಣ ಗಳಂ ಚೆನ್ನಾಗಿ ನಿಂದಿಸಬೇಕು ಎಂದು ನುಡಿಯುತ್ತಿರಲು; ವಿದೂಷಕನು - ಈ ರಾಯನು ಮನಬಂದಂತೆ ಮಾತುಗಳನ್ನಾಡುತ್ತಿಲ್ಲ ಎನ್ನ ನೆಲ್ಲಿಯ ಪೋಗಲಿ?ಸನು, ಕುದ್ರಾಧೆಯು ಎನ್ನ೦ ಭಕ್ಷಿಸುತ್ತಿರುವುದು. ಇದನ್ನಾ ಡುವುದಕ್ಕೂ ಅನುಭವಿಸುವುದ - ಆಗದೆ ಇರುವುದು ಎಂದು ತನ್ನ ಮನದಲ್ಲಿ ಆಲೋಚಿಸುತ್ತಿರಲು; ರಾಯನು- ಎಲೈ ಮಿತ್ರನೇ, ಅಕಾರಣವಾಗಿ ಮಾಡಿದ ಶಕುಂತಲೆಯ ತಿರಸ್ಕಾರದಿಂ ಪಟ್ಟಿರುವ ಪಶ್ಚಾತ್ತಾಪದಿಂ ಯುಕ್ತವಾದ ಮನಸ್ಸುಳ್ಳ ಎನ್ನ೦ ಆ ಶಕುಂತಲೆಯ ದರ್ಶನವು ಬೆಯಿಸಿ ಸಂರಕ್ಷಿಸು ” ಎಂದು ನುಡಿಯುತ್ತಿರಲು , ಅಷ್ಟಲ್ಲೇ ಚತುರಿಕೆಯೆಂಬ ಸ್ತ್ರೀಯು ಶಕುಂತಲೆಯ ಭಾವಚಿತ್ರಪಟವಂ ತೆಗೆದುಕೊಂಡುಒಂದು, «« ಇದೇ ನಮ್ಮ ದೇವಿಯಾದ ಶಕುಂತಲೆಯ ಭಾವಚಿತ್ರ ಫಲಕವು ಎಂದು ತೋ' ಸುತಿರ್ದಳು. ಎಂಬಲ್ಲಿಗೆ ಕೃಷ್ಣರಾಜಕಂಠೀರವರು ರಚಿಸಿದ ಕೃಷ್ಣರಾಜವಾಣೀವಿಲಾಸ ರತ್ನಾಕರ ವೆಂಬ ಶಾಕುಂತಲನಾಟಕ ಟೀಕಿನಲ್ಲಿ ದುಷ್ಯಂತರಾಯನು ವಿರಹದಿಂ ಉನ್ಮದಾವಸ್ಥೆಯಂ ಪೊಂದಿರ ಲು, ಚತುರಿಕಯು ಶಕುಂತಲೆಯ ಭಾವಚಿತ್ರವಂ ತಗೆದುಕೊಂಡು ರಾಯನ ಹೊರೆಗೆ ಬಂದಳೆಂಬ ಚತುರ್ಥಕಲ್ಲೋಲದಲ್ಲಿ ದ್ವಿತೀಯ ತರಂಗಂ ಸಂಪೂಣ೯೦. -- -